Featured
ಕೋವಿಡ್ ಆಸ್ಪತ್ರೆಯಲ್ಲಿ ಹುಟ್ಟುಹಬ್ಬದ ಸಂಭ್ರಮ-ಕೊರೊನಾ ವಾರಿಯರ್ಗೆ ವಿಶೇಷ ಗೌರವ

ರೈಸಿಂಗ್ ಕನ್ನಡ:
ಹರೀಶ್, ರಾಮನಗರ:
ಕೋವಿಡ್ ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬುವ ಮಾನವೀಯ ಹಾಗೂ ಅಪರೂಪದ ಘಟನೆ ರೇಷ್ಮೆನಗರಿ ರಾಮನಗರದಲ್ಲಿ ನಡೆದಿದೆ. ಕೋವಿಡ್ ಸೋಂಕಿತನ ಹುಟ್ಟು ಹಬ್ಬವನ್ನು ಕೋವಿಡ್ ಆಸ್ಪತ್ರೆಯಲ್ಲಿಯೇ ಕೇಕ್ ಕಟ್ ಮಾಡಿಸುವ ಮೂಲಕ ಆರೋಗ್ಯ ಇಲಾಖೆ ಮಾಡಿದೆ.
ಆರೋಗ್ಯ ಇಲಾಖೆಯ ನರ್ಸ್ ಯೊಬ್ಬರಿಗೆ ಕಳೆದ ವಾರ ಸೋಂಕು ಪತ್ತೆಯಾಗಿ, ಕೋವಿಡ್ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಇದಕ್ಕೂ ಮುನ್ನ ಆರೋಗ್ಯ ಇಲಾಖೆಯೊಂದಿಗೆ ಹಗಲಿರುಳು ಶ್ರಮಿಸಿದ್ದ ಇವರ ಹುಟ್ಟುಹಬ್ಬವನ್ನು ಆರೋಗ್ಯ ಇಲಾಖೆ ಸಿಬ್ಬಂದಿಗಳು ಕೇಕ್ ಕತ್ತರಿಸುವ ಮೂಲಕ ಆಚರಿಸಿ ಆತ್ಮ ಸ್ಥೈರ್ಯ ತುಂಬಿದ್ದಾರೆ.
ಇನ್ನುಳಿದ ಕೋವಿಡ್ ಸೋಂಕಿತರಿಗೂ ಆತ್ಮಸ್ಥೈರ್ಯ ತುಂಬುವ ಕೆಲಸ ಇದಾಗಿದೆ. ಪಿಪಿಇ ಕಿಟ್ ಧರಿಸಿ, ಡಿಎಚ್ಓ ಸೇರಿದಂತೆ ಇತರೆ ಸಿಬ್ಬಂದಿಗಳು ತಮ್ಮ ಇಲಾಖೆ ಸಿಬ್ಬಂದಿಯ ಹುಟ್ಟುಹಬ್ಬದ ಆಚರಣೆ ಮಾಡಿ ಮೂಲಕ ಮೆಚ್ಚುಗೆ ಸೂಚಿಸಿದ್ದು ವಿಶೇಷವಾಗಿತ್ತು. ಈ ಆಚರಣೆಯನ್ನು ಜಿಲ್ಲಾ ಪಂಚಾಯಿತಿ ಟ್ವೀಟ್ ಮೂಲಕ ಸಂಭ್ರಮಿಸಿದೆ.
You may like
ನನಸಾಗದ ಕನಸು ಅಗಲಿದ ಕೆ. ಶಿವರಾಮ್
ಕಾಂಗ್ರೆಸ್ ಸರ್ಕಾರ ಇರೋವರೆಗೂ ಗ್ಯಾರಂಟಿ ಯೋಜನೆಗಳು ನಿಲ್ಲಲ್ಲ : ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಹುಟ್ಟು ಹಬ್ಬದ ಸಂಭ್ರಮದಲ್ಲಿ ನಟಿ ಅದಿತಿ ಪ್ರಭುದೇವ..!
ಯಾದಗಿರಿಯಲ್ಲಿ ಕೊರೊನಾ ವಾರಿಯರ್ ಸಾವು: ಆರೋಗ್ಯ ಸಚಿವ ಶ್ರೀರಾಮುಲು ಸಂತಾಪ
ಕೊರೊನಾ ಪರೀಕ್ಷೆಗೆ ಅಂತಿಮ ಬಿಎಸ್ಸಿ ವಿದ್ಯಾರ್ಥಿಗಳನ್ನ ಬಳಸಿಕೊಳ್ಳಿ: 24 ಗಂಟೆಯಲ್ಲಿ ವರದಿ ಕೊಡಲು ಡಿಸಿಎಂ ಅಶ್ವತ್ಥ ನಾರಾಯಣ ಸೂಚನೆ
ಪ್ರತಿಷ್ಠಿತ ವಿದ್ಯಾಸಂಸ್ಥೆಯಿಂದ ಜಾಗ ಒತ್ತುವರಿ: ಆಡಳಿತ ಮಂಡಳಿ, ಮಾಲೀಕರ ಹಗ್ಗಜಗ್ಗಾಟದಲ್ಲಿ ವಿದ್ಯಾರ್ಥಿಗಳ ಭವಿಷ್ಯ ಅತಂತ್ರ