Featured
ಕೊರೊನಾದಿಂದ ಸ್ತಬ್ಧವಾಗಿದೆ ಬೆಂಗಳೂರು ಲೈಫ್- ಕೈಯಲ್ಲಿ ಕಾಸಿಲ್ಲ, ಹೊಟೇಲ್ ತಿಂಡಿ, ಊಟ ತಿನ್ನೋಕೆ ಧೈರ್ಯ ಇಲ್ಲ- ಯಾವಾಗ ಸರಿಹೋಗುತ್ತೆ ಲೈಫು..?
![](https://risingkannada.com/wp-content/uploads/2020/07/covid-19-4940487_640.jpg)
ರೈಸಿಂಗ್ ಕನ್ನಡ:
ಬೆಂಗಳೂರು:
ಕೊರೊನಾ ಮಹಾಮಾರಿಯ ಕಾಟಕ್ಕೆ ಇಡೀ ಜಗತ್ತೇ ಬೆಚ್ಚಿಬಿದ್ದಿದೆ. ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಈ ನಡುವೆ ಸರ್ಕಾರ ಕೋವಿಡ್ ನಿಯಂತ್ರಣಕ್ಕಾಗಿ ಸಾಕಷ್ಟು ಶ್ರಮವಹಿಸುತ್ತಿದೆ. ಜನರು ಮನೆಯಿಂದ ಹೊರ ಬರಲು ಹಿಂದೇಟು ಹಾಕ್ತಿದ್ದಾರೆ. ಹೀಗೇ ಮುಂದುರೆದ್ರೆ ಬೆಂಗಳೂರು ನಗರ ಭಣಗುಡುವುದು ಖಚಿತ.
50% ಸಣ್ಣ ಮತ್ತು ಮಧ್ಯಮ ಹೊಟೇಲ್ಗಳು ಕ್ಲೋಸ್
ಬೆಂಗಳೂರಿನಲ್ಲಿ ಹೊಟೇಲ್ ಮತ್ತು ದರ್ಶಿನಿಗಳದ್ದೇ ಕಾರುಬಾರು ಜೋರಾಗಿತ್ತು. ಆದ್ರೆ ಅದ್ಯಾವಗ ಕೊರೊನಾ ವಕ್ಕರಿಸಿತೋ ಅವತ್ತಿಂದ ಹೊಟೇಲ್ ಮತ್ತು ದರ್ಶಿನಿಗಳ ಬ್ಯುಸಿನೆಸ್ ನೆಲಕಚ್ಚಿದೆ. ಅನ್ಲಾಕ್ ಫೇಸ್ನಲ್ಲಿದ್ದರೂ ರಾಜಧಾನಿಯಲ್ಲಿ ಸುಮಾರು 50% ಸಣ್ಣ ಮತ್ತು ಮಧ್ಯಮ ಹೊಟೇಲ್ಗಳು ಬಾಗಿಲು ತೆರೆದಿಲ್ಲ. ಇನ್ನು ಕೆಲವು ಕಡೆ ಹೊಟೇಲ್ಗಳು ಬಾಗಿಲು ತೆರೆದುಕೊಂಡಿದ್ದರೂ ಗ್ರಹಾಕರಿಲ್ಲದೆ ಕಂಗಾಲಾಗಿವೆ.
![](https://risingkannada.com/wp-content/uploads/2020/07/FULL-PLATE-10-1024x576.png)
ಕ್ಯಾಬ್, ಆಟೋಗಳಿಗಿಲ್ಲ ಜನ..!
ಆಟೋ ಮತ್ತು ಕ್ಯಾಬ್ಗಳಿಂದಲೇ ಬೆಂಗಳೂರಿನಲ್ಲಿ ಟ್ರಾಫಿಕ್ ಆಗುತ್ತೆ ಅಂತ ಅದೆಷ್ಟೋ ಜನರು ಬಾಯ್ಬಿಬಡ್ಕೊಂತಿದ್ರು. ಆದ್ರೆ ಈಗ ಆಟೋನೂ ಕಡಿಮೆ, ಕ್ಯಾಬ್ ಕೂಡ ಎಷ್ಟು ಬೇಕೋ ಅಷ್ಟೇ ಇದೆ. ಆದ್ರೆ ಜನ ಮಾತ್ರ ಆಟೋ, ಕ್ಯಾಬ್ಗಳಲ್ಲಿ ಓಡಾಟ ಮಾಡುವುದಕ್ಕಿಂತ ಸ್ವಂತ ವಾಹನಗಳಲ್ಲೇ ಓಡಾಡ್ತಿದ್ದಾರೆ. ಅನಿವಾರ್ಯ ಅಂತಾದರೆ ಮಾತ್ರ ಆಟೋ ಹತ್ತುವ ಸ್ಥಿತಿ ಬಂದಿದೆ.
