Featured
ನೀರಲ್ಲಿ ಮರಿ ಆನೆ ಮೋಡಿ | ನೀವು ಖುಷಿ ಪಡಿ ನೋಡಿ..! / ಶ್ವಾನ ಪ್ರಿಯರಿಗೂ ಇಲ್ಲಿದೆ ಸರ್ಪ್ರೈಸ್..!
![](https://risingkannada.com/wp-content/uploads/2020/07/dog.jpg)
ರೈಸಿಂಗ್ ಕನ್ನಡ:
ನ್ಯೂಸ್ ಡೆಸ್ಕ್:
ನೀರಿನಲ್ಲಿ ಆಟ ಆಡೋದು ಅಂದ್ರೆ, ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಅದ್ರಲ್ಲೂ ಪ್ರಾಣಿಗಳಿಗಂತೂ ನೀರಂದ್ರೆ ಬಲು ಪ್ರೀತಿ. ನೀರು ಕಂಡ್ರೆ ಸಾಕು ಜಿಗಿದು ಆಟ ಆಡೋ ಪ್ರಾಣಿಗಳನ್ನ ನೋಡೋದೆ ಚೆಂದ.
ಅದರಲ್ಲೂ ಮರಿ ಆನೆ ನೀರಿನಲ್ಲಿ ಗಂಟೆಗಟ್ಟಲೆ ಆಡಿ ಖುಷಿಪಡೋದನ್ನ ನೋಡೋಕೆ ಎರಡು ಕಣ್ಮೂ ಸಾಲದು. ಆನೆಗಳು ನೀರಿನಲ್ಲಿ ಆಡುವುದನ್ನ ನಾವು ಕೂಡ ನೋಡಿ ಆನಂದಿಸುತ್ತೇವೆ. ಈಗ ಇಂಥದ್ದೆ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ.
ಮರಿ ಆನೆಯೊಂದು ನೀರಿಗಿಳಿದು ಅಟ ಆಡದೇ ದಡದಲ್ಲಿಯೇ ನಿಂತು ನೀರಿನ ಬುಗ್ಗೆಯನ್ನ ಸೊಂಡಿಲಲ್ಲಿ ಸೃಷ್ಠಿ ಮಾಡಿ ಸಖತ್ ಎಂಜಾಯ್ ಮಾಡಿದೆ.
![](https://risingkannada.com/wp-content/uploads/2020/07/elephant-1.jpg)
ಈಗಷ್ಟೆ ಜಗತ್ತನ್ನ ನೋಡುತ್ತಿರುವ ಈ ಆನೆಗೆ ಎಲ್ಲವೂ ಕುತೂಹಲದ ವಿಷಯವಾಗಿದೆ. ಭಾರತೀಯ ಅರಣ್ಯ ಸೇವೆಗಳ ಅಧಿಕಾರಿ ಸುಶಾಂತ ನಂದಾ ಅವರು ಈ ವಿಡಿಯೊವನ್ನ ಪೋಸ್ಟ್ ಮಾಡಿದ್ದಾರೆ.
ಅಂದ ಹಾಗೆ ಇದು ಈಗಿನ ವಿಡಿಯೊ ಅಲ್ಲ 2009ರಲ್ಲಿ ಈ ವಿಡಿಯೊ ಜರ್ಮನಿಯ ಹ್ಯಾಂಬರ್ಗ್ ಮೃಗಾಲಯದಲ್ಲಿ ಸೆರೆಯಾಗಿತ್ತು. ಇದೀಗ ಮತ್ತೆ ಈ ವಿಡಿಯೊ ನೆಟ್ಟಿಗರ ಮನಗೆದ್ದಿದೆ.
ಇನ್ನು ಶ್ವಾನಗಳು ಏನು ಕಮ್ಮಿ ಇಲ್ಲ. ಅಂತಾರಾಷ್ಟ್ರೀಯ ಮಾಜಿ ಬಾಸ್ಕೆಟ್ ಬಾಲ್ ಆಟಗಾರ ರೆಕ್ಸ್ ಚಾಪ್ಮನ್ ತಾವು ಸಾಕಿದ ನಾಯಿ ಟಬ್ನಲ್ಲಿ ಆಟವಾಡುವ ವಿಡಿಯೊವನ್ನ ಟ್ವೀಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೊವನ್ನ ನೋಡಿದ ಶ್ವಾನ ಪ್ರಿಯರು ಸಖತ್ ಎಂಜಾಯ್ ಮಾಡುತ್ತಿದ್ದಾರೆ.
You may like
ಬಿಜೆಪಿ ರಾಜ್ಯಾಧ್ಯಕ್ಷರಿಗೆ ಶಾಸಕ ದೊಡ್ಡನಗೌಡ ಪಾಟೀಲ್ ಪತ್ರ: ಕೊಪ್ಪಳ ಕ್ಷೇತ್ರಕ್ಕೆ ಪ್ರಭಾಕರ್ ಚಿಣಿಗೆ ಟಿಕೆಟ್ ನೀಡುವಂತೆ ಮನವಿ
ಹಣ್ಣುಗಳನ್ನು ತಿನ್ನುವಾಗ ಈ ಟಿಪ್ಸ್ ಫಾಲೋ ಮಾಡೋದನ್ನ ಮರೆಯಬೇಡಿ!
ಬೇಸಿಗೆಯಲ್ಲಿ ಕಾವೇರಿ ನೀರಿಲ್ಲ! ಬೆಂಗಳೂರಿಗೆ ಜಲ ಕ್ಷಾಮ ಫಿಕ್ಸ್
ಫೆ.7 ರಂದು ಮಂಡ್ಯ ನಗರ ಬಂದ್ಗೆ ಕರೆ ಕೊಟ್ಟ ಸಮಾನ ಮನಸ್ಕರ ವೇದಿಕೆ
ಬೆಳಗಾವಿ ರಾಜಕಾರಣಿಗಳು ಬದುಕಿದ್ದಾರಾ.? ಜಾರಕಿಹೊಳಿ, ಕತ್ತಿ, ಹುಕ್ಕೇರಿ, ಹೆಬ್ಬಾಳ್ಕರ್ ಏನಾಗಿದ್ದಾರೆ.?
ಪ್ರಭಾಸ್ ಫ್ಯಾನ್ಸ್ ದಿಲ್ ಖುಷ್ : ಈ ವರ್ಷ ರಾಧೆ ಶ್ಯಾಮ್.. ಮುಂದಿನ ವರ್ಷ ಸಲಾರ್ ರಿಲೀಸ್ಗೆ ಮುಹೂರ್ತ ಫಿಕ್ಸ್