Featured
ಬಿಹಾರದಲ್ಲಿ ಬದಲಾಗಲಿದೆ ರಾಜಕೀಯ ಲೆಕ್ಕಾಚಾರ- ಮಹಾಮೈತ್ರಿಗೆ ಮತ್ತೊಂದು ಹಿನ್ನಡೆ

ರೈಸಿಂಗ್ ಕನ್ನಡ:
ಕೊರೊನಾ ಮಹಾಮಾರಿ ನಡುವೆ ಬಿಜೆಪಿ ರಾಜಕೀಯ ಲೆಕ್ಕಾಚಾರಗಳನ್ನು ಮಾಡುತ್ತಿದೆ. ಮುಂದಿನ ಡಿಸೆಂಬರ್ನಲ್ಲಿ ನಡೆಯುವ ಬಿಹಾರ ವಿಧಾನಸಭಾ ಚುನಾವಣೆಗೆ ಬಿಜೆಪಿ ಈಗಾಗಲೇ ತಯಾರಿ ಮಾಡಿಕೊಳ್ಳುತ್ತಿದೆ. ಕಾಂಗ್ರೆಸ್ ಮತ್ತು ಆರ್ಜೆಡಿ ನೇತೃತ್ವದ ಮಹಾಮೈತ್ರಿಯನ್ನು ಚಿಂದಿಗೊಳಿಸಲು ಪ್ಲಾನ್ ಮಾಡಿಕೊಂಡಿದೆ. ಬಿಹಾರದಲ್ಲಿ ಜೆಡಿಯು ಮತ್ತು ಬಿಜೆಪಿ ಸರಕಾರ ನಡೆಸುತ್ತಿದೆ. ಮುಂದಿನ ವಿಧಾನ ಸಭಾ ಚುನಾವಣೆ ಹೊತ್ತಿಗೆ ಎನ್ಡಿಎ ಜೊತೆ ಪ್ರಭಾವಿ ನಾಯಕರು ಸೇರಿಕೊಳ್ಳುವ ಸಾಧ್ಯತೆ ಇದೆ. ಈ ನಡುವೆ ಬಿಹಾರದ ಪ್ರಮುಖ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಜೀತನ್ ರಾಂ ಮಾಂಜಿ ಎನ್ ಡಿಎ ಜೊತೆ ಸೇರಿಕೊಳ್ಳುವುದು ಬಹುತೇಕ ಖಚಿತವಾಗಿದೆ.
ಹಿಂದೂಸ್ತಾನಿ ಅವಾಮಿ ಮೋರ್ಚಾ (HAM) ಸಂಸ್ಥಾಪಕ ಜೀತನ್ ರಾಂ ಬಿಜೆಪಿ ಜೊತೆ ಕೈ ಜೋಡಿಸಿದರೆ ಬಿಹಾರದ ರಾಜಕೀಯ ಸಮೀಕರಣಗಳು ಬದಲಾಗಲಿದೆ. ಜೀತನ್ ರಾಂ ಈ ಸಂಬಂಧ ಜುಲೈ 10ರಂದು ಅಧಿಕೃತ ಘೋಷಣೆ ಮಾಡಲಿದ್ದಾರೆ.
2019ರ ಲೋಕಸಭೆ ಚುನಾವಣೆಯಲ್ಲಿ ಮಹಾ ಮೈತ್ರಿಕೂಟದೊಂದಿಗೆ ಜೀತನ್ ರಾಂ ಮಾಂಝಿ ಕೈ ಜೋಡಿಸಿದ್ದರು. ಆದರೆ ಎನ್ಡಿಎ ಬಿರುಗಾಳಿ ಎದುರು ಮಹಾಮೈತ್ರಿ ಕೂಟ ನಡುಗಿ ಹೋಗಿತ್ತು. ಇದರ ನಡುವೆ ಮಹಾಮೈತ್ರಿ ಕೂಟಕ್ಕೆ ಜೀತನ್ ರಾಂ ಮಾಂಝಿ ಕಳೆದ ಜೂನ್ 25ರ ಒಳಗೆ ಸೀಟು ಹಂಚಿಕೆ ಬಗ್ಗೆ ಸಮನ್ವಯ ಸಮಿತಿ ರಚನೆ ಆಗಬೇಕು ಎಂದು ಷರತ್ತು ವಿಧಿಸಿದ್ದರು. ಆದರೆ ಮಹಾಮೈತ್ರಿ ಕೂಟ ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ. ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಜೀತನ್ ರಾಂ ಮಾಂಝಿ ಬಿಜೆಪಿ ಬಗ್ಗೆ ಒಲವು ತೋರುತ್ತಿದ್ದಾರೆ.
243 ಸ್ಥಾನಗಳಿರುವ ಬಿಹಾರ ವಿಧಾನಸಭೆಯಲ್ಲಿ ಸದ್ಯ ಜೆಡಿಯು 80 ಹಾಗೂ ಬಿಜೆಪಿ 54 ಸ್ಥಾನಗಳೊಂದಿಗೆ ಅಧಿಕಾರ ನಡೆಸುತ್ತಿದೆ. 2 ಸ್ಥಾನ ಹೊಂದಿರುವ ಎಲ್ಜೆಪಿ ಮತ್ತು 5 ಪಕ್ಷೇತರರು ಕೂಡ ಎನ್ಡಿಎ ಸರಕಾರದ ಭಾಗವಾಗಿದ್ದಾರೆ. ಸದ್ಯ ವಿರೋಧ ಪಕ್ಷದ ಸ್ಥಾನದಲ್ಲಿರುವ ಜೀತನ್ ರಾಂ ಮಾಂಝಿಯ ಹಿಂದೂಸ್ತಾನಿ ಅವಾಮಿ ಮೋರ್ಚ ಕಳೆದ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಕೇವಲ ಒಂದು ಸ್ಥಾನ ಮಾತ್ರ ಗೆದ್ದುಕೊಂಡಿತ್ತು.
You may like
ಶಿವರಾಜ್ಕುಮಾರ್ ಬ್ಯಾಂಕ್ ಬ್ಯಾಲೆನ್ಸ್ ಎಷ್ಟು ಕೋಟಿ ಸಾಲ ಗೊತ್ತಾ..?
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಕೆ. ಸುಧಾಕರ್ ಅವರ ಪ್ರವಾಸದ ವಿವರ ಏಪ್ರಿಲ್ 16, 2024
50 ವರ್ಷ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲ್ಲ: ಚಿಕ್ಕಬಳ್ಳಾಪುರ ಎನ್ಡಿಎ ಅಭ್ಯರ್ಥಿ ಡಾ.ಕೆ.ಸುಧಾಕರ್
ನಿರ್ಧರಿಸಿದೆ ದೊಡ್ಡಬಳ್ಳಾಪುರ ಮತ್ತೊಮ್ಮೆ ಮೋದಿ ಸರ್ಕಾರ
ಬಿಜೆಪಿ ಗೆದ್ರೆ ದೇಶವೇ ಇರಲ್ಲ: ಮಗನ ವಿರುದ್ಧ ತಿರುಗಿಬಿದ್ದ ಅಪ್ಪ.!
ಮಠಗಳಿಗೆ ಭೇಟಿ ನೀಡಿ ಪೂಜ್ಯರ ಆಶೀರ್ವಾದ ಪಡೆದ ಡಾ.ಕೆ.ಸುಧಾಕರ್