Connect with us

Featured

ಚೊಚ್ಚಲ ಚಿತ್ರದ ಬಗ್ಗೆ ರಾಗಿಣಿ ಚಂದ್ರನ್ ಮನದಾಳ – ಇದು ರೈಸಿಂಗ್ ಕನ್ನಡದ ಜೊತೆಗೆ “ಲಾ” ಪಾಯಿಂಟ್..!

ರೈಸಿಂಗ್ ಕನ್ನಡ :

ಸಂದರ್ಶನ : ಜೀವನ್, ಡೆಪ್ಯೂಟಿ ಎಡಿಟರ್

ರೈಸಿಂಗ್ ಕನ್ನಡ : ಹಾಯ್ ರಾಗಿಣಿ, ಮೊದಲನೆಯಾದಾಗಿ ಶುಭಾಶಯ. ನಿಮ್ಮ ಚೊಚ್ಚಲ ಚಿತ್ರದಲ್ಲೇ ಅನ್ಯಾಯದ ವಿರುದ್ಧ ಹೋರಾಟ ನಡೆಸುವಂತ ಪಾತ್ರದಲ್ಲಿ ಕಾಣಿಸಿಕೊಂಡಿದ್ದೀರಾ. ಹೇಗಿದೆ ನಿಮ್ಮ ಡ್ರೀಮ್ ಡೆಬ್ಯೂ..?

ರಾಗಿಣಿ ಚಂದ್ರನ್ : ಥ್ಯಾಂಕ್ಯೂ, ಇಂತ ಒಂದು ಅನ್ಯಾಯದ ವಿರುದ್ಧ ಹೋರಾಡೋ ಪಾತ್ರ ಸಿಕ್ಕಿರೋದು ತುಂಬಾನೆ ಖುಷಿ ವಿಚಾರ. ಎಲ್ಲಕ್ಕಿಂತ ಹೆಚ್ಚಾಗಿ ಮದುವೆ ಬಳಿಕ ನಟಿಯರು ಯಾರೂ ಕೂಡ ಅಷ್ಟಾಗಿ ಅಭಿನಯಿಸೋಕೇ ಇಷ್ಟಪಡೋಲ್ಲ, ಅಂತದ್ರಲ್ಲಿ ನಾನು ಮದುವೆ ಬಳಿಕವೇ, ನನ್ನ ಪದಾರ್ಪಣೆ ಚಿತ್ರವನ್ನ ಮಾಡಿದ್ದೇನೆ ಅದು ತುಂಬಾನೆ ಖುಷಿ ವಿಚಾರ.

Advertisement

ರೈಸಿಂಗ್ ಕನ್ನಡ : ಪಿಆರ್‌ಕೆ ಬ್ಯಾನರ್‌ನಲ್ಲಿ ಡೆಬ್ಯೂ ಮಾಡ್ತಿದ್ದೀರಾ. ಪುನೀತ್ ರಾಜ್‌ಕುಮಾರ್ ಮತ್ತು ಅಶ್ವಿನಿ ಪುನೀತ್ ರಾಜ್‌ಕುಮಾರ್ ನಿರ್ಮಾಣ ಸಂಸ್ಥೆಯಿಂದ ನಿಮ್ಮ ಚೊಚ್ಚಲ ಚಿತ್ರ ಅನ್ನೋದು ಎಷ್ಟು ಖುಷಿ ವಿಷ್ಯ..?

ರಾಗಿಣಿ ಚಂದ್ರನ್ : ಹೌದು, ನಿಜ… ಅಪ್ಪು ಸರ್ ಅಂದ್ರೆ ನಮಗೆ ಕುಟುಂಬದ ಹಾಗೆ. ಅಪ್ಪು ಅಣ್ಣ, ಅಶ್ವಿನಿ ಅಕ್ಕ ತುಂಬಾನೆ ಪ್ರೋತ್ಸಾಹ ನೀಡಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಅವರ ಬ್ಯಾನರ್‌ನಲ್ಲಿ ಅವಕಾಶ ಸಿಕ್ಕಿರೋದು ನಿಜಕ್ಕೂ ಗ್ರೇಟ್‌ ಆಪರ್ಚ್ಯುನಿಟಿ ಅಂತಾನೆ ಹೇಳಬಹುದು.

ರೈಸಿಂಗ್ ಕನ್ನಡ : ರಾಗಿಣಿ ಚಂದ್ರನ್ ಒಬ್ಬ ನಟಿ ಅನ್ನೋದಕ್ಕಿಂತ ಹೆಚ್ಚಾಗಿ, ದೇವರಾಜ್ ಕುಟುಂಬದ ಸೊಸೆ. ಪ್ರಜ್ವಲ್‌ ದೇವರಾಜ್‌ ಅವರ ಪತ್ನಿ ಅನ್ನೋ ವಿಚಾರ, ನಿಮ್ಮ ಕರಿಯರ್‌ಗೆ ಎಷ್ಟು ಮೈಲೇಜ್ ನೀಡುತ್ತೆ…?

