Featured
ಕರ್ನಾಟಕದಲ್ಲಿರುವುದು ಕೊರೊನಾ ಕಾಂಗ್ರೆಸ್- ತಬ್ಲಿಘಿಗಳೇ ರಾಜ್ಯದಲ್ಲಿ ಕೊರೊನಾ ಹರಡಿದ್ದು- ಕಾಂಗ್ರೆಸ್ ವಿರುದ್ಧ ಸಚಿವ ಬಿ.ಸಿ.ಪಾಟೀಲ್ ಕಿಡಿ

ರೈಸಿಂಗ್ ಕನ್ನಡ:
ಬೆಂಗಳೂರು:

ಕರ್ನಾಟಕ ಕಾಂಗ್ರೆಸ್ ಹೆಸರು ಬದಲಾಗಿದೆ. ಇದನ್ನು ಕೊರೊನಾ ಕಾಂಗ್ರೆಸ್ ಪಕ್ಷ ಎಂದು ಕರೆಯಬೇಕು. ಹೀಗೆ ಹೇಳೀದು ಸಚಿವ ಬಿ.ಸಿ.ಪಾಟೀಲ್. ಕರ್ನಾಟದಲ್ಲಿ ತಬ್ಲಿಘಿಗಳಿಂದಲೇ ಕೊರೋನಾ ಹೆಚ್ಚಾಗಿದೆ. ತಬ್ಲಿಘಿಗಳಿಗೆ ಕಾಂಗ್ರೆಸ್ ಬೆಂಬಲ ನೀಡಿದೆ. ಹೀಗಾಗಿ ರಾಜ್ಯದಲ್ಲಿ ಕೊರೋನಾ ಜಾಸ್ತಿ ಆಗಿದೆ. ಕಾಂಗ್ರೆಸ್ ಪಕ್ಷವನ್ನು ಕೊರೋನಾ ಕಾಂಗ್ರೆಸ್ ಎಂದು ಕರೆಯಬೇಕು. ಕಾಂಗ್ರೆಸ್ನಿಂದಲೇ ಕೊರೋನಾ ಜಾಸ್ತಿಯಾಗಿದೆ. ಕಾಂಗ್ರೆಸ್ ರಾಜಕೀಯ ಮಾಡೋದು ಬಿಟ್ಟು ಸರ್ಕಾರದ ಜೊತೆ ಕೈ ಜೋಡಿಸಲಿ ಎಂದು ಸಚಿವ ಬಿ.ಸಿ. ಪಾಟೀಲ್ ಕಾಂಗ್ರೆಸ್ ಮುಖಂಡರಿಗೆ ತಿರುಗೇಟು ನೀಡಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೃಷಿ ಸಚಿವ ಬಿ.ಸಿ. ಪಾಟೀಲ್ ಮಾಜಿ ಸಿಎಂ ಕುಮಾರಸ್ವಾಮಿ ನಮ್ಮ ಜೊತೆಗೆ ಕೈ ಜೋಡಿಸಿದ್ದಾರೆ. ಕಾಂಗ್ರೆಸ್ ಲೆಕ್ಕ ಕೊಡಿ ಅಭಿಯಾನ ಎಂದು ಮಾಡುತ್ತಿದೆ. ಲೆಕ್ಕ ಎಲ್ಲರಿಗೂ ಕೊಟ್ಟೇ ಕೊಡುತ್ತೇವೆ. ಲೆಕ್ಕ ಕೊಡದೇ ನಾವು ಎಲ್ಲೂ ಹೋಗುವುದಿಲ್ಲ. ಲೆಕ್ಕ ಕೊಡಿ ಅಭಿಯಾನ ಬಿಟ್ಟು, ಸರ್ಕಾರದ ಜೊತೆಗೆ ನಿಲ್ಲಲಿ. ಅದನ್ನು ಬಿಟ್ಟು ಎಲ್ಲೋ ಕುಳಿತು ಮಾತನಾಡುವುದು ಬೇಡ ಎಂದು ಬಿ.ಸಿ. ಪಾಟೀಲ್ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.

ಇನ್ನು ಕೊಪ್ಪಳಕ್ಕೆ ಎಂಟ್ರಿ ಕೊಡುವವರ ಬಗ್ಗೆಯೂ ಬಿ.ಸಿ.ಪಾಟೀಲ್ ಖಡಕ್ ಆಗಿ ಮಾತನಾಡಿದ್ದಾರೆ. ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಬಿ.ಸಿ.ಪಾಟೀಲ್, ಕೊಪ್ಪಳಕ್ಕೆ ಹೊರಗಿಂದ ಬರುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ. ಟೆಸ್ಟ್ ರಿಸಲ್ಟ್ ಬರೋವರೆಗೂ ಸಾಂಸ್ಥಿಕ ಕ್ವಾರಂಟೈನ್ನಲ್ಲಿರಬೇಕು. ವೈದ್ಯಕೀಯ ವರದಿಯಲ್ಲಿ ನೆಗೆಟಿವ್ ಬಂದ ಬಳಿಕವೇ ಅವರನ್ನು ಜಿಲ್ಲೆಯ ಒಳಗೆ ಬಿಟ್ಟುಕೊಳ್ಳಲಾಗುವುದು ಎಂದು ಸ್ಪಷ್ಟ ಪಡಿಸಿದ್ರು.
You may like

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?















