Connect with us

Featured

ಕಲ್ಯಾಣ ಕರ್ನಾಟಕದಲ್ಲಿ ಕೊರೋನಾ ರಣ ಕೇಕೆ : 4344 ಸೋಂಕಿತರು, 72 ಮಂದಿ ಬಲಿ

ರೈಸಿಂಗ್​ ಕನ್ನಡ:

ರಾಯಚೂರು :

Advertisement

ಕಲ್ಯಾಣ ಕರ್ನಾಟಕದಿಂದ ಪ್ರಾರಂಭವಾದ ಕೊರೊನಾ ರಣಕೇಕೆ ಇಂದಿಗೂ ತನ್ನ ಪ್ರಭಾವವನ್ನ ಬೀರುತ್ತಿದೆ. ಆರು ಜಿಲ್ಲೆಗಳನ್ನೊಳಗೊಂಡ ಈ ಭಾಗದಲ್ಲಿ ಈ ವರೆಗೂ 4,344 ಜನರಿಗೆ ಸೋಂಕು ಹರಡಿದ್ದು, 72 ಜನರನ್ನ ಬಲಿ ಪಡೆದುಕೊಂಡಿದೆ. ಇದಕ್ಕೆ ಕಾರಣ ಬಡತನ.

ಹೌದು ಕಲ್ಯಾಣ ಕರ್ನಾಟಕದಲ್ಲಿ ಇರುವ ಆರು ಜಿಲ್ಲೆಗಳಲ್ಲಿ ಇಂದು ಇಷ್ಟು ಪ್ರಮಾಣದಲ್ಲಿ ಕೊರೋನಾ ಸೋಂಕು ಹರಡುವುದಕ್ಕೆ ಮುಖ್ಯಕಾರಣ ಬಡತನ. ಬಡತನದಿಂದ ತುತ್ತಿನ ಚೀಲ ತುಂಬಿಸಿಕೊಳ್ಳಲು ಈ ಭಾಗದ ಜನ ಅವಲಂಬಿಸಿರುವುದು ದೇಶದ ಮಹಾನಗರಗಳನ್ನು. ಕರ್ನಾಟಕದ  ಬೆಂಗಳೂರು,ಮಂಗಳೂರು, ಮೈಸೂರು. ಆಂಧ್ರದ ಹೈದರಾಬಾದ್, ವಿಶಾಖಪಟ್ಟಣ, ಮಹಾರಾಷ್ಟ್ರದ ಮುಂಬೈ, ಪುಣೆ ಮತ್ತು ಸೊಲ್ಲಾಪುರದಂತಹ ನಗರಗಳಿಗೆ ಅನ್ನಕ್ಕಾಗಿ ತಮ್ಮ ಮನೆ ಮಠ ತೊರೆದು ದೂರದೂರುಗಳಿಗೆ ವಲಸೆ ಹೋಗಿರುವುದು.

ಜನ ವಲಸೆ ಹೋಗೋದಕ್ಕೂ ಕೊರೊನಾಕ್ಕೂ ಏನು ಸಂಬಂಧ ಅನ್ನೊ ಅನುಮಾನನಾ ?. ಹೌದು ಕಾರಣ ಇದೀಗ ಈ ಭಾಗದಲ್ಲಿ ಸೋಂಕು ಹರಡುತ್ತಿರೋದೇ ವಲಸೇ ಹೋಗಿ ಮರಳಿ ಬಂದ ಕಾರ್ಮಿಕರಿಂದ. ಅದರಲ್ಲಿ ಮುಖ್ಯವಾಗಿ ಬೆಂಗಳೂರು, ಮಹಾರಾಷ್ಟ್ರದ ಮುಂಬೈ, ಪುಣೆ ಮತ್ತು ಆಂಧ್ರದ ಹೈದ್ರಾಬಾದ್ ನಗರಗಳಿಂದ ಲಾಕ್ ಡೌನ್ ಸಡಿಲಿಕೆಯಾಗುತ್ತಿದ್ದಂತೆ ಹಿಂಡು ಹಿಂಡಾಗಿ ಮರಳಿ ಬಂದ ಕಾರ್ಮಿಕರಿಂದ ಹಬ್ಬಿರುವ ಈ ಸೋಂಕು ಇದೀಗ ಸ್ಥಳಿಯವಾಗಿ ಹರಡುತ್ತಿದೆ. ಯಾರಿಗೆ ಯಾವಾಗ ಬಂದು ವಕ್ಕರಿಸುತ್ತಿದೆಯೋ ತಿಳಿಯುತ್ತಿಲ್ಲ.