ರಸ್ತೆಗಳು ಖಾಲಿ ಖಾಲಿ, ಖಾಲಿ, ಸಿಗ್ನಲ್ಗಳು ಫ್ರೀ..!
ಬೆಂಗಳೂರಿನಲ್ಲಿ ಬಂದ್ ಅಥವಾ ಸ್ಟ್ರೈಕ್ ಆದ್ರೆ ಮಾತ್ರ ರಸ್ತೆಗಳು ಖಾಲಿ ಖಾಲಿಯಾಗುತ್ತಿದ್ದವು. ಆದ್ರೆ ಕೊರೊನಾ ಬಂದಮೇಲೆ ಪ್ರತಿದಿನ ರಸ್ತೆಗಳು ಖಾಲಿ ಖಾಲಿ. ಪ್ರಮುಖ ರಸ್ತೆಗಳದ್ದೇ ಈ ಸ್ಥಿತಿ ಆಗಿದ್ದರೆ ಬೇರೆ ರಸ್ತೆಗಳನ್ನು ಊಹಿಸಿಕೊಳ್ಳಿ. ದಿನದ 24 ಗಂಟೆಯೂ ರಾಜಧಾನಿಯ ಬಹುತೇಕ ಸಿಗ್ನಲ್ಗಳು ಫ್ರೀಯಾಗಿ ಇರ್ತವೆ ಅಂದ್ರೆ ಅದಕ್ಕೆ ಕೊರೊನಾ ಮಹಾತ್ಮೆಯೇ ಕಾರಣ.
ಸಿಟಿಬಸ್ಗೆ ಜನ ಇಲ್ಲ, ಕೆಲಸಕ್ಕೆ ಹೋಗೋಕೆ ಭಯ ಬಿಡಲ್ಲ..!
ಬಿಎಂಟಿಸಿ ಬಸ್ ನಲ್ಲಿ ಸೀಟು ಸಿಗೋದು ಬಿಡಿ, ನಿಂತ್ಕೊಂಡು ಹೋಗೋದಿಕ್ಕೂ ಕಷ್ಟವಾಗುವ ಕಾಲ ಒಂದಿತ್ತು. ಆದ್ರೆ ಈಗ ಸಿಟಿ ಬಸ್ ಕಂಡ್ರೆ ಜನ ಹೌಹಾರುವ ಪರಿಸ್ಥಿತಿ ಬಂದಿದೆ. ಬಸ್ನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಾದ ಅನಿವಾರ್ಯತೆ ಇದೆ. ಆದರೆ ಜನಕ್ಕೆ ಮಾತ್ರ ಬಸ್ ಹತ್ತಲು ಒಂಥರಾ ನಡುಕ. ಇನ್ನು ಸದಾ ಕೆಲಸ ಕೆಲಸ ಅಂತ ಆಫೀಸ್ಗೆ ಹೋಗ್ತಿದ್ದ ಮಂದಿ ಈಗ ವರ್ಕ್ ಫ್ರಂ ಹೋಮ್ ಬೆಟರ್ ಅಂತ ಮನೆಯಲ್ಲೇ ಉಳಿದುಕೊಳ್ತಿದ್ದಾರೆ..?
ವಾಕಿಂಗ್ ಇಲ್ಲ, ಜಾಗಿಂಗ್ ಬೇಡ, ಜಿಮ್ ಅಂತು ಓಪನ್ ಇಲ್ಲ..!
