Featured
ಗಗನಕ್ಕೇರಿದ ಚಿನ್ನದ ಬೆಲೆ- 24ಕ್ಯಾರೆಟ್ ಚಿನ್ನಕ್ಕೆ 50 ಸಾವಿರ ರೂಪಾಯಿ- ಮೂರು ದಿನದಲ್ಲಿ 1000 ರೂ.ಹೆಚ್ಚಳ

ರೈಸಿಂಗ್ ಕನ್ನಡ ನ್ಯೂಸ್ ಡೆಸ್ಕ್:
ಮದುವೆಗಳು ನಡೆಯುತ್ತಿಲ್ಲ, ಜನರು ಮನೆಯಿಂದಲ ಹೊರ ಬರೋದಿಕ್ಕೆ ನೂರುಬಾರಿ ಯೋಚನೆ ಮಾಡ್ತಾರೆ, ಕೈಯಲ್ಲಿ ಕಾಸು ಕೂಡ ಓಡಾಡ್ತಿಲ್ಲ. ಆದ್ರೆ ಚಿನ್ನದ ಬೆಲೆ ಮಾತ್ರ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಚಿನ್ನಕ್ಕೆ ಬೇಡಿಕೆ ಇಲ್ಲದಿದ್ದರೂ ಬೆಲೆ ಮಾತ್ರ ಕಡಿಮೆ ಆಗುತ್ತಿದೆ. ಡಿಮ್ಯಾಂಡ್ ಇದ್ದಾಗ ಬೆಲೆ ಹೆಚ್ಚಾಗುತ್ತದೆ, ಡಿಮ್ಯಾಂಡ್ ಇಲ್ಲದಾಗ ಬೆಲೆ ಕಡಿಮೆಯಾಗುತ್ತದೆ ಅನ್ನೋ ನೀತಿಯನ್ನು ಚಿನ್ನಮಾತ್ರ ಉಲ್ಟಾಪಲ್ಟಾ ಮಾಡಿದೆ.
3 ದಿನದಲ್ಲಿ ಸಾವಿರ ರೂಪಾಯಿ ಏರಿಕೆ..!
ಕಳೆದ ಮೂರುದಿನಗಳಲ್ಲಿ ಚಿನ್ನದ ಬೆಲೆ ಸುಮಾರು ಸಾವಿರ ರೂಪಾಯಿಯಷ್ಟು ಏರಿಕೆ ಆಗಿದೆ. 40 ಸಾವಿರದ ಆಸುಪಾಸಿನಲ್ಲಿದ್ದ ಚಿನ್ನದ ಬೆಲೆ ಈಗ 50 ಸಾವಿರದ ಹತ್ತಿರಕ್ಕೆ ಬಂದು ನಿಂತಿದೆ. ಶುಕ್ರವಾರ ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂಗೆ 46390 ರೂಪಾಯಿ ಆಗಿತ್ತು. 24 ಕ್ಯಾರೆಟ್ ಪ್ಯೂರ್ ಚಿನ್ನ 10 ಗ್ರಾಂಗೆ 50600 ರೂಪಾಯಿಗಳಾಗಿತ್ತು. ಕಳೆದ ಮೂರುದಿನಗಳಿಂದ ಚಿನ್ನದ ಬೆಲೆ ಏರಿಕೆ ಆಗುತ್ತಲೇ ಇದೆ.
ಚಿನ್ನದ ದರದಲ್ಲಿ ಭಾರೀ ಏರಿಳಿಕೆಗೆ ಹಲವು ಕಾರಣಗಳಿವೆ. ಅನ್ಲಾಕ್ ಫೇಸ್ 1ಮತ್ತು 2ರ ವೇಳೆ ಜನ ಚಿನ್ನ ಖರೀದಿಯಲ್ಲಿ ಆಸಕ್ತಿ ಹೊಂದಿದ್ದರು. ಆದರೆ ಕಳೆದ ವಾರದಿಂದ ಚಿನ್ನ ಖರೀದಿಯಲ್ಲೂ ಬದಲಾವಣೆ ಆಗಿದೆ. ಈ ಮಧ್ಯೆ ಬೆಳ್ಳಿ ಬೆಲೆಯಲ್ಲೂ ಏರಿಕೆಯಾಗಿದೆ. ಬೆಳ್ಳಿ ಒಂದು ಕೆಜಿಗೆ 52000 ರೂಪಾಯಿಗಳ ಆಸುಪಾಸಿನಲ್ಲಿದೆ.
55000ದತ್ತ ಚಿನ್ನ..?
ಈ ಮಧ್ಯೆ ಚಿನ್ನದ ಬೆಲೆ ಮತ್ತಷ್ಟು ಹೆಚ್ಚಲಿದೆ ಎಂದು moneycontrol.comವರದಿ ಮಾಡಇದೆ. ತಜ್ಞರ ಅಭಿಪ್ರಾಯದಂತೆ ಮುಂದಿನ ವರ್ಷದ ಹೊತ್ತಿಗೆ ಚಿನ್ನ 55000 ರೂಪಾಯಿಗಳನ್ನು ದಾಟಿದ್ರೂ ಅಚ್ಚರಿ ಇಲ್ಲ. ಯುದ್ಧದ ವಾತಾವರಣ, ಅಂತರಾಷ್ಟ್ರೀಯ ಮಾರುಕಟ್ಟೆ ಸ್ಥಿತಿ ಮತ್ತು ಭಾರತದ ಆರ್ಥಿಕತೆ ಎಲ್ಲವೂ ಚಿನ್ನದ ಮೇಲೆ ಪ್ರಭಾವ ಬೀರುತ್ತಿವೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?