Advertisement

ಕಲ್ಯಾಣ ಕರ್ನಾಟಕ ಭಾಗದಲ್ಲಿ ಈವರೆಗೆ ಸರಿಸುಮಾರು 72 ಜನರನ್ನು ಬಲಿ ಪಡೆದಿರುವ ಕೊರೊನಾ 4,344 ಜನಕ್ಕೆ ಸೋಂಕು ಹರಡಿದ್ದು ಇದರ ವಿರುದ್ಧ ಹೋರಾಡುತ್ತಿದ್ದಾರೆ. ಈ ಭಾಗದಲ್ಲಿ ಅತಿ ಹೆಚ್ಚು ಸೋಂಕು ಹರಡಿದ್ದು ಕಲಬುರಗಿ ಜಿಲ್ಲೆಯಲ್ಲಿ. ಈ ವರೆಗೆ ಕಲಬುರಗಿಯಲ್ಲಿ ಆರೋಗ್ಯ ಇಲಾಖೆಯ  ವರದಿಯ ಪ್ರಕಾರ ಕೊರೋನಾ ಸೋಂಕಿತರ ಸಂಖ್ಯೆ 1,646 ಕ್ಕೆ ಏರಿಕೆ ಯಾಗಿದ್ದು, 27 ಜನರನ್ನು ಬಲಿಪಡೆದುಕೊಂಡಿದೆ.

ಎರಡನೇ ಸ್ಥಾನದಲ್ಲಿ ಗಣಿ ಜಿಲ್ಲೆ ಬಳ್ಳಾರಿ ಆರೋಗ್ಯ ಇಲಾಖೆಯ  ವರದಿಯ ಪ್ರಕಾರ ಇಲ್ಲಿಯ ವರೆಗೆ ಜಿಲ್ಲೆಯಲ್ಲಿ 1,244 ಕೊರೊನಾ ಸೊಂಕು ತಗುಲಿದರೆ, 35 ಜನರನ್ನ ಬಲಿಪಡೆದು ಈ ಆರು ಜಿಲ್ಲೆಗಳಲ್ಲೇ ಸಾವಿನ ಸಂಖ್ಯೆಯಲ್ಲಿ ಎರಡನೇ ಸ್ಥಾನದಲ್ಲಿದೆ.

ಮೂರನೇ ಸ್ಥಾನದಲ್ಲಿ ಗಿರಿನಗರಿ ಯಾದಗಿರಿ ಜಿಲ್ಲೆಯಲ್ಲೂ ಸೋಂಕಿತರ ಸಂಖ್ಯೆ  971 ಇದ್ದು ಆದರೆ ಕೊರೋನಾದಿಂದ ಮೃತಪಟ್ಟವರ ಸಂಖ್ಯೆ ಮಾತ್ರ ಈ ಆರು ಜಿಲ್ಲೆಗಳಿಗಿಂತ ಕಡಿಮೆ ಪ್ರಮಾಣದಲ್ಲಿದೆ. ಆರೋಗ್ಯ ಇಲಾಖೆಯ  ವರದಿಯ ಪ್ರಕಾರ ಸೊಂಕಿತರ ಸಂಖ್ಯೆ 971 ಇದ್ದರೆ ಓರ್ವ ವ್ಯಕ್ತಿ ಮಾತ್ರ ಈ ಮಹಾಮಾರಿಗೆ ಬಲಿಯಾಗಿದ್ದಾನೆ.

