Featured
ವಿದ್ಯುತ್ ಬಳಕೆಗೆ ಗುಡ್ ಬೈ- ಸೋಲಾರ್ ಪವರ್ನಲ್ಲಿ ಓಡಲಿದೆ ಟ್ರೇನ್- ಇಂಡಿಯನ್ ರೈಲ್ವೇಯ ಹೊಸ ಸಾಹಸ

ರೈಸಿಂಗ್ ಕನ್ನಡ ನ್ಯೂಸ್ ಡೆಸ್ಕ್:

ಭಾರತದಲ್ಲಿ ವಾಯುಮಾಲಿನ್ಯ ಕಡಿಮೆ ಮಾಡಲು ಇನ್ನಿಲ್ಲದ ಸರ್ಕಸ್ ಮಾಡಲಾಗುತ್ತಿದೆ. ಮಹಾನಗರಗಳಾದ ದೆಹಲಿ, ಕೊಲ್ಕತ್ತಾ ಮತ್ತು ಮುಂಬೈಗಳಲ್ಲಿ ಮಾಲಿನ್ಯ ಪ್ರಮಾಣ ಅಪಾಯಕಾರಿ ಮಟ್ಟದಲ್ಲಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಂತೂ ಕೆಲವು ಬಾರಿ ವಾಯು ಮಾಲಿನ್ಯ ಮಿತಿ ಮೀರಿ ಮಾನವನ ಉಸಿರಾಟಕ್ಕೆ ತೊಂದರೆಯುಂಟಾದ ಉದಾಹರಣೆಗಳಿವೆ. ಈ ಮಧ್ಯೆ ಸರಕಾರ ವಾಯುಮಾಲಿನ್ಯ ಕಡಿಮೆ ಮಾಡಲು ಸಾಕಷ್ಟು ಕ್ರಮ ಕೈಗೊಂಡಿದೆ. ವಾಯು ಮಾಲಿನ್ಯವನ್ನು ತಡೆಗಟ್ಟುವ ನಿಟ್ಟಿನಲ್ಲಿ ಇಂಡಿಯನ್ ರೈಲ್ವೇ ಹೊಸ ಹೆಜ್ಜೆ ಇಟ್ಟಿದೆ.
ಇಂಡಿಯನ್ ರೈಲ್ವೇ ಮಧ್ಯಪ್ರದೇಶದ ಬಿನಾದಲ್ಲಿ ಸೌರ ವಿದ್ಯುತ್ ಸ್ಥಾವರವನ್ನು ಸ್ಥಾಪಿಸಿದೆ. 1.7 ಮೆಗಾವ್ಯಾಟ್ ಸಾಮರ್ಥ್ಯದ ಈ ಸ್ಥಾವರ, ರೈಲುಗಳಿಗೆ ವಿದ್ಯುತ್ ಪೂರೈಸಲಿದೆ. ರೈಲು ಸಂಚಾರದ ವೇಳೆ ಬಳಕೆಯಾಗುವ ವಿದ್ಯುತ್ ಅನ್ನು ಕಡಿಮೆ ಮಾಡಿ, ಈ ಸೌರ ವಿದ್ಯುತ್ ಅನ್ನು ಉಪಯೋಗಿಸುವುದು ಭಾರತೀಯ ರೈಲ್ವೇಯ ಉದ್ದೇಶವಾಗಿದೆ. ಈ ಯೋಜನೆಗೆ ಬೇಕಾದ ವಿದ್ಯುತ್ ಸ್ಥಾವರಗಳು ಈಗಾಗಲೇ ಪೂರ್ಣಗೊಂಡಿದ್ದು, ಪ್ರಾಯೋಗಿಕ ಉತ್ಪಾದನೆ ಆರಂಭವಾಗಿದೆ.
ಬಿನಾದಲ್ಲಿ ಉತ್ಪಾದನೆಯಾಗುವ ಸೌರ ವಿದ್ಯುತ್ ಉಪಯೋಗಿಸುವುದರಿಂದ ಇಂಡಿಯನ್ ರೈಲ್ವೇಗೆ ಪ್ರತೀ ವರ್ಷ ಸುಮಾರು 1.37 ಕೋಟಿ ರೂಪಾಯಿ ಉಳಿತಾಯವಾಗಲಿದೆ. 25000KWH ಸೌರ ವಿದ್ಯುತ್ ಲೈನ್ ಅನ್ನು ರೈಲ್ವೇ ಓವರ್ ಹೆಡ್ ಲೈನ್ಗೆ ಜೋಡಿಸಿ ಇದರ ಉಪಯೋಗ ಪಡೆಯಲು ಪ್ಲಾನ್ ಮಾಡಲಾಗಿದೆ. ಇದರಿಂದ ವಿದ್ಯುತ್ ಉಳಿತಾಯದ ಜೊತೆಗೆ ವಾಯುಮಾಲಿನ್ಯ ನಿಯಂತ್ರಣ ಆಗಲಿದೆ.
ಇಂಡಿಯನ್ ರೈಲ್ವೇಯ ಈ ನೆಟ್ ಝೀರೊ ಪ್ರಾಜೆಕ್ಟ್ ಯಶಸ್ವಿ ಆದಲ್ಲಿ ಮುಂದಿನ ದಿನಗಳಲ್ಲಿ ಮತ್ತು ಕಡೆಗಳಲ್ಲಿ ಸೌರ ವಿದ್ಯುತ್ ಸ್ಥಾವರ ಸ್ಥಾಪನೆ ಮಾಡಲಾಗುತ್ತದೆ. ಈ ಮೂಲಕ ವಿದ್ಯುತ್ ಉಳಿಸಿ ರಿನ್ಯುವೇಬಲ್ ಎನರ್ಜಿ ಬಳಸಲು ಪ್ಲಾನ್ ಮಾಡಿಕೊಂಡಿದೆ.

