Featured
ಬರ್ತ್ಡೇಗೆ ವಿಷ್ ಮಾಡಲು 1500 ಕಿ.ಮೀ ಪ್ರಯಾಣ – ಧೋನಿ ಮೇಲೆ ಪಾಂಡ್ಯಾ ಸಹೋದರರ ಪ್ರೀತಿಯ ಧ್ಯಾನ..!
![](https://risingkannada.com/wp-content/uploads/2020/07/Krunal-Dhoni.jpeg)
ರೈಸಿಂಗ್ ಕನ್ನಡ ಸ್ಪೋರ್ಟ್ಸ್ ಡೆಸ್ಕ್:
ಪ್ರೀತಿಪಾತ್ರರಾದವರ ಬರ್ತ್ಡೇಗೆ ನೀವೇನು ಮಾಡಬಹುದು. ಹತ್ತಿರದಲ್ಲಿ ಇದ್ದರೆ ಒಂದು ಕೇಕ್ ತೆಗೊಂಡು ಹೋಗಿ ವಿಷ್ ಮಾಡಬಹುದು. ಟೈಮ್ ಸರಿಯಾಗಿ ಇದ್ರೆ ಅವರ ಜೊತೆ ಒಂದು ಟ್ರಿಪ್ ಹೋಗಬಹುದು. ಆದರೆ ಈಗ ಕರೋನಾ ಕಾಲ. ಯಾರ ಟೈಮ್ ಕೂಡ ಸರಿಯಾಗಿಲ್ಲ. ಬರ್ತ್ ಡೇ ಆಗಿಲಿ, ಮದ್ವೆನೇ ಆಗ್ಲಿ ಮನೆಯಿಂದ ಹೊರಬಂದ್ರೆ ಅಪಾಯ ಗ್ಯಾರೆಂಟಿ. ಇಂತಹದ್ದರಲ್ಲೂ ತಮ್ಮ ಪ್ರೀತಿಯ ಕ್ರಿಕೆಟರ್ ಮಹೇಂದ್ರ ಸಿಂಗ್ ಧೋನಿಗೆ ವಿಷ್ ಮಾಡಲು 1500 ಕಿಲೊಮೀಟರ್ ಪ್ರಯಾಣ ಮಾಡಿದ ಕ್ರಿಕೆಟಿಗರಿದ್ದಾರೆ..!
ಮಹೇಂದ್ರ ಸಿಂಗ್ ಧೋನಿ ಅಂದ್ರೆ ಅದಷ್ಟೋ ಜನರಿಗೆ ರೋಲ್ ಮಾಡೆಲ್. ಕೆಲವು ಕ್ರಿಕೆಟಿಗರಿಗಂತೂ ಗಾಡ್ ಫಾದರ್ಗಿಂತ ಒಂದು ಕೈ ಮೇಲೆಯೇ. ಅದರಲ್ಲಿ ಹಾರ್ಧಿಕ್ ಮತ್ತು ಕೃನಾಲ್ ಪಾಂಡ್ಯ ಸಹೋದರರಿಗೆ ಮಾಹಿ ಮೇಲೆ ಅತೀವ ಪ್ರೀತಿ. ಜುಲೈ 7ರಂದು ಧೋನಿ 39ನೇ ಹುಟ್ಟುಹಬ್ಬ ಆಚರಿಸಿಕೊಂಡ್ರು. ಮಾಹಿಗೆ ಅಚ್ಚರಿ ಎಂಬಂತೆ ಪಾಂಡ್ಯಾ ಸಹೋದರರು ಧೋನಿ ಮನೆಯ ಮುಂದೆ ಬಂದು ನಿಂತಿದ್ದರು. ಅಷ್ಟೇ ಅಲ್ಲ ತಾವೇ ತಯಾರಿಸಿಕೊಂಡು ಬಂದಿದ್ದ ಕೇಕ್ ಅನ್ನು ಧೋನಿ ಕೈಯಿಂದಲೇ ಕಟ್ ಮಾಡಿಸಿ ಸಂಭ್ರಮಿಸಿದ್ರು.
ಅಂದಹಾಗೇ ಮಹೇಂದ್ರ ಸಿಂಗ್ ಧೋನಿ ತಮ್ಮ ರಾಂಚಿಯ ಫಾರ್ಮ್ ಹೌಸ್ನಲ್ಲಿ ಸಮಯ ಕಳೆಯುತ್ತಿದ್ದಾರೆ. ಪಾಂಡ್ಯಾ ಸಹೋದರರು ವಡೋದರಾದಲ್ಲಿದ್ದರು. ವಡೋದರಾದಿಂದ 1500 ಕಿಲೋಮೀಟರ್ ದೂರದ ರಾಂಚಿಗೆ ಸ್ಪೆಷಲ್ ಫ್ಲೈಟ್ ಮಾಡಿಕೊಂಡು ಬಂದು ಧೋನಿಗೆ ವಿಷಷ್ ಹೇಳಿದ್ದಾರೆ. ಕೃನಾಲ್ ಮತ್ತು ಹಾರ್ಧಿಕ್ ಪ್ರೀತಿ ನೋಡಿ ಮಾಹಿಗೆ ಮಾತೇ ಬರಲಿಲ್ಲ.
You may like
ಟೆಸ್ಟ್ ಸರಣಿ ನಡುವೆ ಅಭಿಮಾನಿಗಳಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದ ಆಲ್ರೌಂಡರ್
ಗಂಡು ಮಗುವಿಗೆ ಜನ್ಮ ನೀಡಿದ ಹಾರ್ದಿಕ್ ದಂಪತಿ- ಕ್ರಿಕೆಟಿಗರಿಂದ ಶುಭಾಷಯಗಳ ಮಹಾಪೂರ
ಗರ್ಭಿಣಿ ಪತ್ನಿ ಜೊತೆ ಹಾರ್ದಿಕ್ ಪಾಂಡ್ಯಾ ಫೋಟೋ ಶೂಟ್- ಕ್ಯೂಟ್ ಆಗಿ ಕಾಣ್ತಿದ್ದಾರೆ ನತಾಶಾ
ಕೂಲ್ ಕ್ಯಾಪ್ಟನ್ ಹುಟ್ಟುಹಬ್ಬಕ್ಕೆ ಸ್ಪೆಷಲ್ ಗಿಫ್ಟ್ – ಟ್ರೆಂಡಿಂಗ್ನಲ್ಲಿ ಬ್ರಾವೋ “ನಂ7” ಸಾಂಗ್
ಪತ್ನಿಗಾಗಿ ನಳಮಹಾರಾಜನಾದ ಹಾರ್ದಿಕ್ ಪಾಂಡ್ಯ – ಗರ್ಭಿಣಿ ಮಡದಿಗಾಗಿ ಮಾಡಿಕೊಟ್ಟ ಅಡುಗೆ ಏನು ಗೊತ್ತಾ?