Featured
ಕಂಟ್ರೋಲ್ಗೆ ಸಿಗ್ತಿಲ್ಲ ಕೊರೊನಾ- ಬೆಂಗಳೂರಿನಲ್ಲಿ 20 ಸಾವಿರ ದಾಟಿದ ಸೋಂಕಿತರ ಸಂಖ್ಯೆ
ರೈಸಿಂಗ್ ಕನ್ನಡ, ನ್ಯೂಸ್ ಡೆಸ್ಕ್:
ಕೊರೊನಾ ವೈರಸ್ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ಅತ್ತ ಜೀವನ ಮಾಡಲೂ ಆಗುವುದಿಲ್ಲ, ಇತ್ತ ಕೆಲಸ ಮಾಡಲು ಕೂಡ ಬಿಡುತ್ತಿಲ್ಲಿ ಈ ಮಹಾಮಾರಿ ವೈರಸ್. ಚೀನಾದ ವುಹಾನ್ನಲ್ಲಿ ಹುಟ್ಟಿ ವಿಶ್ವದ ಎಲ್ಲಾ ಕಡೆ ತನ್ನ ಆಟ ಆಡುತ್ತಿರುವ ವೈರಸ್ ಜನರ ಜೀವ ಹಿಂಡುತ್ತಿದೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಏರುತ್ತಿದೆ. ಭಾರತದಲ್ಲೂ ಈ ಸಂಖ್ಯೆ ಹೆಚ್ಚಾಗುತ್ತಿದೆ. ಭಾರತದಲ್ಲಿ ಅತೀ ಹೆಚ್ಚು ಕೊರೊನಾ ಸೋಂಕಿತ ರಾಜ್ಯಗಳ ಪೈಕಿ ಮಹಾರಾಷ್ಟ್ರ, ತಮಿಳುನಾಡು, ದೆಹಲಿ, ಗುಜರಾಜ್ ಮೊದಲ ನಾಲ್ಲು ಸ್ಥಾನಗಳಲ್ಲಿದ್ದರೆ, ಕರ್ನಾಟಕ 5ನೇ ಸ್ಥಾನದಲ್ಲಿದೆ.
ಕರ್ನಾಟಕದಲ್ಲಿ 44077 ಜನರು ಕೊರೊನಾ ಸೋಂಕಿಗೆ ಒಳಗಾಗಾಗಿದ್ದಾರೆ. ಈ ಪೈಕಿ 842 ಜನರು ಪ್ರಾಣಕಳೆದುಕೊಂಡಿದ್ದರೆ, 1730 ಜನರು ಕೊರೊನಾ ಗೆದ್ದವರು. 25839 ಆ್ಯಕ್ಟೀವ್ಕೇಸ್ಗಳನ್ನು ಕರ್ನಾಟಕ ಹೊಂದಿದೆ. ಬೆಂಗಳೂರು ನಗರದಲ್ಲಿ 20969 ಜನರು ಕೋವಿಡ್19ಗೆ ತುತ್ತಾಗಿದ್ದಾರೆ. 15599 ಸಕ್ರೀಯ ಪ್ರಕರಣಗಳು ಬೆಂಗಳೂರಿನಲ್ಲಿದೆ.
ಭಾರತದಲ್ಲೂ ಕೋವಿಡ್ ಪ್ರಕರಣಗಳು ಏರಿಕೆಯಾಗಿದೆ. 937487 ಕೋವಿಡ್ ಪ್ರಕರಣಗಳೂ ಭಾರತದಲ್ಲಿ ದಾಖಲಾಗಿದೆ. ಈ ಮೂಲಕ ಕೊರೊನಾ ಸೋಂಕಿತ ದೇಶಗಳ ಪೈಕಿ ಭಾರತಕ್ಕೆ 3ನೇ ಸ್ಥಾನ. 593080 ಜನರು ಕೋವಿಡ್ನಿಂದ ಮುಕ್ತಿ ಹೊಂದಿದ್ದಾರೆ. 32092 ಆ್ಯಕ್ಟೀವ್ ಕೇಸ್ ಭಾರತದಲ್ಲಿದೆ. 24315 ಜನರು ಕೋವಿಡ್ಗೆ ಬಲಿಯಾಗಿದ್ದಾರೆ.
