Featured
ಭೂ ಸುಧಾರಣಾ ಕಾಯ್ದೆಗೆ ಸಿದ್ಧರಾಮಯ್ಯ ವಿರೋಧ- BJP ಅಜೆಂಡಾ ವಿರುದ್ಧ ಮಾಜಿ ಮುಖ್ಯಮಂತ್ರಿ ಕಿಡಿ
![](https://risingkannada.com/wp-content/uploads/2020/07/SIDDARAMAIAH.jpg)
ರೈಸಿಂಗ್ ಕನ್ನಡ:
ಬೆಂಗಳೂರು:
ರಾಜ್ಯ ಸರ್ಕಾರ ಜಾರಿಗೆ ತರಲು ಉದ್ದೇಶಿರುವ ಭೂ ಸುಧಾರಣಾ ಕಾಯ್ದೆಗೆ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಬಡವರ ಹೊಟ್ಟೆ ಮೇಲೆ ಕಲ್ಲುಹಾಕುವ, ಸಣ್ಣ ರೈತರನ್ನು ಬೀದಿಗೆ ತಳ್ಳುವ ಈ ಭೂ ಸುಧಾರಣಾ ಕಾಯ್ದೆಯನ್ನು ಜಾರಿ ಮಾಡಬಾರದು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಭೂ ಸುಧಾರಣಾ ಕಾಯ್ದೆಯಿಂದ ಅಂಬಾನಿ, ಅದಾನಿಯಂತಹವರಿಗೆ ಲಾಭವೇ ಹೊರತು ಕೃಷಿಕರಿಗಲ್ಲ ಎಂದು ಸಿದ್ಧರಾಮಯ್ಯ ಹೇಳಿದ್ದಾರೆ.
![](https://risingkannada.com/wp-content/uploads/2020/07/FULL-PLATE-10-1024x576.png)
ಈ ಹಿಂದೆ ಒಟ್ಟು 118 ಎಕರೆ ಖುಷ್ಕಿ ಜಮೀನು ಇಟ್ಟುಕೊಳ್ಳಬಹುದಿತ್ತು. ಈಗ ಅದನ್ನು 436 ಎಕರೆ ಮಾಡಿದ್ದಾರೆ. ಕರ್ನಾಟಕದಲ್ಲಿ 82 ಲಕ್ಷ ರೈತ ಕುಟುಂಬ ಇದೆ. ಸರಿಸುಮಾರು 4 ಕೋಟಿ ರೈತರಿದ್ದಾರೆ. ಭೂ ಸುಧಾರಣಾ ಕಾಯ್ದೆ ಜಾರಿಗೆ ಬಂದರೆ ಇವರೆಲ್ಲಾ ಹೋಗಿ ಕಾರ್ಪೊರೇಟ್ ಬಾಡಿಗಳಿಗೆ ಜಮೀನು ಮಾರುತ್ತಾರೆ. ಇದರಿಂದ ಆಹಾರದ ಸ್ವಾವಲಂಬನೆ ನಾಶ ಆಗುತ್ತದೆ. ಹಿಂದೆ ಒಬ್ಬರಿಗೆ ಒಂದು ವೃತ್ತಿ ಇರಬೇಕು ಎಂಬ ಉದ್ದೇಶ ಇತ್ತು. ಈಗ ಭೂ ಸುಧಾರಣಾ ಕಾಯ್ದೆ ಜಾರಿಗೆ ತಂದು ಯಾರು ಬೇಕಾದರೂ ಕೃಷಿ ಮಾಡಬಹುದು ಎಂದು ಮಾಡಿದ್ದೀರಿ. 1961ರ ಆ್ಯಕ್ಟ್ ಅನ್ನು ತೆಗೆದುಹಾಕಲಾಗಿದೆ ಎಂದು ಸಿದ್ಧರಾಮಯ್ಯ ಕಿಡಿಕಾರಿದರು.