ರಾಗಿಣಿ ಚಂದ್ರನ್ : ಇದು ನನ್ನ ಕುಟುಂಬ. ನನ್ನ ಕುಟುಂಬದಿಂದ ನನಗೆ ಮೈಲೇಜ್‌ಗಿಂದ ಹೆಚ್ಚಾಗಿ ಸಪೋರ್ಟ್ ಸಿಗುತ್ತೆ. ನಾನು ಯಾವತ್ತೂ ನಟಿ ಆಗಬೇಕು, ಸಿನಿಮಾದಲ್ಲಿ ಅಭಿನಯಿಸಬೇಕು ಅಂದುಕೊಂಡಿರಲಿಲ್ಲ. ನಾನಿವತ್ತೂ ಏನಾದ್ರೂ ಮಾಡಿದ್ದೀನಿ ಅಥವಾ ಮಾಡೋಕೆ ಹೊರಟಿದ್ದೀನಿ ಅಂದ್ರೆ, ಅದಕ್ಕೆ ನನ್ನ ಕುಟುಂಬವೇ ಕಾರಣ. ನಾನು ಯಾವತ್ತೂ ಅವರನ್ನ ಅತ್ತೆ, ಮಾವ ಅಂತ ಕರೆದೇ ಇಲ್ಲ. ಅವರು ನನ್ನ ಅಪ್ಪ ಅಮ್ಮನಿಗಿಂತ ಹೆಚ್ಚು. ನನ್ನ ಪ್ರತೀ ಹೆಜ್ಜೆಯಲ್ಲು ಪ್ರೋತ್ಸಾಹಿಸಿದ್ದಾರೆ. ಮೈಸೂರಿಗೆ ಶೂಟಿಂಗ್‌ಗೂ ಬಂದಿದ್ದಾರೆ. ಪ್ರತಿ ಹಂತದಲ್ಲೂ ನನಗೆ ಸಲಹೆಗಳನ್ನ ನೀಡಿದ್ದಾರೆ. ಪ್ರಜ್ವಲ್ ಕೂಡ ಅಷ್ಟೆ. ಇವರೆಲ್ಲಾ ನನ್ನ ಕುಟುಂಬ ಅನ್ನೋದಕ್ಕಿಂತ ಹೆಚ್ಚಾಗಿ ನನ್ನ ಬ್ಯಾಕ್‌ಬೋನ್ ಅಂತಾನೆ ಹೇಳ್ತೀನಿ.

ರೈಸಿಂಗ್ ಕನ್ನಡ : ಸಿನಿಮಾ ಶೂಟಿಂಗ್‌ನ ಯಾವುದಾದ್ರೂ ಖುಷಿ ವಿಚಾರವನ್ನ ಅಂದುಕೊಳ್ಳಬಹುದಾ..?

ರಾಗಿಣಿ ಚಂದ್ರನ್ : ಖಂಡಿತವಾಗ್ಲೂ, ಒಬ್ಬ ನಟಿ ಅದ್ರಲ್ಲೂ ನಾಯಕಿ ಪ್ರಧಾನ ಚಿತ್ರ ಅಂದ್ರೆ, ಬಬ್ಲಿ ಕ್ಯಾರೆಕ್ಟರ್, ಸಾಂಗ್ ಔಟ್‌ಡೋರ್ ಶೂಟಿಂಗ್ ಹೀಗೆಲ್ಲಾ ಕನಸು ಕಾಣ್ತಾರೆ. ಆದ್ರೆ, ನನ್ನ ಚೊಚ್ಚಲ ಚಿತ್ರದಲ್ಲೇ ತುಂಬಾನೆ ಜವಾಬ್ದಾರಿಯ ಪಾತ್ರವನ್ನ ನಿಭಾಯಿಸಿದ್ದೇನೆ. ಇಂತಹ ಸಂದರ್ಭದಲ್ಲಿ ಪ್ರಜ್ವಲ್ ತುಂಬಾನೆ ಸಪೋರ್ಟ್ ಮಾಡಿದ್ದಾರೆ. ಮೈಸೂರಿಗೆ ಶೂಟಿಂಗ್‌ ಸ್ಪಾಟ್‌ಗೆ ಬಂದು, ಡೈಲಾಗ್ ಡಿಲೆವರಿ, ಫೇಸ್ ಎಕ್ಸ್‌ಪ್ರೆಷನ್, ಬಾಡಿ ಲಾಂಗ್ವೇಜ್ ಎಲ್ಲವನ್ನೂ ಹೇಳಿಕೊಟ್ಟಿದ್ದಾರೆ.

ರೈಸಿಂಗ್ ಕನ್ನಡ : ದೇವರಾಜ್‌ ಕೂಡ ತುಂಬಾನೆ ವಿಭಿನ್ನ ಪಾತ್ರಗಳಲ್ಲಿ ಗುರುತಿಸಿಕೊಂಡವರು. ಅವರಿಂದ ನಿಮಗೇನಾದ್ರೂ ವಿಶೇಷ ಟಿಪ್ಸ್ ಸಿಕ್ಕಿದ್ಯಾ..?