Advertisement

ನಾಲ್ಕನೇ ಸ್ಥಾನದಲ್ಲಿ ಬೀದರ ಜಿಲ್ಲೆ  ಇದ್ದರೂ ಸಾವಿನಲ್ಲಿ ಮಾತ್ರ ಅಗ್ರ ಸ್ಥಾನದಲ್ಲಿದೆ. ಹೌದು ಈ ಜಿಲ್ಲೆಗೆ ಆಂದ್ರ ಮತ್ತು ಮಹಾರಾಷ್ಟ್ರಕ್ಕೆ ಹೊಂದಿಕೊಂಡಿರುವುದರಿಂದ ಸೋಂಕು ಮತ್ತು ಸಾವಿನ ಸಂಖ್ಯೆ ಹೆಚ್ಚಿದೆ ಎನ್ನಲಾಗುತ್ತಿದೆ. ಆರೋಗ್ಯ ಇಲಾಖೆಯ  ವರದಿಯ ಪ್ರಕಾರ ಸೊಂಕಿತರ ಸಂಖ್ಯೆ 755 ಇದ್ದರೇ, 37 ಜನರನ್ನ ಈ ಮಹಾಮಾರಿ ಬಲಿ ಪಡೆದಿದೆ.

ಜಿಲ್ಲೆಗೆ ಕಂಟಕವಾದ ಮುಂಬೈ, ಬೆಂಗಳೂರು

ಐದನೇ ಸ್ಥಾನದಲ್ಲಿರುವ ರಾಯಚೂರು ಜಿಲ್ಲೆಗೆ ಮಾತ್ರ ಮಹಾರಾಷ್ಟ್ರವೇ ಕಂಟಕವಾಗಿ ಪರಿಣಮಿಸಿ ಇಂದಿಗೂ ಜಿಲ್ಲೆಯನ್ನು ಕಾಡುತ್ತಿದೆ. ಪ್ರಸ್ತುತ ಬೆಂಗಳೂರಿನಿಂದ ವಾಪಸ್ಸಾಗುತ್ತಿರುವ ಕಾರ್ಮಿಕರಲ್ಲಿ ಸೋಂಕು ಕಂಡು ಬರುತ್ತಿರುವುದು ಜಿಲ್ಲೆಯ ಜನರನ್ನ ಭಯದಲ್ಲಿ ದಿನದೂಡುವ ಪರಿಸ್ಥಿತಿಗೆ ತಂದು ನಿಲ್ಲಿಸಿದೆ. ಆರೋಗ್ಯ ಇಲಾಖೆಯ  ವರದಿಯ ಪ್ರಕಾರ ಇಲ್ಲಿಯ ವರೆಗೆ ಜಿಲ್ಲೆಯಲ್ಲಿ ಸೊಂಕಿತರ ಸಂಖ್ಯೆ 569 ಕ್ಕೆ ಏರಿಕೆಯಾಗಿದ್ದರೇ ಮೂರು ಸೋಂಕಿತರನ್ನು ಬಲಿ ಪಡೆದುಕೊಂಡಿದೆ.

ಕಲ್ಯಾಣ ಕರ್ನಾಟಕ ಭಾಗದಲ್ಲಿ ಒಂದಷ್ಟು ಈ ಮಹಾಮಾರಿಯನ್ನು ನಿಯಂತ್ರಿಸಲ್ಪಟ್ಟ ಜಿಲ್ಲೆ ಕೊಪ್ಪಳ. ಆದರೂ ಸಹ ಕಳೆದ ಎರಡು ವಾರಗಳಿಂದ ಈ ಜಿಲ್ಲೆಯಲ್ಲೂ ಕೊರೊನಾ ತನ್ನ ರಣಕೇಕೆ ಹಾಕುತ್ತಿವೆ. ಆರೋಗ್ಯ ಇಲಾಖೆಯ  ವರದಿಯ ಪ್ರಕಾರ ಜಿಲ್ಲೆಯಲ್ಲಿ.  ಕೊರೊನಾ ಸೊಂಕಿತರ ಸಂಖ್ಯೆ 130 ಕ್ಕೆ ಏರಿಕೆಯಾಗಿದ್ದರೆ ಇಬ್ಬರನ್ನು ಬಲಿ‌ಪಡೆದುಕೊಂಡಿದೆ.

