Featured
ರಾಮನಗರದಲ್ಲಿ ಒಂದೇ ದಿನ 29 ಕೋವಿಡ್ ಪಾಸಿಟಿವ್: ಸೋಂಕಿತರ ಸಂಖ್ಯೆ 262ಕ್ಕೆ ಏರಿಕೆ

ರೈಸಿಂಗ್ ಕನ್ನಡ :
ರಾಮನಗರ :
ಕೊರೊನಾ ಮಾಹಾಮಾರಿಗೆ ರಾಮನಗರ ಜಿಲ್ಲೆ ನಲುಗುತ್ತಿದೆ ಜಿಲ್ಲೆಯಲ್ಲಿ ಇಂದು 29 ಕೋವಿಡ್ ಪಾಸಿಟಿವ್ ಪ್ರಕರಣಗಳ ಬೆಳಕಿಗೆ ಬಂದಿದ್ದು, ಒಟ್ಟು ಸೋಕಿಂತರ ಸಂಖ್ಯೆ 262 ಕ್ಕೆ ಏರಿಕೆಯಾಗಿದೆ.
ಕನಕಪುರ ತಾಲೂಕಿನ ಕೋಡಿಹಳ್ಳಿ ಪೋಲೀಸ್ ಠಾಣೆ ಸಬ್ ಸಬ್ ಇನ್ಸ್ ಪೆಕ್ಟರ್ ಗೆ ಕೊರೋನಾ ಪಾಸಿಟಿವ್ ಬಂದಿದ್ದು, ಇಡೀ ಪೋಲೀಸ್ ಠಾಣೆಯನ್ನೆ ಸೀಲ್ ಡೌನ್ ಮಾಡಲಾಗಿದೆ.

ರೇಷ್ಮೆನಗರಿ ರಾಮನಗರ ಜಿಲ್ಲೆ ದಿನದಿಂದ ದಿನಕ್ಕೆ ಕೊರೋನಾ ಪಾಸಿಟಿವ್ ಪ್ರಕರಣ ಹೆಚ್ಚಾಗುತ್ತಲೆ ಇದೆ. ಜಿಲ್ಲೆಯಲ್ಲಿ ಇಂದು 29 ಕೋವಿಡ್ ಪಾಸಿಟಿವ್ ಪ್ರಕರಣಗಳ ಬೆಳಕಿಗೆ ಬಂದಿದ್ದು, ಒಟ್ಟು ಸೋಕಿಂತರ ಸಂಖ್ಯೆ 262 ಕ್ಕೆ ಏರಿಕೆಯಾಗಿದೆ.
ಮಾಗಡಿ, ರಾಮನಗರದಲ್ಲಿ ತಲಾ 11 ಪ್ರಕರಣ ಬಂದ್ರೆ, ಕನಕಪುರದಲ್ಲಿ 4 ಹಾಗೂ ಚನ್ನಪಟ್ಟಣದಲ್ಲಿ 3 ಕೊರೊನಾ ಪಾಸಿಟಿವ್ ಪ್ರಕರಣ ದಾಖಲಾಗಿದೆ. ಕನಕಪುರ ತಾಲೂಕಿನ ಕೋಡಿಹಳ್ಳಿ ಪೊಲೀಸ್ ಠಾಣೆ ಸಬ್ ಇನ್ಸ್ ಪೆಕ್ಟರ್ ಗೂ ಕೊರೊನಾ ವಕ್ಕರಿಸಿದೆ .ಸಬ್ ಇನ್ಸ್ ಪೆಕ್ಟರ್ ಗೆ ಕೊರೊನಾ ಸೊಂಕು ದೃಢ ಪಟ್ಟಿದೆ. ಸೋಂಕಿತ ಸಬ್ ಇನ್ಸ್ ಪೆಕ್ಟರ್ ರಾಮನಗರದ ಕೋವಿಡ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.ಠಾಣೆಯ 15 ಜನ ಸಿಬ್ಬಂದಿಗಳಿಗೆ ಕ್ವಾರಂಟೈನ್ ಮಾಡಲಾಗಿದೆ. ಈಡೀ ಕೋಡಿಹಳ್ಳಿ ಪೊಲೀಸ್ ಠಾಣೆ ಎರಡು ದಿನಗಳ ಸಂಪೂರ್ಣ ಸೀಲ್ ಡೌನ್ ಮಾಡಲಾಗಿದೆ.
ಜಿಲ್ಲೆಯಲ್ಲಿ ವೈದ್ಯರು, ಕೆಎಸ್ ಆರ್ಪಿಸಿ ಪೊಲೀಸರು, ಸರ್ಕಾರಿ ನೌಕರರು, ಮಾಗಡಿ ಶಾಸಕ ಆಪ್ತ ಸಹಾಯಕ ಸೇರಿದಂತೆ ಏನು ಮಾಡದ ಹಲವರಿಗೆ ಕೊರೊನಾ ಪಾಸಿಟಿವ್ ಬಂದಿದೆ. ಸಾರ್ವಜನಿಕರು ಎಚ್ಚೆತ್ತುಕೊಂಡು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕೆಂದು ಜಿಲ್ಲಾಡಳಿತ ಮನವಿ ಮಾಡಿಕೊಂಡಿದೆ.
You may like
ಕರ್ನಾಟಕದಲ್ಲಿ ಕೆಆರ್ ಕೆ ಸಂಸ್ಥೆಯಿಂದ ಪ್ರಭಾಸ್ ಆದಿಪುರುಷ್ ಬಿಡುಗಡೆ
ಸಿಎಂ ಬಸವರಾಜ್ ಬೊಮ್ಮಾಯಿಗೆ ಕೊರೋನಾ ಪಾಸಿಟಿವ್
ಕೊರೊನಾ ಅಬ್ಬರ: 6 ಲಕ್ಷ ದಾಡಿದ ಕೊರೊನಾ ಕೇಸ್: 87 ಮಂದಿ ಬಲಿ
ಸದ್ಯ ಶಾಲಾ-ಕಾಲೇಜು ತೆರೆಯುವ ಚಿಂತನೆ ಇಲ್ಲ: ಶಿಕ್ಷಣ ಸಚಿವ ಸುರೇಶ್ ಕುಮಾರ್
ಕೊರೊನಾ ಅಬ್ಬರ: 69 ಲಕ್ಷ ದಾಟಿದ ಕೊರೊನಾ ನಂಬರ್: ಸಾವಿನ ಸಂಖ್ಯೆ 96,318ಕ್ಕೆ ಏರಿಕೆ
ಕೊರೊನಾ ಅಬ್ಬರ: 86 ಸಾವಿರ ಹೊಸ ಕೊರೊನಾ ಕೇಸ್: 58 ಲಕ್ಷ ದಾಟಿದ ಸೋಂಕಿತರ ನಂಬರ್