ಭೂ ಸುಧಾರಣೆ ಕಾಯ್ದೆಯಿಂದ ಉಳ್ಳವನೇ ಭೂಮಿ ಒಡೆಯ ಆಗುತ್ತಿದ್ದಾನೆ. ಭೂಮಿಯನ್ನು ವ್ಯವಸಾಯ ಮಾಡಲು ಮಾತ್ರ ಖರೀದಿ ಮಾಡಬೇಕು ಎಂದು ಎಲ್ಲೂ ಹೇಳಿಲ್ಲ. ಈಗಾಗಲೇ ಬೆಂಗಳೂರು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಫಾರ್ಮ್ ಹೌಸ್ ಮಾಡಿದ್ದಾರೆ. ಅಲ್ಲಿ ಕಬ್ಬು,ರಾಗಿ, ಭತ್ತ ಬೆಳೆಯುತ್ತಿಲ್ಲ. ಎಲ್ಲವೂ ಕಾಂಕ್ರಿಟ್ ಮಯವಾಗಿ ವ್ಯವಹಾರಿಕವಾಗಿದೆ ಎಂದು ಸಿದ್ಧರಾಮಯ್ಯ ಗುಡುಗಿದ್ರು.
ರಾಜ್ಯದಲ್ಲಿ ಭೂ ಸುಧಾರಣೆ ಕಾಯ್ದೆ ಜಾರಿ ಮಾಡುವ ಹಿಂದೆ ನರೇಂದ್ರ ಮೋದಿ ಅವರ ಸರ್ಕಾರದ ಕುಮ್ಮಕ್ಕು ಇದೆ. ಇದು ಹಿಡನ್ ಅಜೆಂಡಾ, ಸರ್ಕಾರಿ ಸ್ವಾಮ್ಯದಲ್ಲಿ ಇದ್ರೆ ಮೀಸಲಾತಿ ನೀಡಬೇಕಾಗುತ್ತದೆ. ಮೀಸಲಾತಿ ತೆಗೆದು ಹಾಕಿದ್ರೆ ಪ್ರತಿರೋಧ ಬರುತ್ತದೆ. ಅದಕ್ಕೆ ಹಿಂಬಾಗಿಲಿನ ಮೂಲಕ ಮಾಡಿ, ಮತ್ತೆ ಜಮೀನ್ದಾರಿ ಪದ್ಧತಿ, ಜಾಹಗೀರ್ದಾರ್ ಪದ್ದತಿ ಬರುವಂತೆ ಮಾಡಲು ಪ್ಲಾನ್ ಮಾಡಲಾಗಿದೆ ಎಂದು ಸಿದ್ಧರಾಮಯ್ಯ ತಿಳಿಸಿದರು.
You may like
ಶಿವರಾಜ್ಕುಮಾರ್ ಬ್ಯಾಂಕ್ ಬ್ಯಾಲೆನ್ಸ್ ಎಷ್ಟು ಕೋಟಿ ಸಾಲ ಗೊತ್ತಾ..?
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಕೆ. ಸುಧಾಕರ್ ಅವರ ಪ್ರವಾಸದ ವಿವರ ಏಪ್ರಿಲ್ 16, 2024
50 ವರ್ಷ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲ್ಲ: ಚಿಕ್ಕಬಳ್ಳಾಪುರ ಎನ್ಡಿಎ ಅಭ್ಯರ್ಥಿ ಡಾ.ಕೆ.ಸುಧಾಕರ್
ನಿರ್ಧರಿಸಿದೆ ದೊಡ್ಡಬಳ್ಳಾಪುರ ಮತ್ತೊಮ್ಮೆ ಮೋದಿ ಸರ್ಕಾರ
ಬಿಜೆಪಿ ಗೆದ್ರೆ ದೇಶವೇ ಇರಲ್ಲ: ಮಗನ ವಿರುದ್ಧ ತಿರುಗಿಬಿದ್ದ ಅಪ್ಪ.!
ಮಠಗಳಿಗೆ ಭೇಟಿ ನೀಡಿ ಪೂಜ್ಯರ ಆಶೀರ್ವಾದ ಪಡೆದ ಡಾ.ಕೆ.ಸುಧಾಕರ್