Featured
ಜಿಲ್ಲಾ ಪಂಚಾಯತ್ ಸದಸ್ಯನ ಮೇಲೆ ಕೊಲೆ ಯತ್ನದ ಕೇಸ್ಗೆ ಟ್ವಿಸ್ಟ್- ಸುಪಾರಿ ಕಿಲ್ಲರ್ಗಳಿಗೆ ತಲಾಷ್
![](https://risingkannada.com/wp-content/uploads/2020/07/YDG-KOLe1.jpg)
ರೈಸಿಂಗ್ ಕನ್ನಡ:
ದುರ್ಗೇಶ್ ಮಂಗಿಹಾಳ, ಯಾದಗಿರಿ
ಯಾದಗಿರಿ ಜಿಲ್ಲಾ ಪಂಚಾಯತ್ ವಿರೋಧ ಪಕ್ಷದ ನಾಯಕ ಮರಿಲಿಂಗಪ್ಪ ಕರ್ನಾಳ ಮೇಲೆ ಕೊಲೆಗೆ ಸುಪಾರಿ ನೀಡಿದ್ದ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಹಳೆ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ಮಾಡಲು ಸುಫಾರಿ ನೀಡಿದ್ದರು ಎನ್ನಲಾಗಿದೆ.
ಕಳೆದ ತಿಂಗಳು 24 ರಂದು ಬೆಳಿಗ್ಗೆ 8ಗಂಟೆಗೆ ಯಾದಗಿರಿ ನಗರದ ಹೊರವಲಯದ ಬುದ್ದ ಬಸವ ನಗರದಲ್ಲಿ, ಕಾರಿನಲ್ಲಿ ಬಂದಿದ್ದ ನಾಲ್ಕು ಜನರು ಮರಿಲಿಂಗಪ್ಪ ಕರ್ನಾಳ ಮೇಲೆ ಮಚ್ಚು, ಕಬ್ಬಿಣದ ರಾಡಿನಿಂದ ಕೊಲೆಯತ್ನ ನಡೆಸಿದ್ರು. ಹಲ್ಲೆ ನಂತರ ಮರಿಲಿಂಗಪ್ಪ ಕರ್ನಾಳ ಗಂಭೀರ ಗಾಯಗೊಂಡು ರಕ್ತದ ಮಡವಿನಲ್ಲಿ ಬಿದಿದ್ದರು. ಕೂಡಲೇ ಪೊಲೀಸರು ಮರಿಲಿಂಗಪ್ಪರನ್ನು ಆಸ್ಪತ್ರೆಗೆ ದಾಖಲಿಸಿದ್ರು. ಹಾಡು ಹಗಲೆ ಸುಪಾರಿ ನೀಡಿ ಕೊಲೆಯತ್ನ ಮಾಡಿಸಿದ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದರು .
ಜಿಲ್ಲಾ ಪೊಲೀಸ್ ವರಿಷ್ಠಧಿಕಾರಿ ಋಷಿಕೇಷ್ ಭಗವಾನ್ ಅವರು ಸಿಪಿಐ ಶರಣುಗೌಡ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದರು. ಕೊಲೆಗೆ ಸುಪಾರಿ ನೀಡಿದ್ದ ಐವರು ಆರೋಪಿಗಳಿಗೆ ಕೊಳ ತೊಡಿಸಿದ್ದಾರೆ. ಆರೋಪಿಗಳಾದ ಹೊನ್ನಪ್ಪ ದೇಸಾಯಿ, ಗುರುರಾಜ್ ನಾಮಲಿ, ದೇವರಾಜ್ ನಾಮಲಿ, ತಿರುಪತಿ ನಾಮಲಿ, ಅಂಜನೇಯ ದೊಡ್ಡಿ ಬಂಧಿತ ಆರೋಪಿಗಳಾಗಿದ್ದಾರೆ.
ಹಳೆ ದ್ವೇಷ ಹಿನ್ನೆಲೆಯಲ್ಲಿ ಕೊಲೆಗೆ ಸುಪಾರಿ ನೀಡಿದ್ದರು ಎನ್ನಲಾಗಿದೆ. ಕೊಲೆ ಯತ್ನ ನಡೆಸಿದ ಐವರು ಸುಪಾರಿ ಕಿಲ್ಲರ್ಸ್ ಗಾಗಿ ಪೊಲೀಸರು ಇನ್ನಷ್ಟು ತನಿಖೆ ನಡೆಸುತ್ತಿದ್ದಾರೆ. ಒಟ್ಟಾರೆ ಶಾಂತವಾಗಿದ್ದ ಗಿರಿ ನಗರದಲ್ಲಿ ರಕ್ತ ಚೆಲ್ಲಿದ ಕಿಲ್ಲರ್ಗಳಿಂದ ನಗರದ ಜನರು ಭಯಗೊಳ್ಳುವಂತೆ ಮಾಡಿತ್ತು.ಸುಪಾರಿ ಕಿಲ್ಲರ್ಗಳನ್ನು ಬಂಧಿಸಿ ಜನರ ಆತಂಕವನ್ನು ದೂರ ಮಾಡಬೇಕಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?