Featured
ಕಬಿನಿಯಲ್ಲಿ “ಬ್ಲ್ಯಾಕ್ ಪ್ಯಾಂಥರ್” – ಅಚ್ಚರಿಗೊಂಡ ಪ್ರವಾಸಿಗರು..!

ರೈಸಿಂಗ್ ಕನ್ನಡ :
ನ್ಯೂಸ್ ಡೆಸ್ಕ್:
ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಕಬಿನಿಯ ಕಾಕನಕೋಟೆ ಅರಣ್ಯದಲ್ಲಿ ಅಪರೂಪದ ಕಪ್ಪು ಚಿರತೆಯೊಂದು ಸಫಾರಿಗೆ ಹೋಗಿದ್ದ ಪ್ರವಾಸಿಗರಿಗೆ ಕಾಣಿಸಿಕೊಂಡಿದೆ.

ಆರು ತಿಂಗಳ ಹಿಂದೆಯಷ್ಟೆ ಈ ಚಿರತೆ ನಾಗರಹೊಳೆಯಲ್ಲಿ ಕಾಣಿಸಿತ್ತು. ಪ್ರವಾಸಿಗರ ಕಣ್ಣಿಗೆ ಬಿದ್ದಿತ್ತು. ಸಫಾರಿಗೆ ಹೋದಾಗ ಚಿರತೆಗಳು ಸಿಗುವುದು ಸಾಮಾನ್ಯ. ಈಗ ಸಿಕ್ಕಿರುವ ಕಪ್ಪು ಚಿರತೆ ಕೂಡ ಅಪರೂಪ. ಕಳೆದ ಐದು ವರ್ಷದಿಂದ ಕಪ್ಪು ಚಿರತೆ ಕಬಿನಿಯಲ್ಲಿ ವಾಸವಾಗಿದೆ.
ಕಬಿನಿ ಕಾಡಲ್ಲಿ ಗಾಂಭೀರ್ಯದಿಂದ ಹೆಜ್ಜೆ ಹಾಕುತ್ತಿರುವ ಫೋಟೋ ವೈರಲ್ ಆಗಿದೆ. ಕಪ್ಪು ಚಿರತೆ ಪ್ರತ್ಯಕ್ಷವಾಗಿರುವ ಕುರಿತು ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಹುಲಿ ಯೋಜನೆ ನಿರ್ದೇಶಕ ಮಹೇಶ್ ಕುಮಾರ್ ಇದರಲ್ಲಿ ಏನು ಅಚ್ಚರಿ ಇಲ್ಲ. ಇದು ಹೊಸದೇನಲ್ಲ ಎಂದಿದ್ದಾರೆ.
You may like
ದಾವಣಗೆರೆ ಕೆಎಸ್ಆರ್ಟಿಸಿ ಸಿಬ್ಬಂದಿಗಳಿಗೆ ಉಚಿತ ಮಾಸ್ಕ್ ವಿತರಣೆ
ಮುಂಗಾರು ಅಧಿವೇಶನ: ಮೊದಲ ದಿನವೇ 30 ಸಂಸದರಿಗೆ ಕೊರೊನಾ ಸೋಂಕು
ತುಮಕೂರಿನಲ್ಲಿ ದ್ವಿಶತಕ ಬಾರಿಸಿದ ಕೊರೊನಾ: ಇಬ್ಬರು ಬಲಿ
ನಿಲ್ಲದ ಕೊರೊನಾ ಅಬ್ಬರ : 106 ಬಲಿ, 8,852 ಹೊಸ ಕೇಸ್
2021ರ ಅರಂಭದಲ್ಲೆ ಸಿಗಲಿದೆ ಕೊರೊನಾ ಲಸಿಕೆ : ಪುಣೆಯಲ್ಲಿ ಎರಡು ಲಸಿಕೆಗಳ ಮೇಲೆ ಪ್ರಯೋಗ
ರಾಜ್ಯದಲ್ಲಿ ಕೊರೊನಾ ಅಟ್ಟಹಾಸ: ದಾಖಲೆಯ 8,161 ಕೇಸ್, 148 ಬಲಿ