Featured
ಕೋತಿಗೆ ಇರುವ ಬುದ್ಧಿ ಮನುಷ್ಯರಿಗೆ ಇಲ್ವಾ..? ಈ ವೈರಲ್ ವಿಡಿಯೋ ನೋಡಿ

ಸದ್ಯ ಇದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮತ್ತು ಸೆನ್ಸೇಷನಲ್. ಯಾಕಂದರೆ ಕೋತಿಯೊಂದು ನಲ್ಲಿಯಲ್ಲಿ ನೀರು ಬಿಟ್ಟು, ಕುಡಿದ ಮೇಲೆ ಅದೇ ಕೋತಿ ನಲ್ಲಿಯಲ್ಲಿನ ನೀರನ್ನ ನಿಲ್ಲಿಸುತ್ತೆ. ಟಿಕ್ಟಾಕ್ನಲ್ಲಿ ಈ ವಿಡಿಯೋ ಸಖತ್ ವೈರಲ್ ಆಗಿದ್ದು, ಕೋತಿಗೆ ಇರುವ ಮಾನವೀಯತೆ, ಬುದ್ಧಿ ಮನುಷ್ಯನಿಗೆ ಇಲ್ಲ ಅನ್ನೋ ಚರ್ಚೆ ಜೋರಾಗಿಯೇ ನಡೀತಿದೆ.
ಕೇವಲ 11 ಸೆಕೆಂಡ್ಗಳ
ಈ ದೃಶ್ಯವನ್ನ ಚುನಾವಣಾ ಆಯೋಗದ ಮಾಜಿ ಆಯುಕ್ತ ಡಾ.ಎಸ್.ವೈ. ಖುರೇಷಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ
ಹಂಚಿಕೊಂಡಿದ್ದಾರೆ. ಒಂದೇ ದಿನದಲ್ಲಿ ಈ ವಿಡಿಯೋ ಬರೋಬ್ಬರಿ 5 ಸಾವಿರ ಶೇರ್ಗಳನ್ನ ಪಡೆದುಕೊಂಡಿದ್ರೆ,
35 ಸಾವಿರಕ್ಕೂ ಹೆಚ್ಚು ಲೈಕ್ಸ್ಗಳನ್ನ ಈ ವಿಡಿಯೋ ಪಡೆದುಕೊಂಡಿದೆ. What a beautiful message for humans! pic.twitter.com/wTgK4b9uGF— Dr. S.Y. Quraishi (@DrSYQuraishi) August 1, 2019
ಈ ವಿಡಿಯೋ ನೋಡಿರೋ ನೆಟ್ಟಿಗರು, ವಿವಿಧ ರೀತಿಯಲ್ಲಿ ಪ್ರತಿಕ್ರಿಯೆ ನೀಡ್ತಿದ್ದಾರೆ. ಕೋತಿಗಳಿಗೆ ಇಷ್ಟೊಂದು ಬುದ್ಧಿ, ಮಾನವೀಯತೆ ಹೇಗೆ ಬರುತ್ತೆ ಅನ್ನೋದು ನಮಗೆ ಅಚ್ಚರಿ ಅಂತ ಕೆಲವರು ಟ್ವೀಟ್ ಮಾಡಿದ್ದಾರೆ. ಮತ್ತೆ ಕೆಲವರು ಕೋತಿಗೆ ಇರುವ ಬುದ್ಧಿ, ಮಾನವೀಯತೆ ಮನುಷ್ಯರಿಗೇ ಇರಲ್ಲ ಎಂದು ಟೀಕಿಸಿದ್ದಾರೆ.
ಒಟ್ಟಿನಲ್ಲಿ ನೀರನ್ನು ಉಳಿಸುವ ಕುರಿತು ಕೋತಿಯೊಂದು ಸಾರುವ ಸಂದೇಶ, ಸದ್ಯ ದೇಶಾದ್ಯಂತ ವೈರಲ್ ಆಗಿದೆ.
You may like

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?















