Featured
ಏನಿದು UAPA ಕಾಯ್ದೆ..? : ಭಯೋತ್ಪಾದನೆ ಇಲ್ಲದಂತೆ ಮಾಡ್ತಾರಾ ಮೋದಿ-ಅಮಿತ್ ಶಾ ಜೋಡಿ..?

ನವದೆಹಲಿ : ಸದ್ಯ ಇಡೀ ದೇಶದಲ್ಲಿ ಚರ್ಚೆ ಆಗ್ತಿರೋ ಪ್ರಮುಖ ವಿಷಯ ಅಂದ್ರೆ ಅದು ಭಯೋತ್ಪಾದನೆ ವಿಚಾರ. ಅದರಲ್ಲಿ ಭಯೋತ್ಪಾದನೆ ವಿರೋಧಿ ಮಸೂದೆಗೆ (ತಿದ್ದುಪಡಿ) ಶುಕ್ರವಾರ ರಾಜ್ಯಸಭೆಯಲ್ಲಿ ಅನುಮೋದನೆ ಸಿಕ್ಕಿದೆ. ಇದರಿಂದ ಭಯೋತ್ಪಾದಕ ಸಂಘಟನೆ ಜೊತೆ ಸಂಬಂಧ ಹೊಂದಿರುವ ಯಾವುದೇ ವ್ಯಕ್ತಿಯನ್ನು ಉಗ್ರಗಾಮಿ ಎಂದು ಘೋಷಿಸಿ, ಆತನ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಇದೆ.
ಏನಿದು UAPA..?
UAPA ಅಂದ್ರೆ Unlawful Activities (Prevention) Act. ಅಂದ್ರೆ, ಕಾನೂನು ಬಾಹಿರ ಚಟುವಟಿಕೆಗಳ (ತಡಗಟ್ಟುವಿಕೆ) ಕಾಯ್ದೆ ಎಂದರ್ಥ. ಈ ಕಾಯ್ದೆಗೆ ಈಗ ತಿಡ್ಡುಪಡಿ ತಂದಿದ್ದು, ಜುಲೈ 24ರಂದು ಲೋಕಸಭೆಯಲ್ಲಿ ಅಂಗೀಕಾರವಾಗಿತ್ತು. ಆದ್ರೆ, ಇದೇ ಮಸೂದೆಯನ್ನ ರಾಜ್ಯಸಭೆಯಲ್ಲಿ ಮಂಡಿಸಿದಾಗ ಪ್ರತಿಪಕ್ಷಗಳು ಸಂಸದೀಯ ಸಮಿತಿಯ ಮರುಪರಿಶೀಲನೆ ಮಾಡಿ ಎಂದಿದ್ವು. ಆದ್ರೆ, ಪ್ರತಿಪಕ್ಷಗಳ ನಿಲುವಳಿಗೆ ಬಹುಮತ ಸಿಗಲಿಲ್ಲ. ಹೀಗಾಗಿ, ಶುಕ್ರವಾರ ರಾಜ್ಯಸಭೆಯಲ್ಲಿ ಮಸೂದೆ ಪಾಸ್ ಆಯ್ತು.
UAPA ತಿದ್ದುಪಡಿ ಮಸೂದೆ ಪ್ರಕಾರ, ಇನ್ಮುಂದೆ ಭಯೋತ್ಪಾದನಾ ಚಟುವಟಿಕೆಗಳಲ್ಲಿ ಪಾಲ್ಗೊಂಡರೇ, ಪ್ರೋತ್ಸಾಹಿಸಿದರೆ ಅಥವಾ ಉಗ್ರಗಾಮಿ ಕೃತ್ಯಕ್ಕೆ ಸಹಕರಿಸಿದರೂ ಅಂತಹ ವ್ಯಕ್ತಿಗಳನ್ನ ಭಯೋತ್ಪಾದಕರು ಎಂದು ಘೋಷಿಸಬಹುದು.
ಅಮಿತ್ ಶಾ ಹೇಳಿದ್ದು ಏನು..?
