ರೈಸಿಂಗ್ ಕನ್ನಡ ನ್ಯೂಸ್ ಡೆಸ್ಕ್:
ಕೆಲ ದಿನಗಳ ಹಿಂದೆ ಕೊರೊನಾದಿಂದ ರಾಷ್ಟ್ರರಾಜಧಾನಿ ದೆಹಲಿ ನಲುಗಿ ಹೋಗಿತ್ತು. ಪ್ರತಿದಿನವೂ ಏರುತ್ತಿದ್ದ ಪಾಸಿಟಿವ್ ಪ್ರಕರಣಗಳಿಂದ AAP ನೇತೃತ್ವದ ಸರ್ಕಾರಕ್ಕೆ ತಲೆ ನೋವು ಹೆಚ್ಚಾಗಿತ್ತು. ಆದ್ರೆ ಈಗ ದೆಹಲಿಯಲ್ಲಿ ಕೊರೊನಾ ನಿಯಂತ್ರಣಕ್ಕೆ ಬಂದಿದೆ. ಅಷ್ಟೇ ಅಲ್ಲ ಇನ್ನೂ ಕೆಲದಿನಗಳಲ್ಲಿ ದೆಹಲಿ ಕೊರೊನಾದಿಂದ ಸಂಪೂರ್ಣ ಮುಕ್ತವಾಗಲಿದೆ. ಸದ್ಯ ರಾಜಧಾನಿ ದೆಹಲಿಯಲ್ಲಿ ಕೊರೊನಾದಿಂದ ಗುಣಮುಖರಾದವರ ಸಂಖ್ಯೆ ಶೇಕಡಾ80ಕ್ಕೆ ಏರಿದೆ.
ದೆಹಲಿ ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ ದೆಹಲಿಯಲ್ಲಿ ಭಾನುವಾರದ ಹೊತ್ತಿಗೆ ಶೇಕಡಾ79.97ರಷ್ಟು ಕೊರೊನಾ ಸೋಂಕಿತರು ಗುಣಮುಖರಾಗಿದ್ದಾರೆ. ಭಾನುವಾರ 1573 ಹೊಸ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ. ದೆಹಲಿಯಲ್ಲಿ ಒಟ್ಟು 112494 ಕೊರೊನಾ ಸೋಂಕಿತರಿದ್ದಾರೆ. ಭಾನುವಾರ ಒಂದೇ ದಿನ ಕೋವಿಡ್19ಗೆ 37 ಜನರು ಬಲಿಯಾಗಿದ್ದಾರೆ. ಈ ಮೂಲಕ ದೆಹಲಿಯಲ್ಲಿ ಕೊರೊನಾ ಸಾವಿನ ಸಂಖ್ಯೆ 3371ಕ್ಕೆ ಏರಿದೆ.
ದೆಹಲಿ ಇತ್ತೀಚಿಗೆ ಅತೀ ಹೆಚ್ಚು ಕೊರೊನಾ ಟೆಸ್ಟ್ಗಳನ್ನು ನಡೆಸಿತ್ತು. ಹೀಗಾಗಿ ಸೋಂಕಿತರ ಸಂಖ್ಯೆ ಆಗ ಹೆಚ್ಚಾದ್ರೂ ಈಗ ಕಡಿಮೆ ಆಗುತ್ತಿದ. 112494 ಕೊರೊನಾ ಸೋಂಕಿತರ ಪೈಕಿನ 89968 ಸೋಂಕಿತರು ಕೊರೊನಾದಿಂದ ಗುಣಮುಖರಾಗಿದ್ದಾರೆ. ಸದ್ಯ ದೆಹಲಿಯಲ್ಲಿ 19155 ಆ್ಯಕ್ಟಿವ್ ಪ್ರಕರಣಗಳಿವೆ.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?