Featured
ಕೊರೊನಾ ವಿರುದ್ಧ “ತ್ರಿಶೂಲಾಸ್ತ್ರ” ಪ್ರಯೋಗಕ್ಕೆ ಸಿದ್ಧತೆ- ತಜ್ಞರ ವರದಿಯನ್ನು ಜಾರಿಗೆ ತರುತ್ತಾ ಸರ್ಕಾರ..?
![Corona](https://risingkannada.com/wp-content/uploads/2020/07/social-distancing-5044598_640.jpg)
ರೈಸಿಂಗ್ ಕನ್ನಡ:
ಬೆಂಗಳೂರು:
ಕೊರನಾ ವಿರುದ್ಧ ಸರ್ಕಾರ ಅಂತಿಮ ಸಮರಕ್ಕೆ ಸಿದ್ಧವಾಗಿದೆ. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳೆರಡೂ ಕೈ ಜೋಡಿಸಿ ಮಹಾಮಾರಿ ವಿರುದ್ಧ ಸಮರಕ್ಕೆ ಸಿದ್ಧವಾಗಿವೆ. ಕರ್ನಾಟಕದಲ್ಲಿ ಪ್ರತಿದಿನ ಕೊರೊನಾ ಸೋಂಕಿತರ ಸಂಖ್ಯೆ ಏರುತ್ತಿದೆ. ಕೊರೊನಾ ತಡೆಯಲು ಯಾವೆಲ್ಲಾ ಮಾರ್ಗಗಳಿವೆ ಅನ್ನುವ ಬಗ್ಗೆ ತಜ್ಞರ ಬಳಿ ಸರ್ಕಾರ ಸಲಹೆ ಕೇಳಿದೆ. ಈ ಮಧ್ಯೆ ಸರ್ಕಾರಕ್ಕೆ ತಜ್ಞರ ತಂಡ ಕೊರೊನಾ ವಿರುದ್ಧ ತ್ರಿಶೂಲಾಸ್ತ್ರ ಬಳಸಲು ಸಲಹೆ ನೀಡಿದ್ದಾರೆ.
ಏನಿದು ತ್ರಿಶೂಲಾಸ್ತ್ರ..?
ಅಸ್ತ್ರ 01: ಕಂಟೈನ್ಮೆಂಟ್ ಝೋನ್ ಪ್ರದೇಶವನ್ನು ಗುರುತಿಸಿ ಎಲ್ಲ ರಸ್ತೆಗಳನ್ನು ಬಂದ್ ಮಾಡಬೇಕು. ಪ್ರವೇಶ ಮತ್ತು ನಿರ್ಗಮನಕ್ಕಾಗಿ ಕೇವಲ ಒಂದು ಗ್ಯಾಪ್ ಮಾತ್ರ ಇರಬೇಕು. ಸಾರ್ವಜನಿಕ ಸಾರಿಗೆಯನ್ನು ಬಂದ್ ಮಾಡಬೇಕು. ತುರ್ತು ಸಂದರ್ಭದಲ್ಲಿ ಮಾತ್ರ ಖಾಸಗಿ ವಾಹನಕ್ಕೆ ಅವಕಾಶ ನೀಡಬೇಕು.
ಅಸ್ತ್ರ 02: ಕೋವಿಡ್ ಪಾಸಿಟಿವ್ ವ್ಯಕ್ತಿಗಳ ಪ್ರೈಮರಿ ಮತ್ತು ಸೆಕಂಡರಿ ಕಾಂಟ್ಯಾಕ್ಟ್ಗಳನ್ನು ಬೇಗನೆ ಟ್ರೇಸ್ ಮಾಡಬೇಕು. ಅವರು ವಾಸಿಸುವ ಕಂಟೈನ್ಮೆಂಟ್ ಝೋನ್ಗಳಲ್ಲಿ ಪೂರ್ಣ ನಿರ್ಬಂಧ ವಿಧಿಸಬೇಕು.
ಅಸ್ತ್ರ 03: ಸೋಂಕಿತ ವ್ಯಕ್ತಿಗಳ ಕಟುಂಬ ಸದಸ್ಯರನ್ನು ಕ್ವಾರಂಟೈನ್ ಮಾಡುವುದರ ಜೊತೆಗೆ ಅವರನ್ನು ಮನೆಯಿಂದ ಹೊರ ಬಾರದಂತೆ ನಿರ್ಬಂಧಿಸಬೇಕು.
ಕೊರೊನಾ ವಿರುದ್ಧದ ಈ ತಂತ್ರ ಕೇರಳದ ಕಾಸರಗೋಡು ಮತ್ತು ಕಣ್ಣೂರು ಜಿಲ್ಲೆಗಳಲ್ಲಿ ಯಶಸ್ಸು ಕಂಡಿತ್ತು. ತಿರುವನಂತಪುದಲ್ಲೂ ಇದನ್ನು ಜಾರಿ ಮಾಡಲಾಗಿದೆ. ಈ ನಿಯಮಗಳು ಜಾರಿಗೆ ಬಂದ ಮೇಲೆ ಕೇರಳದಲ್ಲಿ ಸೋಂಕಿತರ ಪ್ರಮಾಣ ಕಡಿಮೆ ಆಗುತ್ತಿದೆ.
ಈ ಮಧ್ಯೆ ಅಂತರ್ ಜಿಲ್ಲೆ ಮತ್ತು ಅಂತರ್ ರಾಜ್ಯ ಪ್ರಯಾಣಕ್ಕೂ ನಿರ್ಬಂಧ ವಿಧಿಸಬೇಕು ಎಂದು ತಜ್ಞರ ತಂಡ ಸಲಹೆ ನೀಡಿದೆ. ಟ್ರಿಪಲ್ ಲಾಕ್ಡೌನ್ ಮಾದರಿಯಿಂದ ಮಾತ್ರ ಕೊರೊನಾ ಏರಿಕೆಯನ್ನು ತಡೆಯಬಹುದು ಎಂದು ತಜ್ಞರ ತಂಡ ಅಭಿಪ್ರಾಯ ಪಟ್ಟಿದೆ.
![](https://risingkannada.com/wp-content/uploads/2020/04/RISING-KANNADA-logo-150px.jpg)
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?