Connect with us

Featured

ಕೊರೊನ ಚಾರಿಟಿಗೆ 400km ಓಡುತ್ತಿರುವ ಬೆಳದಿಂಗಳ ಬಾಲೆ..!

ರೈಸಿಂಗ್​ ಕನ್ನಡ:

ಕೊರೋನಾ ಮಹಾಮಾರಿಯಿಂದಾಗಿ ಇವತ್ತು ವಿಶ್ವವೇ ತಲ್ಲಣಿಸಿದೆ. ಅನೇಕರು ಒಂದು ಹೊತ್ತಿನ ಊಟಕ್ಕೂ ಪರದಾಡುವಂತಾಗಿದೆ. ಈ ರೀತಿ ತೊಂದರೆಗೊಳಗಾದವರಿಗೆ ಸಹಾಯ ಮಾಡುವ ಅನೇಕ ಸಮಾಜ ಸೇವೆಯ ಕೆಲಸಗಳೂ ಸಹ ನಡೆಯುತ್ತಿವೆ. ಈ ನಿಟ್ಟಿನಲ್ಲಿ ನಮ್ಮ ಸ್ಯಾಂಡಲ್ ವುಡ್ ತಾರೆಯರೂ ಸಹ ತೊಂದರೆಗೊಳಗಾದವರಿಗೆ ಸಹಾಯ ಮಾಡುವುದರಲ್ಲಿ ತೊಡಗಿಸಿಕೊಂಡಿದ್ದಾರೆ. ಅವರಲ್ಲಿ ನಟಿ ಸುಮನ್ ನಗರ್ ಕರ್ ಸಹ ಒಬ್ಬರು. ಬೆಂಗಳೂರು ರನ್ನರ್ಸ್ ಆಯೋಜಿಸಿರುವ #Run2020-Move2feed fund raise ಅಭಿಯಾನದಲ್ಲಿ ಸುಮನ್ ನಗರ್ ಕರ್ ಕೂಡ ತಮ್ಮ ಪತಿ ಗುರು ಜೊತೆಯಲ್ಲಿ ಭಾಗಿಯಾಗಿದ್ದಾರೆ. ಜುಲೈ ಒಂದರಿಂದ ಇಪ್ಪತ್ತರವರೆಗೆ, ಇಪ್ಪತ್ತು ದಿನಗಳ ಕಾಲ ಇಪ್ಪತ್ತು ರನ್ನರ್ಸ್ ಪ್ರತಿದಿನ ಇಪ್ಪತ್ತು ಕಿಲೋಮೀಟರ್ ಓಡಿ ಈ ಮೂಲಕ fund raise(ಹಣ ಸಂಗ್ರಹಣೆ) ಮಾಡಿ, ಹಾಗೆ ಸಂಗ್ರಹಣೆಯಾದ ಹಣವನ್ನ ಬಡವರಿಗೆ, ದಿನಗೂಲಿಯವರಿಗೆ, ಕಷ್ಟದಲ್ಲಿರುವವರಿಗೆ ಸಾಯಿ ವಿಶ್ವನಾಥ್ ಮೆಮೋರಿಯಲ್ ಟ್ರಸ್ಟಿನ ಮೂಲಕ ದಿನಸಿಗಳನ್ನ ಸರಬರಾಜು ಮಾಡಲಿದ್ದಾರೆ. ಈ ಒಂದು ಒಳ್ಳೆಯ ಕಾರ್ಯಕ್ಕೆ ಸಹಾಯ ಮಾಡಲಿಚ್ಚಿಸುವವರು Facebookನ Move2feed ಅಥವಾ ಸುಮನ್ ನಗರ್ ಕರ್ ಅವರ Facebook ಪೇಜ್ ಅಲ್ಲಿ ಹೆಚ್ಚಿನ ಮಾಹಿತಿ ಪಡೆಯಬಹುದು.

Advertisement

ಕೆಲ ವರ್ಷಗಳ ಬ್ರೇಕ್ ನಂತರ ನಟನೆಗೆ ಮರಳಿರುವ ಸುಮನ್, ತಮ್ಮದೇ ನಿರ್ಮಾಣ ಸಂಸ್ಥೆಯಿಂದ “ಬಬ್ರೂ” ಹಾಗೂ “ಬ್ರಾಹ್ಮಿ” ಚಿತ್ರಗಳ ನಿರ್ಮಾಣ ಸಹ ಮಾಡಿದ್ದಾರೆ. ಹಲವಾರು ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಲಾಕ್ಡೌನ್ ಸಂದರ್ಭದಲ್ಲಿ ಬೆಂಗಾಲಿ ನಿರ್ದೇಶಕ ಸಂಚಯನ್ ಚಕ್ರಬರ್ತಿಯವರ “ಲಾಕ್ಡೌನ್ ಡೈರೀಸ್” ಹಿಂದಿ ಕಿರುಚಿತ್ರ ಹಾಗೂ ಸಿಂಗಾಪುರ್ ನಲ್ಲಿರುವ ಪ್ರಶಸ್ತಿ ವಿಜೇತ ನಿರ್ದೇಶಕಿ ಶಿಲ್ಪ ಕ್ರಿಷ್ನನ್ ಶುಕ್ಲಾ ಅವರ ಇಂಗ್ಲಿಷ್ ಹಿಂದಿ ಮಿಶ್ರಿತ ಚಲನಚಿತ್ರ “ಡಾಟ್ಸ್” ನಲ್ಲಿ ಕೂಡ ಅಭಿನಯಿಸಿದ್ದಾರೆ. ಆದರೆ ಎಷ್ಟೋ ಜನರಿಗೆ ಸುಮನ್ ಬಗ್ಗೆ ಗೊತ್ತಿರದ ವಿಷಯವೆಂದರೆ ಆಕೆ ಮ್ಯಾರಥಾನ್(42.2km) ರನ್ನ ರ್ ಎಂಬುದು. ಅಮೇರಿಕಾ ಹಾಗೂ ಬೆಂಗಳೂರಿನ ಹಲವಾರು ಮ್ಯಾರಥಾನ್ ರೇಸ್ಗಳಲ್ಲಿ ಇವರು ಭಾಗವಹಿಸಿದ್ದಾರೆ. ಈಗ ಈ ಇಪ್ಪತ್ತು ದಿನಗಳ ಪ್ರತಿದಿನ ಇಪ್ಪತ್ತು ಕಿಲೋಮೀಟರ್ ಓಡುವ ಈ ಅಭಿಯಾನದ ಮೂಲಕ fund raise ಮಾಡಿ ಕಷ್ಟದಲ್ಲಿರುವವರಿಗೆ ನೆರವಾಗುವ ಆಸೆ ಇವರದ್ದು.

ಬೆಂಗಳೂರು2 years ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು2 years ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು2 years ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು2 years ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು2 years ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು2 years ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು2 years ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು2 years ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured5 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured7 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured5 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured3 years ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ7 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured6 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured7 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured2 years ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured7 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured3 years ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