ರಾಗಿಣಿ ಚಂದ್ರನ್ : ಖಂಡಿತ ನಾನು ಪ್ರತೀ ಡೈಲಾಗ್, ಪ್ರತೀ ಎಕ್ಸ್‌ಪ್ರೆಷನ್ ಅನ್ನ ಕೂಡ ಅಪ್ಪನ ಜೊತೆ ಚರ್ಚೆ ಮಾಡ್ತೀನಿ. ಆ ನಂತರದಲ್ಲಿ ಪ್ರಜ್ವಲ್‌ ಎದುರು ರಿಹರ್ಸಲ್ ಮಾಡಿ ತೋರಿಸ್ತೀನಿ. ಅವರ ಸಾಕಷ್ಟು ಟಿಪ್ಸ್ ನೀಡಿದ್ದಾರೆ. ನನ್ನ ಅಭಿನಯಕ್ಕೆ ಅಪ್ಪನೇ ಪ್ರೇರಣೆ.

ರೈಸಿಂಗ್ ಕನ್ನಡ : ಮೊದಲ ಬಾರಿಗೆ ಓಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ನಿಮ್ಮ ಸಿನಿಮಾ ರಿಲೀಸ್ ಆಗ್ತಿದೆ. ಇದ್ರ ಬಗ್ಗೆ ಏನನ್ನುತ್ತೀರಾ..?

Advertisement

ರಾಗಿಣಿ ಚಂದ್ರನ್ : ನಿಜ, ಇದಕ್ಕಿಂತ ಉತ್ತಮ ಪ್ಲಾಟ್‌ಫಾರ್ಮ್ ಸಧ್ಯದಲ್ಲಿ ಸಿಗೋಕೆ ಸಾಧ್ಯವಿಲ್ಲ. ಯಾಕಂದ್ರೆ ಒಂದೇ ಹಂತದಲ್ಲಿ ನಾವು ಸುಲಭವಾಗಿ 200 ದೇಶಗಳನ್ನ ತಲುಪುಬಹುದು. ಸದ್ಯದ ಪರಿಸ್ಥಿತಿಯಲ್ಲಿ ಸಿನಿಮಾ ಮಂದಿರಗಳಲ್ಲಿ ಚಿತ್ರ ತೆರೆಕಾಣೋದು ಕಷ್ಟ. ಹೀಗಾಗಿ ಓಟಿಟಿಗಿಂತ ಉತ್ತಮ ಪ್ಲಾಟ್‌ಫಾರ್ಮ್ ಸಿಗೋದು ಕಷ್ಟ ಅಂದುಕೊಂಡಿದ್ದೇನೆ. ಇದು ಯಾವುದೇ ಬಿಗ್‌ಸ್ಕ್ರೀನ್‌ಗಿಂತಲೂ ಕಡಿಮೆ ಇಲ್ಲ ಅಂದುಕೊಳ್ತೀನಿ.

ರೈಸಿಂಗ್ ಕನ್ನಡ : ‘ಲಾ’ಗೆ ಒಳ್ಳೇದಾಗ್ಲಿ ಹಾಗೆ ನಿಮ್ಮ ಮುಂದಿನ ಪ್ರಾಜೆಕ್ಟ್‌ಗಳ ಬಗ್ಗೆ ಏನು ಹೇಳ್ತೀರಾ..?

ರಾಗಿಣಿ ಚಂದ್ರನ್ : ಸಧ್ಯಕ್ಕೆ ಯಾವುದೇ ಪ್ಲಾನ್ ಇಲ್ಲ. ನಾನು ಈಗಲೂ ಕ್ಲಾಸಿಕಲ್‌ ಡ್ಯಾನ್ಸರ್ ಜೊತೆಯಲ್ಲೇ ಫಿಟ್ನೆಸ್ ಟ್ರೇನರ್‌ ಅಷ್ಟೆ. ಮುಂದಿನ ದಿನಗಳಲ್ಲಿ ಅವಕಾಶ ಸಿಕ್ರೆ ಖಂಡಿತವಾಗ್ಲೂ ಮಾಡ್ತೀನಿ.

ಒಟ್ಟಿನಲ್ಲಿ ದೇವರಾಜ್ ಕುಟುಂಬದ ಮುದ್ದಿನ ಸೊಸೆ, ಮುದ್ದುಮೊಗದ ರಾಗಿಣಿ ಚಂದ್ರನ್‌ ಅವರು, ನಿಜಕ್ಕೂ ವಿಭಿನ್ನ ಪಾತ್ರದೊಂದಿಗೆ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಅವರ ಚಿತ್ರಕ್ಕೆ ಆಲ್‌ ದಿ ಬೆಸ್ಟ್ ಹೇಳೋಣ. ಹಾಗೆ ರೈಸಿಂಗ್ ಕನ್ನಡದ ಜೊತೆ ತಮ್ಮ ಅನುಭವವನ್ನ ಹಂಚಿಕೊಂಡಿದ್ದಕ್ಕೆ ಧನ್ಯವಾದ.

Advertisement
ಬೆಂಗಳೂರು2 years ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು2 years ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು2 years ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು2 years ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು2 years ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು2 years ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು2 years ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು2 years ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured5 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured7 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured5 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured3 years ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ7 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured6 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured7 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured2 years ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured7 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured3 years ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