Featured
ಸಚಿವರ ಪುತ್ರನಾದ್ರೆ, ಕರ್ಫ್ಯೂ ಪಾಲಿಸಬೇಕಿಲ್ವಾ..? ಪ್ರಶ್ನಿಸಿದ್ದಕ್ಕೆ, ಮಹಿಳಾ ಪೊಲೀಸ್ ಪೇದೆಗೆ ವರ್ಗಾವಣೆ ಶಿಕ್ಷೆ..! – ವೀರನಾರಿ ಪರ ಶುರುವಾಯ್ತು ಕೂಗು..!
![](https://risingkannada.com/wp-content/uploads/2020/07/gujrat-3.jpg)
ರೈಸಿಂಗ್ ಕನ್ನಡ :
ವೆಬ್ ಡೆಸ್ಕ್ :
ಕರ್ಫ್ಯೂ ಉಲ್ಲಂಘಿಸಿದ ಗುಜರಾತ್ ಸಚಿವರೊಬ್ಬರ ಮಗನನ್ನ ಪ್ರಶ್ನಿಸಿದ ಮಹಿಳಾ ಪೊಲೀಸ್ ಪೇದೆಗೆ ಅನಾವಶ್ಯಕವಾಗಿ ವರ್ಗಾವಣೆ ಮಾಡಲಾಗಿದೆ. ಸಚಿವರ ಪುತ್ರನನ್ನ ಪ್ರಶ್ನಿಸದ ಪೊಲೀಸ್ ಪೇದೆ, ಸುನಿತಾ ಯಾದವ್ ಅವರನ್ನ ಟ್ರಾನ್ಸ್‌ಫರ್ ಮಾಡಲಾಗಿದೆ.
ಗುಜರಾತ್ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಕಿಶೋರ್ ಕನಾನಿ ಅವರ ಪುತ್ರ, ಗೆಳೆಯರೊಂದಿಗೆ ಕರ್ಫ್ಯೂವನ್ನ ಉಲ್ಲಂಘಿಸಿ ಪ್ರಯಾಣ ಮಾಡುತ್ತಿದ್ದರು. ಈ ವೇಳೆ ಕರ್ತವ್ಯ ನಿರತರಾಗಿದ್ದ ಸುನಿತಾ ಯಾದವ್ ಕಾರ್ ಅನ್ನ ತಪಾಸಣೆ ಮಾಡಿ, ಪ್ರಶ್ನಿಸಿದ್ದಾರೆ.
ಆ ಸಂದರ್ಭದಲ್ಲಿ ಕಾರಿನಲ್ಲಿದ್ದವರು ಸುನಿತಾ ಜೊತೆ ಜಗಳಕ್ಕಿಳಿದಿದ್ದಾರೆ. ಅದರಲ್ಲಿ ಒಬ್ಬ ಇದೇ ಜಾಗದಲ್ಲಿ ನೀನು 365 ದಿನ ನಿಂತಲ್ಲಿಯೇ ನಿಲ್ಲಬೇಕು ಅಂತ ಆವಾಜ್ ಹಾಕಿದ್ದಾನೆ. ಇದರಿಂದ ಕೆರೆಳಿದ ಸುನಿತಾ 365 ದಿನ ಹೀಗೆ ನಿಲ್ಲಲು ನಾನೇನು ನಿಮ್ಮಪ್ಪನ ಸೇವಕಿ ಅಲ್ಲ ಅಂತ ಗುಡುಗಿದ್ದಾರೆ. ಇವರ ನಡುವೆ ನಡೆದ ಗಲಾಟೆ ವಿಡಿಯೊ ರೆಕಾರ್ಡಿಂಗ್ ಆಗಿದ್ದು ನೆಟ್ಟಿಗರು ಸುನಿತಾ ಪರ ನಿಂತು ಶಹಬ್ಬಾಸ್ ಅಂದಿದ್ದಾರೆ.
![](https://risingkannada.com/wp-content/uploads/2020/07/gujrat-3.jpg)
ಈ ಘಟನೆ ಸೂರತ್ನ ಮನಗಂಧ್ ಚೌಕ್ನಲ್ಲಿ ತಡರಾತ್ರಿ ನಡೆದಿದೆ ಎಂದು ತಿಳಿದು ಬಂದಿದೆ. ಗಲಾಟೆ ಸಂಬಂಧ ಸುನಿತಾ ವರಚ್ಚಾ ಪೊಲೀಸ್ ಠಾಣೆಯ ಹಿರಿಯ ಅಧಿಕಾರಿಗಳಿಗೆ ವಿವರಿಸಿದ್ದಾರೆ. ನಂತರ ಪ್ರಕರಣದ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ ಎಂದು ತಿಳಿದಾಗ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಆದರೆ ಪೊಲೀಸ್ ಇಲಾಖೆ ರಾಜೀನಾಮೆಯನ್ನ ನಿರಾಕರಿಸಿದೆ.
ವರಚ್ಚ ಪೊಲೀಸ್ ಠಾಣೆಯಿಂದ ಪೊಲೀಸ್ ಪ್ರಧಾನ ಕಾರ್ಯಾಲಯಕ್ಕೆ ವರ್ಗಾವಣೆ ಮಾಡಿದೆ. ವರ್ಗಾವಣೆ ಮಾಡಿರುವ ಕುರಿತು ಸಾಮಾಜಿಕ ಜಾಲತಾಣದಲ್ಲಿ ಭಾರೀ ವಿರೋಧ ವ್ಯಕ್ತವಾಗಿದ್ದು #Stop_Transfer_Sunita_Yadavಎಂಬ ಹ್ಯಾಷ್ಟ್ಯಾಗ್ ಟ್ರೆಂಡ್ ಆಗುತ್ತಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?