ರಾಜ್ಯಸಭೆಯಲ್ಲಿ ಚರ್ಚೆಯಲ್ಲಿ ಪಾಲ್ಗೊಂಡಿದ್ದ ಗೃಹ ಸಚಿವ ಅಮಿತ್ ಶಾ, UAPA ತಿದ್ದುಪಡಿ ಮಸೂದೆ ಕುರಿತು ಸ್ಪಷ್ಟನೆ ನೀಡಿದ್ರು. ಈ ಕಾಯ್ದೆಯಲ್ಲಿ ನಾಲ್ಕು ಹಂತದ ಪರಿಶೀಲನೆ ನಡೆಯುತ್ತೆ. ಮಾನವ ಹಕ್ಕುಗಳ ಉಲ್ಲಂಘನೆ ಆಗುವುದಿಲ್ಲ ಎಂದ್ರು. ಕೇವಲ ಭಯೋತ್ಪಾದಕ ಸಂಘಟನೆಗಳನ್ನ ಗುರಿತಿಸಿ, ನಿಷೇಧ ಹೇರಿದರೆ ಅಷ್ಟೇ ಸಾಲದು. ಆ ಸಂಘಟನೆಗಳಲ್ಲಿ ಇರುವ ವ್ಯಕ್ತಿಗಳನ್ನ ಗುರುತಿಸಿ, ಹೆಸರಿಸಬೇಕಾದ ಅಗತ್ಯ ಇದೆ ಎಂದು ಅಮಿತ್ ಶಾ ಪ್ರತಿಪಾದಿಸಿದರು. ಒಂದ್ವೇಳೆ ಸಂಘಟನೆ ನಿಷೇಧ ಮಾಡಿದ್ರೆ, ಆ ವ್ಯಕ್ತಿ ಮತ್ತೊಂದು ಸಂಘಟನೆಯಲ್ಲಿ ಸೇರಿಕೊಳ್ತಾರೆ. ಹೀಗಾಗಿ, ವ್ಯಕ್ತಿಯನ್ನೇ ಗುರುತಿಸಿದ್ರೆ, ಮುಂದಿನ ಪ್ರಮಾದಗಳು ಆಗೋದಿಲ್ಲ ಎಂದು ಶಾ ಹೇಳಿದ್ರು.
ಭಯೋತ್ಪಾದನೆಗೆ ಯಾವುದೇ ಧರ್ಮ ಇಲ್ಲ ಎಂದ ಅಮಿತ್ ಶಾ, ಮಾನವೀಯತೆ ವಿರುದ್ಧ
ಇರುವವರು ಭಯೋತ್ಪಾದಕರು. ಉಗ್ರವಾದದ ವಿರುದ್ಧ ಕಠಿಣ ಕಾನೂನು ಜಾರಿ ಮಾಡಲು ಎಲ್ಲಾ ಪಕ್ಷಗಳ ಸಹಕಾರ
ಬೇಕು ಎಂದು ಇದೇ ವೇಳೆ ಅಮಿತ್ ಶಾ ಕೋರಿದ್ರು.
ಈ ನಡುವೆ UAPA ತಿಡ್ಡುಪಡಿಗೆ ಪ್ರತಿಪಕ್ಷಗಳು ವಿರೋಧ ವ್ಯಕ್ತಪಡಿಸಿವೆ. ಅದರಲ್ಲೂ ಕಾಂಗ್ರೆಸ್, ಈ ತಿದ್ದುಪಡಿ ವಿರುದ್ಧ ಸುಪ್ರೀಂಕೋರ್ಟ್ಗೆ ಹೋಗುವುದಾಗಿ ಕಾಂಗ್ರೆಸ್ ಹಿರಿಯ ನಾಯಕ ಚಿದಂಬರಂ ಹೇಳಿದ್ದಾರೆ. ಈ ಮಸೂದೆ ವೈಯಕ್ತಿಕ ಕಾರಣಗಳಿಗೆ ದುರುಪಯೋಗ ಆಗಬಹುದು ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
You may like

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?















