Featured
ಹಾಸನದಲ್ಲಿ ಕೊರೊನಾ ಸ್ಪೋಟ- ಸೋಮವಾರ ಒಂದೇ ದಿನ 49 ಪಾಸಿಟಿವ್ ಕೇಸ್ ಪತ್ತೆ..!

ರೈಸಿಂಗ್ ಕನ್ನಡ:
ಹಾಸನ:
ಕೊರೊನಾ ಮಹಾಮಾರಿ ಪ್ರತೀ ಮನೆ ಮನೆಯ ಬಾಗಿಲಿಗೆ ಬಂದು ನಿಂತಿದೆ. ರಾಜ್ಯದಲ್ಲಿ ದಿನದಿಂದ ದಿನಕ್ಕೆ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಿವೆ. ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ರಣ ಕೇಕೆ ಹಾಕುತ್ತಿರುವಾಗಲೇ ಜಿಲ್ಲಾ ವ್ಯಾಪ್ತಿಗಳಲ್ಲೂ ಕೊರೊನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ಹೆಚ್ಚುತ್ತಿದೆ. ಸೋಮವಾರ ಹಾಸನ ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ಎಲ್ಲರನ್ನೂ ಬೆಚ್ಚಿಬೀಳಿಸಿದೆ.
ಸೋಮವಾರ ಮಧ್ಯಾಹ್ನದ ವರದಿಯಂತೆ ಹಾಸನದಲ್ಲಿ 49 ಪಾಸಿಟಿವ್ ಕೇಸ್ಗಳು ಪತ್ತೆಯಾಗಿದೆ. ಕೊರೋನ ವಾರಿಯರ್ಸ್, ವೈದ್ಯಕೀಯ ಸಿಬ್ಬಂದಿ, ಪೆರೋಲ್ ಮೇಲೆ ಹೊರಗೆ ಬಂದು ಮತ್ತೆ ಜೈಲು ಸೇರಿದ ವ್ಯಕ್ತಿ ಸೇರಿ 49 ಜನರಿಗೆ ಕೊರೋನ ಪಾಸಿಟಿವ್ ಬಂದಿತ್ತು ಆತಂಕಕ್ಕೆ ಕಾರಣವಾಗಿದೆ. ಬೇಲೂರು ತಾಲ್ಲೂಕಿನಲ್ಲಿ 2, ಚನ್ನರಾಯಪಟ್ಟಣ ತಾಲ್ಲೂಕಿನಲ್ಲಿ 6, ಹಾಸನ ತಾಲ್ಲೂಕಿನಲ್ಲಿ 36, ಹೊಳೆನರಸೀಪುರ ತಾಲ್ಲೂಕಿನಲ್ಲಿ 1, ಸಕಲೇಶಪುರ ತಾಲ್ಲೂಕಿನಲ್ಲಿ 4 ಜನರಿಗೆ ಸೇರಿ ಒಟ್ಟು 49 ಜನರಿಗೆ ಕೊರೋನ ಪಾಸಿಟಿವ್ ವರದಿ ಬಂದಿದೆ.
ಹಾಸನದಲ್ಲಿ ಇದುವರೆಗೂ 541 ಕೊರೋನ ಪಾಸಿಟಿವ್ ಪತ್ತೆಯಾಗಿದೆ. ಈ ಪೈಕಿ 255 ಜನ ಗುಣಮುಖರಾಗಿದ್ದಾರೆ. 278 ಆಕ್ಟೀವ್ ಕೇಸ್ ಇದೆ. 8 ಡೆತ್ ಆಗಿದೆ.
You may like
ಬಿಜೆಪಿ ರಾಜ್ಯಾಧ್ಯಕ್ಷರಿಗೆ ಶಾಸಕ ದೊಡ್ಡನಗೌಡ ಪಾಟೀಲ್ ಪತ್ರ: ಕೊಪ್ಪಳ ಕ್ಷೇತ್ರಕ್ಕೆ ಪ್ರಭಾಕರ್ ಚಿಣಿಗೆ ಟಿಕೆಟ್ ನೀಡುವಂತೆ ಮನವಿ
ಹಣ್ಣುಗಳನ್ನು ತಿನ್ನುವಾಗ ಈ ಟಿಪ್ಸ್ ಫಾಲೋ ಮಾಡೋದನ್ನ ಮರೆಯಬೇಡಿ!
ಬೇಸಿಗೆಯಲ್ಲಿ ಕಾವೇರಿ ನೀರಿಲ್ಲ! ಬೆಂಗಳೂರಿಗೆ ಜಲ ಕ್ಷಾಮ ಫಿಕ್ಸ್
ಫೆ.7 ರಂದು ಮಂಡ್ಯ ನಗರ ಬಂದ್ಗೆ ಕರೆ ಕೊಟ್ಟ ಸಮಾನ ಮನಸ್ಕರ ವೇದಿಕೆ
ಕರ್ನಾಟಕದಲ್ಲಿ ಕೆಆರ್ ಕೆ ಸಂಸ್ಥೆಯಿಂದ ಪ್ರಭಾಸ್ ಆದಿಪುರುಷ್ ಬಿಡುಗಡೆ
ಕರ್ನಾಟಕದಲ್ಲಿ ಕೊರೋನಾ ಮಹಾ ಸ್ಫೋಟ. ದೆಹಲಿ ಮೀರಿಸುತ್ತಾ ಬೆಂಗಳೂರು.?