ವೈರಲ್
ಬೆಂಕಿ ಜೊತೆ ನಟಿ ನೋರಾ ಫತೇಹಿ ಸಖತ್ ಡ್ಯಾನ್ಸ್..! ವಿಡಿಯೋ ಫುಲ್ ವೈರಲ್

ಮುಂಬೈ : ಕೆನಡಾ ಬ್ಯೂಟಿ, ನಟಿ ನೋರಾ ಫತೇಹಿ ತನ್ನ ಡ್ಯಾನ್ಸ್ನಿಂದಲೇ ಫೇಮಸ್ ಆದವರು. ಸದ್ಯ ಭಾರತೀಯ ಚಿತ್ರರಂಗದಲ್ಲಿ ನಂಬರ್ ಒನ್ ಐಟಂ ಡ್ಯಾನ್ಸರ್ ಅಂದ್ರೆ ಅದು ನೋರಾ. ಅದಕ್ಕೆ ನಿದರ್ಶನ ಎಂಬುವಂತೆ ಹೊಸತೊಂದು ಡ್ಯಾನ್ಸ್ ವಿಡಿಯೋ ವೈರಲ್ ಆಗಿದೆ. ನೋರಾ, ಬೆಂಕಿಯೊಂದಿಗೆ ಸರಸವಾಡೋ ಡ್ಯಾನ್ಸ್ ವಿಡಿಯೋವನ್ನ ತನ್ನ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.
ಇದು ಮುಂಬರುವ ಸಿನಿಮಾ ಬಾಟ್ಲಾ ಹೌಸ್ ಚಿತ್ರದ ಐಟಂ ಹಾಡು. ಓ ಸಖಿ ಸಖಿ ಅನ್ನೋ ಈ ಹಾಡಿಗೆ ಕೇವಲ ಎರಡೇ ದಿನಗಳಲ್ಲಿ ಪ್ರಾಕ್ಟೀಸ್ ಮಾಡಿದ್ರಂತೆ. ಬೆಂಕಿಯೊಂದಿಗೆ ಡ್ಯಾನ್ಸ್ ಮಾಡೋದು ಅಂದ್ರೆ ಅದು ಅಷ್ಟು ಸುಲಭವಲ್ಲ. ಆದರೂ ಕೇವಲ ಎರಡೇ ದಿನಗಳಲ್ಲಿ ಬೆಂಕಿ ಜೊತೆ ಡ್ಯಾನ್ಸ್ ಮಾಡೋದನ್ನ ಕಲಿತೆ ಎಂದು ಬರೆದುಕೊಂಡಿದ್ದಾರೆ. ಅಲ್ಲದೆ, ಪ್ರಾಕ್ಟೀಸ್ ವಿಡಿಯೋವನ್ನ ಅಪ್ಲೋಡ್ ಕೂಡ ಮಾಡಿದ್ದಾರೆ.
ಈ ಹಾಡಿನ ಅನುಭವದ ಬಗ್ಗೆ ಮಾತ್ನಾಡಿರೋ ನಟಿ ನೋರಾ, ನನ್ನ ಹೃದಯ ಬಡಿತ ಹೆಚ್ಚಾಗಿತ್ತು. ಹಂದಿಯಂತೆ ನಾನು ಬೆರವರುತ್ತಿದ್ದೆ. ಆದರೆ, ಅತ್ಯಂತ ಕಡಿಮೆ ಅವಧಿಯಲ್ಲಿ ನಾನು ಹಾಗು ನಮ್ಮ ತಂಡ ಅಂದುಕೊಂಡಿದ್ದನ್ನ ಸಾಧಿಸಿದ್ದೇವೆ. ಹೊಸ ಕಲೆಯನ್ನ ನಾನು ಕಲಿತಿದ್ದೇನೆ. ಇದರಿಂದ ನನಗೆ ಹೆಮ್ಮೆ ಎನಿಸುತ್ತಿದೆ ಎಂದು ನಟಿ ನೋರಾ ಹೇಳಿದ್ದಾರೆ.
ಒಟ್ಟಿನಲ್ಲಿ ಬೆಂಕಿಯೊಂದಿಗಿನ ಡ್ಯಾನ್ಸ್ ಸೂಪರ್ ಆಗಿದ್ದು, ಇದೇ ಆಗಸ್ಟ್ 15ರಂದು ಬಾಟ್ಲಾ ಹೌಸ್ ಸಿನಿಮಾ ರಿಲೀಸ್ ಆಗ್ತಿದೆ.. ನಟಿ ನೋರಾ ಬೆಂಕಿಯೊಂದಿಗೆ ಮಾಡಿರೋ ಡ್ಯಾನ್ಸ್ ಹೇಗಿದೆ ಅನ್ನೋದರ ಸ್ಯಾಂಪಲ್ ಇಲ್ಲಿದೆ ನೋಡಿ..
You may like

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?