ಬೆಳಗ್ಗೆಯಾಗಲಿ, ಸಂಜೆಯಾಗಲಿ ಬೆಂಗಳೂರಿನ ಪಾರ್ಕ್ಗಳು, ರಸ್ತೆಗಳಲ್ಲಿ ವಾಕ್ ಮಾಡುವವರ ಸಂಖ್ಯೆ ಲೆಕ್ಕಹಾಕೋದು ಕಷ್ಟವಿತ್ತು. ತಾಕತ್ ಇದ್ದವರು ಜಾಗಿಂಗ್ ಬೇರೆ ಮಾಡ್ತಾ ಇದ್ರು. ಆದರೆ ಕಳೆದ 4 ತಿಂಗಳುಗಳಿಂದ ವಾಕಿಂಗೂ ಇಲ್ಲ, ಜಾಗಿಂಗೂ ಇಲ್ಲ. ಪಾರ್ಕ್ಗಳು ಓಪನ್ ಆಗಿದ್ರೂ ಜನ ಬರೋದೇ ಇಲ್ಲ. ಈ ಮಧ್ಯೆ ಜಿಮ್ ಮಾಡ್ಕೊಂಡು ಟೈಟ್ ಬಾಡಿ ಮೈಂಟೇನ್ ಮಾಡ್ತಿದ್ದವರು ಈಗ ಏನೂ ಇಲ್ಲದೆ ಕಂಗಾಲಾಗಿದ್ದರೆ. ಜಿಮ್ ಓಪನ್ ಆಗದೆ ಜಿಮ್ ಓನರ್ಗಳು ಕೂಡ ಕಂಗಾಲಾಗಿದ್ದಾರೆ.
ಯಾವಾಗ ಸರಿಹೋಗುತ್ತೆ ಇದು..?
ಇದು ಎಲ್ಲರ ಬಳಿ ಇರುವ ಪ್ರಶ್ನೆ. ಕೊರೊನಾಕ್ಕೆ ಯಾವಾಗ ಮೆಡಿಸಿನ್ ಹುಡುಕ್ತಾರೋ ಅದ್ಯಾವಾಗ ನಾರ್ಮಲ್ ಲೈಫ್ ಶುರುವಾಗುತ್ತೋ ಅನ್ನೋ ಆಸೆ ಎಲ್ಲರ ಬಳಿ ಇದೆ. ಆದ್ರೆ ಸದ್ಯಕ್ಕೆ ಕೊರೊನಾದ್ದೇ ಆಟ. ಮುಂದೆ ಏನಾಗುತ್ತೋ ಯಾರಿಗೂ ಗೊತ್ತಿಲ್ಲ.
You may like
ಬಿಜೆಪಿ ರಾಜ್ಯಾಧ್ಯಕ್ಷರಿಗೆ ಶಾಸಕ ದೊಡ್ಡನಗೌಡ ಪಾಟೀಲ್ ಪತ್ರ: ಕೊಪ್ಪಳ ಕ್ಷೇತ್ರಕ್ಕೆ ಪ್ರಭಾಕರ್ ಚಿಣಿಗೆ ಟಿಕೆಟ್ ನೀಡುವಂತೆ ಮನವಿ
ಹಣ್ಣುಗಳನ್ನು ತಿನ್ನುವಾಗ ಈ ಟಿಪ್ಸ್ ಫಾಲೋ ಮಾಡೋದನ್ನ ಮರೆಯಬೇಡಿ!
ಬೇಸಿಗೆಯಲ್ಲಿ ಕಾವೇರಿ ನೀರಿಲ್ಲ! ಬೆಂಗಳೂರಿಗೆ ಜಲ ಕ್ಷಾಮ ಫಿಕ್ಸ್
ಫೆ.7 ರಂದು ಮಂಡ್ಯ ನಗರ ಬಂದ್ಗೆ ಕರೆ ಕೊಟ್ಟ ಸಮಾನ ಮನಸ್ಕರ ವೇದಿಕೆ
ಕರ್ನಾಟಕದಲ್ಲಿ ಒಂದೇ ದಿನ 21,390 ಕೊರೋನಾ.! ಲಾಕ್ಡೌನ್ ಫಿಕ್ಸಾ.?
ಸಿಎಂ ಬೊಮ್ಮಾಯಿ ಸೇರಿ ಸಂಪುಟದ ಐವರಿಗೆ ಕೊರೋನಾ ಶಾಕ್..!