ವಿಶ್ವದಾದ್ಯಂತ ಒಟ್ಟು 1,32,35,760 ಕೊರೊನಾ ಭಾಧಿತರಿದ್ದಾರೆ. ಈ ಪೈಕಿ 5,75,225 ಜನರು ಕೊರೊನಾದಿಂದ ಮರಣ ಹೊಂದಿದ್ದಾರೆ . 7,696,381 ಜನರು ಕೊರೊನಾದಿಂದ ಮುಕ್ತಿ ಹೊಂದಿದ್ದರೆ, 4,963,854 ಕೇಸ್ಗಳು ಇನ್ನೂ ಆ್ಯಕ್ಟೀವ್ ಆಗಿದೆ.
ಕೊರೊನಾ ಬಾಧಿತ ಟಾಪ್ 5 ರಾಷ್ಟ್ರಗಳು
ದೇಶ ಕೊರೊನಾ+ ಗುಣಮುಕ್ತ ಆ್ಯಕ್ಟೀವ್ ಮರಣ
ಅಮೆರಿಕಾ 34545077 1600195 1805739 139143
ಬ್ರೆಜಿಲ್ 1931204 1213512 643430 74262
ಭಾರತ 937487 593080 320092 24315
ರಷ್ಯಾ 739947 512825 215508 11614
ಪೆರು 333867 223261 98277 12229
ಸೋಂಕಿತರ ಪಟ್ಟಿಯಲ್ಲಿ ಚಿಲಿಗೆ 6ನೇ ಸ್ಥಾನ. ಮೆಕ್ಸಿಕೋ ಸೋಂಕಿತರ ಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ. ಸ್ಪೇನ್ 8ನೇ ಸ್ಥಾನಕ್ಕೆ ಇಳಿದಿದೆ. ಯುಕೆ ಸೋಂಕಿತರ ಪಟ್ಟಿಯಲ್ಲಿ 10ನೇ ಸ್ಥಾನಕ್ಕೆ ಇಳಿದಿದೆ. ಸೋಂಕಿತರ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾ 9 ಸ್ಥಾನಕ್ಕೆ ಏರಿಕೆಯಾಗಿದೆ.
ಒಟ್ಟಿನಲ್ಲಿ ಕೊರೊನಾ ಮಹಾಮಾರಿಯಿಂದ ಇಡೀ ಜಗತ್ತು ತತ್ತರಿಸುತ್ತಿದೆ. ಇದರಿಂದ ಯಾವಾಗ ಮುಕ್ತಿ ಸಿಗುತ್ತದೆ ಅನ್ನುವುದನ್ನು ಎಲ್ಲರೂ ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.
You may like
ಕರ್ನಾಟಕದಲ್ಲಿ ಕೆಆರ್ ಕೆ ಸಂಸ್ಥೆಯಿಂದ ಪ್ರಭಾಸ್ ಆದಿಪುರುಷ್ ಬಿಡುಗಡೆ
ಕರ್ನಾಟಕದಲ್ಲಿ ಒಂದೇ ದಿನ 21,390 ಕೊರೋನಾ.! ಲಾಕ್ಡೌನ್ ಫಿಕ್ಸಾ.?
ಸಿಎಂ ಬೊಮ್ಮಾಯಿ ಸೇರಿ ಸಂಪುಟದ ಐವರಿಗೆ ಕೊರೋನಾ ಶಾಕ್..!
ದೆಹಲಿ ಮಾದರಿ ಲಾಕ್ ಆಗುತ್ತಾ ಬೆಂಗಳೂರು.? ಯಾಕೆ..? ಏನಾಗ್ತಿದೆ ಬೆಂಗಳೂರಲ್ಲಿ.?
ಕರ್ನಾಟಕದಲ್ಲಿ ಕೊರೋನಾ ಮಹಾ ಸ್ಫೋಟ. ದೆಹಲಿ ಮೀರಿಸುತ್ತಾ ಬೆಂಗಳೂರು.?
ರಾಜ್ಯದಲ್ಲಿ ಸದ್ಯಕ್ಕೆ ಲಾಕ್ಡೌನ್ ಇಲ್ಲ. ಮತ್ತಷ್ಟು ಟಫ್ ರೂಲ್ಸ್ ಜಾರಿ