ಹೊರಗಿನವರಿಗಿಂತ ಒಳಗಿನವರಿಂದಲ್ಲೇ ಕೊರೊನಾ ಸೋಂಕು

ಈ ಎಲ್ಲ ಅಂಕಿ ಅಂಶಗಳನ್ನು ನೋಡಿದಾಗ ಕಲ್ಯಾಣ ಕರ್ನಾಟಕಕ್ಕೆ ಸಾಕಷ್ಟು ರೀತಿಯಲ್ಲಿ ಕೊರೊನಾ ತನ್ನ ಪ್ರಭಾವವನ್ನು ಬೀರುತ್ತಿದೆ. ಜಿಲ್ಲಾವಾರು ನೋಡಿದಾಗ ಇಲ್ಲಿ ಕಲಬುರ್ಗಿ ಮತ್ತು ಬೀದರ್ ನಲ್ಲಿ ಅತಿ ಹೆಚ್ಚು ಸೋಂಕು ಇತ್ತೀಚಿನ ದಿನಗಳಲ್ಲಿ ಕಂಡುಬರುತ್ತಿರದ್ದು,  ಮೂರನೇ ಸ್ಥಾನದಲ್ಲಿ ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳು ಕಾಣಿಸಿಕೊಳ್ಳುತ್ತಿರುವುದು ನಿಜಕ್ಕೂ ಆತಂಕ ಮೂಡಿಸಿವವೆ. ಸದ್ಯ ಸೋಂಕು ಹೊರಗಿನವರಿಗಿಂತ ಒಳಗಿನವರಿಂದಲ್ಲೇ ಹೆಚ್ಚು ಹರಡುತ್ತಿದೆ. ಜನರಲ್ಲಿ ಯಾವುದೇ ರೋಗ ಲಕ್ಷಣಗಳಿಲ್ಲದಿದ್ದರೂ ಸೋಂಕು ಹರಡುತ್ತಿರುವುದು ಈ ಭಾಗದ ಜನರನ್ನು ಬೆಚ್ಚಿ ಬೀಳಿಸುವಂತೆ ಮಾಡುತ್ತಿದೆ.

Advertisement

ಒಟ್ಟಾರೆ ಕೊರೊನಾ ವಿರುದ್ಧದ ಹೋರಾಟದಲ್ಲಿ ಕಲ್ಯಾಣ ಕರ್ನಾಟಕ ವಿಫಲವಾಗಿದೆ ಎಂದು ಹೇಳಬಹುದು. ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆಗಳು ಅದೆಷ್ಟೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡರು ಕೂಡಾ ಫಲಿಸುತ್ತಿಲ್ಲ. ಹಾಗಾಗಿ ಸರ್ಕಾರ ಮತ್ತು ಜಿಲ್ಲಾಡಳಿತ ಪ್ರಯತ್ನದಲ್ಲಿದ್ದರೂ ಮುಖ್ಯವಾಗಿ ಇಲ್ಲಿ ಸಾರ್ವಜನಿಕರ ಸಹಕಾರ ಅಗತ್ಯವಾಗಿದೆ. ಕೇವಲ ಸರ್ಕಾರವನ್ನ ದೂಷಿಸುವುದು ಬಿಟ್ಟು ಸಾರ್ವಜನಿಕರು ಕೂಡ ತಮ್ಮ ತಮ್ಮ ಮನೆಗಳಲ್ಲಿ ಇದ್ದುಕೊಂಡು ತೀರಾ  ಅಗತ್ಯವಿದ್ದಲ್ಲಿ ಮಾತ್ರ ಮನೆಯಿಂದ ಹೊರಬರುವುದರ ಮೂಲಕ ಕೊರೊನಾ ಹೋರಾಟಕ್ಕೆ ಸಾರ್ವಜನಿಕರ ಸಹಕಾರ ಕೂಡ ಅಗತ್ಯವಾಗಿದೆ ಎಂಬುದನ್ನು ತಿಳಿಯಬೇಕಾಗಿದೆ.

ಬೆಂಗಳೂರು4 months ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು4 months ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್4 months ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು4 months ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು4 months ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು4 months ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು4 months ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು4 months ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು4 months ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು4 months ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured3 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured5 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured3 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured1 year ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ5 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured4 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured5 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured5 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured7 months ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured1 year ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