Featured
32 KG ಗದೆ.. 28 ದಿನ ಗದೆ ಫೈಟ್ ಶೂಟಿಂಗ್ : ಕುರುಕ್ಷೇತ್ರ ಅನುಭವ ಬಿಚ್ಚಿಟ್ಟ ದರ್ಶನ್

ಬೆಂಗಳೂರು : ಕುರುಕ್ಷೇತ್ರ ಸಿನಿಮಾ ಇದೇ ತಿಂಗಳ 9ರಂದು ವರಮಹಾಲಕ್ಷ್ಮಿ ಹಬ್ಬಕ್ಕೆ ಬಿಡುಗಡೆ ಆಗ್ತಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 50ನೇ ಸಿನಿಮಾ ಅನ್ನೋ ಒಂದು ಕಾರಣವಾದ್ರೆ, ಬಹುಕೋಟಿ ಹಾಗೂ ಬಹುತಾರಾಗಣದ ಸಿನಿಮಾ. ಜೊತೆಗೆ ಪೌರಾಣಿಕ ಸಿನಿಮಾ ಆಗಿರೋದ್ರಿಂದ ಇಡೀ ಭಾರತೀಯ ಚಿತ್ರರಂಗ ಈಗ ಕನ್ನಡದ ಸಿನಿಮಾದತ್ತ ತಿರುಗಿ ನೋಡ್ತಿದೆ. ಹೀಗಾಗಿ ಕುರುಕ್ಷೇತ್ರ ಸಿನಿಮಾ ಕುರಿತು ಸಾಕಷ್ಟು ನಿರೀಕ್ಷೆಗಳಿವೆ. ಅದರಲ್ಲೂ ದುರ್ಯೋಧನನ ಪಾತ್ರ ಮಾಡಿರೋ ದರ್ಶನ್, ತಮ್ಮ ಶೂಟಿಂಗ್ ಅನುಭವವನ್ನ ಮಾಧ್ಯಮಗಳ ಮುಂದೆ ಹಂಚಿಕೊಂಡ್ರು.
ಬೆಂಗಳೂರಿನಲ್ಲಿ ಮಾತ್ನಾಡಿದ ದರ್ಶನ್, ಈ ರೀತಿಯ ಪೌರಾಣಿಕ ಸಿನಿಮಾ ಮಾಡ್ಬೇಕು ಅಂದ್ರೆ ನಿರ್ಮಾಪಕರಿಗೆ ಧೈರ್ಯ ಇರಬೇಕು. ಇದಕ್ಕಾಗಿ ನಿರ್ಮಾಪಕ ಮುನಿರತ್ನ ಅವರಿಗೆ ಧನ್ಯವಾದ ಹೇಳಿದ್ರು. ಇದೇ ವೇಳೆ ಮಾತ್ನಾಡಿದ ದರ್ಶನ್, ಶೂಟಿಂಗ್ ತಯಾರಿ, ಗದೆ ಹಾಗೂ ಮೇಕಪ್ ಬಗ್ಗೆ ಮನ ಬಿಚ್ಚಿ ಮಾತ್ನಾಡಿದ್ರು.
