Featured
ಗುರುಮಿಟ್ಕಲ್‌ನಲ್ಲಿ ಕೊರೊನಾ ಜಾಗೃತಿ ಮೂಡಿಸಿದ ಸರ್ಕಲ್ ಇನ್ಸ್‌ಪೆಕ್ಟರ್ – ಸಾಮಾಜಿಕ ಅಂತರ ಕಾಪಾಡಲು ರೆಡಿ

ರೈಸಿಂಗ್ ಕನ್ನಡ :
ಪ್ರತಿನಿಧಿ – ದುರ್ಗೇಶ್ ಮಂಗಿಹಾಳ, ಯಾದಗಿರಿ :

ದಿನದಿಂದ ದಿನಕ್ಕೆ ಕೊರೊನಾ ಸೋಂಕು ಹೆಚ್ಚಾಗ್ತಿರುವ ಹಿನ್ನಲೆಯಲ್ಲಿ, ಯಾದಗಿರಿಯ ಗುರುಮಿಟ್ಕಲ್ ಪಟ್ಟಣದಲ್ಲಿ ಪೊಲೀಸರೇ ಕೊರೊನಾ ಬಗ್ಗೆ ಜನ ಜಾಗೃತಿ ಮೂಡಿಸಿದ್ದಾರೆ. ನಗರದ ಬಸ್ ನಿಲ್ದಾಣ, ಮಾರುಕಟ್ಟೆ ಸೇರಿದಂತೆ ಪ್ರಮುಖ ಜನ ನಿಬಿಡ ಸ್ಥಳದಲ್ಲಿ ಗುರುಮಿಟ್ಕಲ್ ಸಿಪಿಐ ದೇವಿಂದ್ರಪ್ಪ ಅವರು ಸ್ವತಹ ಮೈಕ್ ಅನೌನ್ಸ್ ಮಾಡಿದ್ರು.
ಈಗಾಗಲೇ ಜಿಲ್ಲೆಯಲ್ಲಿ ಕೊರೊನಾ ಸಂಖ್ಯೆ 1016 ಕ್ಕೆ ಏರಿದೆ. ಜನ್ರು ಮನೆಯಿಂದ ಸುಖಾ ಸುಮ್ಮನೆ ಓಡಾಟ ಮಾಡದಂತೆ ಸೂಚಿಸಿದ್ರು. ಇನ್ನೂ ಕೆಲಸ ಕಾರ್ಯ, ವ್ಯಾಪಾರ ವಹಿವಾಟಗೆ ಆಗಮಿಸುವ ಜನರು ಕಡ್ಡಾಯವಾಗಿ ಮಾಸ್ಕ್ ಧರಿಸಿಬೇಕು, ಆಗಾಗ ಸಾನಿಟೈಸ್ ಉಪಯೋಗಿಸಲೇಬೇಕು ಅಂದ್ರು.
ಸಾರ್ವಜನಿಕ ಸ್ಥಳಗಳಲ್ಲಿ ಕೆಮ್ಮುವಾಗ, ಸೀನುವಾಗ ಬಾಯಿಗೆ ಬಟ್ಟೆ ಮುಚ್ಚಿ ಸೀನಬೇಕು. ಪಟ್ಟಣ ಸೇರಿದಂತೆ ಇತರ ಗ್ರಾಮದಲ್ಲಿ ಸಾಮಾಜಿಕ ಅಂತರ ಕಡ್ಡಾಯವಾಗಿ ಪಾಲಿಸಬೇಕೆಂದು ಜನರಲ್ಲಿ ಸರ್ಕಲ್ ಇನ್ಸ್‌ಪೆಕ್ಟರ್ ದೇವಿಂದ್ರಪ್ಪ ಧೂಳಖೇಡ ಜನ ಜಾಗೃತಿ ಮೂಡಿಸಿದ್ರು. ಪೊಲೀಸರ ಈ ಕಾರ್ಯಕ್ಕೆ, ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?