Featured
ಬೆಚ್ಚಿಬೀಳಿಸಿದ ಕೊರೊನಾ ವರದಿ- ದೇಶಾದ್ಯಂತ ಆಗಸ್ಟ್ 21ರ ವೇಳೆಗೆ 6.45 ಲಕ್ಷ ಸೋಂಕಿತರು

ರೈಸಿಂಗ್ ಕನ್ನಡ :
ನ್ಯೂಸ್ ಡೆಸ್ಕ್ :
ಕೊರೊನಾ ಸುನಾಮಿಗೆ ಇಡೀ ದೇಶ ತತ್ತರಿಸಿ ಹೋಗಿದ್ದು ಮುಂದಿನ ತಿಂಗಳು ಆಗಸ್ಟ್ 21ರ ವೇಳೆಗೆ 6.45 ಲಕ್ಷ ಸೋಂಕಿತರಾಗಲಿದ್ದಾರೆ ಎಂದು ವರದಿಯೊಂದು ಹೇಳಿದೆ.
ಅನ್ಲಾಕ್ ಮಾಡಿದ್ದೆ ತಡ ಕೊರೊನಾ ಕಾಡ್ಗಿಚ್ಚಿನಂತೆ ಹರಡಿ ಪ್ರತಿ ದಿನ ಸಾವಿರಾರು ಮಂದಿ ಸೋಂಕಿತರಾಗುತ್ತಿದ್ದು ಸಾವಿನ ಸಂಖ್ಯೆ ಹೆಚ್ಚುತ್ತಿದೆ. ಇದೀಗ ಮತ್ತೊಂದು ಆಘಾತಕಾರಿ ಸುದ್ದಿಯೆಂದರೆ ಮುಂದಿನ ತಿಂಗಳು ಆಗಸ್ಟ್ 21 ರ ವೇಳೆಗೆ 6,45,700 ಮಂದಿ ಸೋಂಕಿಗೆ ಗುರಿಯಾಗಲಿದ್ದಾರೆ ಎನ್ನುವ ಆಘಾತಕಾರಿ ಹೊರ ಬಿದ್ದಿದೆ.

ಇನ್ನು ಮಹಾರಾಷ್ಟ್ರದಲ್ಲಿ ಕೊರೊನಾ ಆರ್ಭಟ ಜೋರಾಗಿದ್ದು ಆಗಸ್ಟ್ ಒಂದರ ವೇಳೆಗೆ ಒಂದು ಲಕ್ಷ ದಾಟಬಹುದೆಂದು ಹೇಳಿದೆ. ಇನ್ನು ರಾಷ್ಟ್ರರಾಜಧಾನಿ ದೆಹಲಿ ಅಗಸ್ಟ್ 4ರವೇಳೆಗೆ 30 ಸಾವಿರಕ್ಕೂ ಹೆಚ್ಚು ಸೋಂಕಿತರು ಸಿಗಬಹುದೆಂದು ಅಂದಾಜಿಸಲಾಗಿದೆ.
ಕೊರೊನಾಸುರಕ್ಕೆ ನಲುಗಿರುವ ಭಾರತ, ಅಮೇರಿಕಾ, ಬ್ರೇಜಿಲ್ ನಂತರ ಇದೀಗ ಜಗತ್ತಿನಲ್ಲೆ ಅತಿ ಹೆಚ್ಚು ಹಾನಿಗೊಳಗಾದ ಮೂರನೇ ರಾಷ್ಟ್ರವೆನಿಸಿದೆ. ಈವರೆಗೂ 7.7 ಲಕ್ಷ ಸೋಂಕಿತರಿದ್ದಾರೆ.ಇದರಲ್ಲಿ 2.7 ಲಕ್ಷ ಪ್ರಕರಣಗಳು ಸಕ್ರಿಯವಾಗಿವೆ. ದೇಶದಲ್ಲಿ ಇದುವರೆಗೂ 21, 130 ಮಂದಿ ಸಾವನಪ್ಪಿದ್ದಾರೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?