Featured
ಕೂಲ್ ಕ್ಯಾಪ್ಟನ್ ಹುಟ್ಟುಹಬ್ಬಕ್ಕೆ ಸ್ಪೆಷಲ್ ಗಿಫ್ಟ್ – ಟ್ರೆಂಡಿಂಗ್ನಲ್ಲಿ ಬ್ರಾವೋ “ನಂ7” ಸಾಂಗ್
ರೈಸಿಂಗ್ ಕನ್ನಡ:
ಮಹೇಂದ್ರ ಸಿಂಗ್ ಧೋನಿ..! ಟೀಮ್ ಇಂಡಿಯಾದ ಶಕ್ತಿ. ಅದೆಷ್ಟೋ ಯುವ ಕ್ರಿಕೆಟಿಗರ ಪಾಲಿಗೆ ರೋಲ್ ಮಾಡೆಲ್. ಭಾರತೀಯ ಕ್ರಿಕೆಟ್ನಲ್ಲಿ ವಿಕೆಟ್ ಕೀಪರ್ ಒಬ್ಬನ ಅವಶ್ಯಕತೆ ಮತ್ತು ಆತನ ಬ್ಯಾಟಿಂಗ್ ಹೇಗಿರಬೇಕು ಅನ್ನೋದನ್ನ ತಿಳಿಸಿಕೊಟ್ಟ ಸ್ಟಾರ್ ಕ್ರಿಕೆಟರ್. ತಾನು ಹೋದಲ್ಲಿ ತನ್ನದೇ ಶೈಲಿ ಹಾಗೂ ತನ್ನದೇ ವ್ಯಕ್ತಿತ್ವವನ್ನು ರೂಪಿಸಿಕೊಂಡವರು ಮಾಹಿ. ಟೀಮ್ಇಂಡಿಯಾದಲ್ಲಿ ದಿನಕ್ಕೊಂದು ವಿಕೆಟ್ ಕೀಪರ್ ಅನ್ನೋ ಕಾನ್ಸೆಪ್ಟ್ ಅನ್ನು ತೆಗೆದು ಹಾಕಿ ತನ್ನದೇ ಪರ್ಮನೆಂಟ್ ಪ್ಲೇಸ್ ಅಂತ ತೋರಿಸಿ ಕೊಟ್ಟ ಚಲಾಕಿ ನಾಯಕ. ಅತ್ತ ವಿಕೆಟ್ ಕೀಪರ್ ಆಗಿ ಸೇಫೇಸ್ಟ್ ಹ್ಯಾಂಡ್, ಇತ್ತ ಬ್ಯಾಟ್ಸ್ಮನ್ ಆಗಿ ಸೂಪರ್ ಫಿನಿಷರ್. ಒಟ್ಟಿನಲ್ಲಿ ಟೀಮ್ ಇಂಡಿಯಾದ ಪಾಲಿಗೆ ಮಹೇಂದ್ರ ಸಿಂಗ್ ಧೋನಿ ಅಪ್ರತಿಮ ಆಸ್ತಿ.
39ನೇ ಜನ್ಮದಿನದ ಸಂಭ್ರಮದಲ್ಲಿರುವ ಮಹೇಂದ್ರ ಸಿಂಗ್ ಧೋನಿಗೆ ಅದೆಷ್ಟೋ ಅಭಿಮಾನಿಗಳು ಶುಭ ಹಾರೈಸಿದ್ದಾರೆ. ಕ್ರಿಕೆಟ್ ಕ್ಷೇತ್ರದ ಅಜಾತಶತ್ರುವಾಗಿರುವ ಧೋನಿಗೆ ಐಪಿಎಲ್ನಿಂದ ಹಿಡಿದು ವಿಶ್ವದಾದ್ಯಂತ ಕ್ರಿಕೆಟಿಗರೇ ಬೆಸ್ಟ್ ಪ್ರೆಂಡ್ಸ್ ಅಂಡ್ ಫ್ಯಾಮಿಲಿ ಮೆಂಬರ್ಸ್. ಚೆನ್ನೈ ಸೂಪರ್ ಕಿಂಗ್ಸ್ ತಂಡವಂತೂ ತನ್ನ ನಾಯಕನಿಗೆ ವಿಶೇಷ ಅಭಿಮಾನ ತೋರಿದೆ. ವೆಸ್ಟ್ ಇಂಡೀಸ್ ಆಲ್ರೌಂಡರ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ನ ಸೂಪರ್ ಸ್ಟಾರ್ ಡ್ವೈನ್ ಬ್ರಾವೋ ತನ್ನ ನೆಚ್ಚಿನ ನಾಯಕನಿಗೆ ಹೊಸ ಸಾಂಗ್ ಒಂದನ್ನು ಬಿಡುಗಡೆಮಾಡಿದ್ದಾರೆ. “ನಂಬರ್ 7” ಹೆಸರಿನ ಈ ಹಾಡು ಮಾಹಿ ಜನ್ಮದಿನಕ್ಕೆ ಉಡುಗೊರೆಯೂ ಹೌದು.
