Featured
ಕರ್ತವ್ಯದಲ್ಲಿದ್ದ ಕಂಡಕ್ಟರ್, ಪೊಲೀಸ್, ಆರೋಗ್ಯ ಅಧಿಕಾರಿಗಳಿಗೂ ಕೊರೊನಾ..! – ಹಾಸನದಲ್ಲಿ ಆತಂಕ ಹುಟ್ಟಿಸಿದ ಕಿಲ್ಲರ್ ವೈರಸ್

ರೈಸಿಂಗ್ ಕನ್ನಡ :
ಹಾಸನ :
ಕರ್ತವ್ಯದಲ್ಲಿದ್ದ ನಾಲ್ವರು ಕಂಡಕ್ಟರ್, ಇಬ್ಬರು ಪೊಲೀಸ್ ಸಿಬ್ಬಂದಿ ಮತ್ತು ಇಬ್ಬರು ಆರೋಗ್ಯ ಅಧಿಕಾರಿಗಳಿಗೆ ಸೇರಿದಂತೆ ಒಟ್ಟು 25 ಮಂದಿಗೆ ಕರೋನಾ ಪಾಸಿಟಿವ್ ಬಂದಿದ್ದು ಜಿಲ್ಲೆಯ ಜನರನ್ನ ಆತಂಕಕ್ಕೀಡು ಮಾಡಿದೆ.
ನಾಲ್ವರು ಕಂಡಕ್ಟರ್ಗಳು ಅರಸೀಕೆರೆ, ತುಮಕೂರು, ಬೆಂಗಳೂರು, ಮಾರ್ಗದ ಬಸ್ನಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಇವರು ಓಡಾಡಿದ್ದ ಬಸ್ನಲ್ಲಿ ಯಾವೆಲ್ಲಾ ಪ್ರಯಾಣಿಕರಿದ್ದರೋ ಅನ್ನೋದು ಈಗ ಜಿಲ್ಲಾಡಳಿತವನ್ನ ಕಾಡುತ್ತಿರೋ ಪ್ರಶ್ನೆ. ಸೋಂಕಿತ ಕಂಡಕ್ಟರ್ಗಳು ಹಲವರ ಜೊತೆ ಪ್ರಾಥಮಿಕ ಸಂಪರ್ಕ ಹೊಂದಿದ್ದಾರೆ. ಇವರಷ್ಟೇ ಅಲ್ಲದೆ 25 ಜನರಲ್ಲಿ ಇಬ್ಬರು ಪೊಲೀಸ್ ಸಿಬ್ಬಂದಿ, ಇಬ್ಬರು ಆರೋಗ್ಯ ಇಲಾಖೆ ಸಿಬ್ಬಂದಿಗೂ ಕೊರೋನ ಪಾಸಿಟಿವ್ ಬಂದಿರುವುದು ಆತಂಕ ಮೂಡಿಸಿದೆ.
ಓರ್ವ 26 ವರ್ಷದ ಯುವಕ ಕೊರೋನಾದಿಂದ ಮೃತಪಟ್ಟಿದ್ದಾನೆ. ಇದುವರೆಗೂ ಹಾಸನದಲ್ಲಿ 479 ಕೊರೊನಾ ಪಾಸಿಟಿವ್ ಬಂದಿದ್ದು, 255 ಜನ ಗುಣಮುಖರಾಗಿದ್ದಾರೆ.
You may like
ಬಿಜೆಪಿ ರಾಜ್ಯಾಧ್ಯಕ್ಷರಿಗೆ ಶಾಸಕ ದೊಡ್ಡನಗೌಡ ಪಾಟೀಲ್ ಪತ್ರ: ಕೊಪ್ಪಳ ಕ್ಷೇತ್ರಕ್ಕೆ ಪ್ರಭಾಕರ್ ಚಿಣಿಗೆ ಟಿಕೆಟ್ ನೀಡುವಂತೆ ಮನವಿ
ಹಣ್ಣುಗಳನ್ನು ತಿನ್ನುವಾಗ ಈ ಟಿಪ್ಸ್ ಫಾಲೋ ಮಾಡೋದನ್ನ ಮರೆಯಬೇಡಿ!
ಬೇಸಿಗೆಯಲ್ಲಿ ಕಾವೇರಿ ನೀರಿಲ್ಲ! ಬೆಂಗಳೂರಿಗೆ ಜಲ ಕ್ಷಾಮ ಫಿಕ್ಸ್
ಫೆ.7 ರಂದು ಮಂಡ್ಯ ನಗರ ಬಂದ್ಗೆ ಕರೆ ಕೊಟ್ಟ ಸಮಾನ ಮನಸ್ಕರ ವೇದಿಕೆ
ಕರ್ನಾಟಕದಲ್ಲಿ ಕೆಆರ್ ಕೆ ಸಂಸ್ಥೆಯಿಂದ ಪ್ರಭಾಸ್ ಆದಿಪುರುಷ್ ಬಿಡುಗಡೆ
ದೆಹಲಿ ಮಾದರಿ ಲಾಕ್ ಆಗುತ್ತಾ ಬೆಂಗಳೂರು.? ಯಾಕೆ..? ಏನಾಗ್ತಿದೆ ಬೆಂಗಳೂರಲ್ಲಿ.?