You may like
ಬಿಜೆಪಿ ರಾಜ್ಯಾಧ್ಯಕ್ಷರಿಗೆ ಶಾಸಕ ದೊಡ್ಡನಗೌಡ ಪಾಟೀಲ್ ಪತ್ರ: ಕೊಪ್ಪಳ ಕ್ಷೇತ್ರಕ್ಕೆ ಪ್ರಭಾಕರ್ ಚಿಣಿಗೆ ಟಿಕೆಟ್ ನೀಡುವಂತೆ ಮನವಿ
ಹಣ್ಣುಗಳನ್ನು ತಿನ್ನುವಾಗ ಈ ಟಿಪ್ಸ್ ಫಾಲೋ ಮಾಡೋದನ್ನ ಮರೆಯಬೇಡಿ!
ಬೇಸಿಗೆಯಲ್ಲಿ ಕಾವೇರಿ ನೀರಿಲ್ಲ! ಬೆಂಗಳೂರಿಗೆ ಜಲ ಕ್ಷಾಮ ಫಿಕ್ಸ್
ಫೆ.7 ರಂದು ಮಂಡ್ಯ ನಗರ ಬಂದ್ಗೆ ಕರೆ ಕೊಟ್ಟ ಸಮಾನ ಮನಸ್ಕರ ವೇದಿಕೆ
ಬೆಳಗಾವಿ ರಾಜಕಾರಣಿಗಳು ಬದುಕಿದ್ದಾರಾ.? ಜಾರಕಿಹೊಳಿ, ಕತ್ತಿ, ಹುಕ್ಕೇರಿ, ಹೆಬ್ಬಾಳ್ಕರ್ ಏನಾಗಿದ್ದಾರೆ.?
ಪ್ರಭಾಸ್ ಫ್ಯಾನ್ಸ್ ದಿಲ್ ಖುಷ್ : ಈ ವರ್ಷ ರಾಧೆ ಶ್ಯಾಮ್.. ಮುಂದಿನ ವರ್ಷ ಸಲಾರ್ ರಿಲೀಸ್ಗೆ ಮುಹೂರ್ತ ಫಿಕ್ಸ್