ಮಾಹಿ ಕಳೆದ ವರ್ಷದ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿ ಸೆಮಿಫೈನಲ್ ಬಳಿಕ ಟೀಮ್ ಇಂಡಿಯಾದಲ್ಲಿ ಕಾಣಿಸಿಕೊಂಡಿಲ್ಲ. ಹೀಗಾಗಿ ಧೋನಿ ಯುಗ ಮಗಿಯಿತು ಎಂದು ಬಹುತೇಕರು ವಾದ ಮಾಡ್ತಿದ್ದಾರೆ. ಧೋನಿ ಬಗ್ಗೆ ಹಲವು ಕಡೆ ಚರ್ಚೆಗಳು ನಡೆಯುತ್ತಿದ್ದರೂ, ಮಾಜಿ ನಾಯಕ ಈ ಬಗ್ಗೆ ಒಂದೇ ಒಂದು ಮಾತೂ ಆಡಿಲ್ಲ. ಎಲ್ಲಾ ಅಂದುಕೊಂಡಂತೆ ನಡೆದಿದ್ದರೆ ಧೋನಿ ಐಪಿಎಲ್ನಲ್ಲಿ ಕಣಕ್ಕಿಳಿಯಬೇಕಿತ್ತು. ಆದರೆ ಕೊರೊನಾ ವೈರಸ್ ಧೋನಿಯ ಕಂ ಬ್ಯಾಕ್ ಪ್ಲಾನ್ಗೂ ಕೊಕ್ಕೆ ಹಾಕಿದೆ.
ಇನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಧೋನಿ ಹುಟ್ಟುಹಬ್ಬ ಅಂದ್ರೆ ಹಬ್ಬ ಇದ್ದ ಹಾಗೆ. ಸಿಎಸ್ಕೆ ತನ್ನ ಅಧಿಕೃತ ಟ್ವಿಟರ್‌ನಲ್ಲಿ ” ದಿ ಹೆಲಿಕಾಪ್ಟರ್ 7 ಟೇಕಾಫ್ ಆಗಿದೆ! ಥಲಾ ಎಂ.ಎಸ್ ಧೋನಿಗೆ ಡಿ.ಜೆ ಬ್ರಾವೊರಿಂದ ಗೌರವ, ಧೋನಿ #ವಿಸ್ಟಲ್‌ಪೋಡು” ಎಂಬ ಶೀರ್ಷಿಕೆ ಜೊತೆಗೆ ವಿಷ್ ಮಾಡಿದೆ. ಸಿಎಸ್ಕೆಯ ಹಲವು ಆಟಗಾರರು ಧೋನಿಗೆ ಶುಭ ಕೋರಿದ್ದಾರೆ.
You may like
‘ಧೋನಿಗೆ ನಾಲ್ಕು ಲಕ್ಷ ಡಾಲರ್.. ಶೇನ್ ವಾರ್ನ್ ಗಳಿಸಿದ್ದೆಷ್ಟು’
ಬಿಜೆಪಿ ರಾಜ್ಯಾಧ್ಯಕ್ಷರಿಗೆ ಶಾಸಕ ದೊಡ್ಡನಗೌಡ ಪಾಟೀಲ್ ಪತ್ರ: ಕೊಪ್ಪಳ ಕ್ಷೇತ್ರಕ್ಕೆ ಪ್ರಭಾಕರ್ ಚಿಣಿಗೆ ಟಿಕೆಟ್ ನೀಡುವಂತೆ ಮನವಿ
ಹಣ್ಣುಗಳನ್ನು ತಿನ್ನುವಾಗ ಈ ಟಿಪ್ಸ್ ಫಾಲೋ ಮಾಡೋದನ್ನ ಮರೆಯಬೇಡಿ!
ಬೇಸಿಗೆಯಲ್ಲಿ ಕಾವೇರಿ ನೀರಿಲ್ಲ! ಬೆಂಗಳೂರಿಗೆ ಜಲ ಕ್ಷಾಮ ಫಿಕ್ಸ್
ಫೆ.7 ರಂದು ಮಂಡ್ಯ ನಗರ ಬಂದ್ಗೆ ಕರೆ ಕೊಟ್ಟ ಸಮಾನ ಮನಸ್ಕರ ವೇದಿಕೆ
ಬೆಳಗಾವಿ ರಾಜಕಾರಣಿಗಳು ಬದುಕಿದ್ದಾರಾ.? ಜಾರಕಿಹೊಳಿ, ಕತ್ತಿ, ಹುಕ್ಕೇರಿ, ಹೆಬ್ಬಾಳ್ಕರ್ ಏನಾಗಿದ್ದಾರೆ.?