32 ಕೆಜಿ ತೂಕ.. 28 ದಿನ ಒಂದೇ ಫೈಟಿಂಗ್ ಶೂಟಿಂಗ್
ಯೆಸ್, ಕುರುಕ್ಷೇತ್ರದಲ್ಲಿ ದರ್ಶನ್ ಬಳಸಿರೋ ಗದೆಯ ತೂಕ ಬರೋಬ್ಬರಿ 32 ಕೆಜಿ ಇದೆಯಂತೆ. ವಿಚಿತ್ರ ಅಂದ್ರೆ, ಫೋಟೋಶೂಟ್ಗಾಗಿ 50 ಕೆಜಿ ತೂಕದ ಗದೆ ತಂದಿದ್ರಂತೆ. ಆದ್ರೆ, ಇಷ್ಟೊಂದು ತೂಕದ ಗದೆ ಎತ್ತಿಕೊಂಡು ಶೂಟಿಂಗ್ ಮಾಡೋಕೆ ಆಗಲ್ಲ ಎಂದು ಮತ್ತೆ ಹೊಸದನ್ನ ಮಾಡಲಾಯ್ತು ಅಂತ ದರ್ಶನ್ ಹೇಳಿದ್ರು. ಈ 32 ಕೆಜಿ ತೂಕದ ಗದೆಯನ್ನ ಎತ್ತಿಕೊಂಡು, ಒಂದೇ ಫೈಟಿಂಗ್ಗೆ ಬರೋಬ್ಬರಿ 28 ದಿನ ಶೂಟಿಂಗ್ ಮಾಡಿದ್ದಾಗಿ ಹೇಳಿದ್ರು. ಸಿಕ್ಕಾಪಟ್ಟೆ ಬಿಸಿಲು ಬೇರೆ. ಆ ಬಿಸಿಲಿನಲ್ಲೂ 32 ಕೆಜಿ ಗದೆ ಎತ್ತಿಕೊಂಡು, ಸತತ 28 ದಿನ ಶೂಟಿಂಗ್ ಮಾಡಿದ್ದು ಸಾಹಸ ಅಂದ್ರು.
ಪ್ರತಿದಿನ ನಾನ್ವೆಜ್..!
ಇಡೀ ಸಿನಿಮಾದಲ್ಲಿ ಬಹುತೇಕ ಭಾಗ, ಶರ್ಟ್ಲೆಸ್ ಆಗಿದ್ದೀವಿ. ಹೀಗಾಗಿ ಫಿಟ್ನೆಸ್ ಉಳಿಸಿಕೊಳ್ಳಬೇಕಾಗಿತ್ತು. ಇದರಿಂದಾಗಿ ಪ್ರತಿದಿನ ನಾನ್ವೆಜ್ ಅದರಲ್ಲೂ ಚಿಕನ್ ತಿನ್ನುತ್ತಿದ್ದೆ ಎಂದು ದರ್ಶನ್ ನಮ್ಮ ದೇಹದ ಗುಟ್ಟನ್ನ ಬಿಚ್ಚಿಟ್ಟರು. ಗದೆ ಹಿಡಿದು ಊಟ ಮಾಡೋಕೆ ಆಗ್ತಿರಲಿಲ್ಲ. ಆ ಸಂದರ್ಭದಲ್ಲಿ ನಮ್ ಮೇಕಪ್ ಟಚ್ಅಪ್ ಹುಡುಗ ಸೀನು ಊಟ ತಿನ್ನುಸ್ತಿದ್ದ ಅಂತ ತಮ್ಮ ಅನುಭವವನ್ನ ದರ್ಶನ್ ಹಂಚಿಕೊಂಡ್ರು.
ಕಲಾವಿದ ಅನ್ನೋದನ್ನ ತೋರಿಸೋಕೆ ಈ ಸಿನಿಮಾ..!
ದರ್ಶನ್ ಹೇಳಿ ಕೇಳಿ ಪಕ್ಕಾ ಕಮರ್ಷಿಲ್ ಸ್ಟಾರ್. ಮತ್ಯಾಕೆ ಈ ರೀತಿಯ ಪೌರಾಣಿಕ ಸಿನಿಮಾ ಮಾಡ್ತೀರ ಅಂತ ಪ್ರಶ್ನೆ ಕೇಳಿದ್ರೆ, ಕಲಾವಿದ ಅಂತ ಫ್ರೂವ್ ಮಾಡೋಕೆ ಅನ್ನೋ ಉತ್ತರ ಬಂತು. ಸಿನಿಮಾ ರಂಗದಲ್ಲಿ ನಾನೊಬ್ಬ ಕಲಾವಿದ ಅಂತ ಹೇಳಬೇಕು ಅಂದ್ರೆ, ಒಂದು ಪೌರಾಣಿಕ, ಒಂದು ಐತಿಹಾಸಿಕ ಸಿನಿಮಾ ಮಾಡ್ಬೇಕು. ಅದಕ್ಕಾಗಿಯೇ ಇದು ಅಂತ ನಗುತ್ತಲೇ ಉತ್ತರಿಸಿದ್ರು.
You may like

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?















