Featured
ಚೀನಾ ಜೊತೆ ಯಾವುದೇ ರಾಜಿಯಿಲ್ಲ- ಮನೆ ಮತ್ತು ಮನೆತನದ ರಾಜಕೀಯಕ್ಕೆ ಮಾತ್ರ ಕಾಂಗ್ರೆಸ್ ಸೀಮಿತ: ಸಚಿವ ಪ್ರಹ್ಲಾದ್ ಜೋಷಿ

ರೈಸಿಂಗ್ ಕನ್ನಡ:
ಧಾರಾವಾಡ:
ಲೇಹ್ನ ನಿಮ್ಮಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದ್ದು ಭಾರತೀಯ ಸೈನಿಕರ ನೈತಿಕ ಸ್ಥೈರ್ಯ ಹೆಚ್ಚಿಸಲು. ಅವರ ಆತ್ಮವಿಶ್ವಾಸ ಹೆಚ್ಚಿಸಲು ಹೊರತು ಬೇರಾವುದೇ ರಾಜಕೀಯ ಗಿಮಿಕ್ಗೆ ಅಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಹೇಳಿದ್ದಾರೆ. ನೆಲ, ಗಡಿ ವಿಚಾರದಲ್ಲಿ ಚೀನಾ ಜೊತೆಗೆ ಯಾವುದೇ ರೀತಿಯ ರಾಜಿಗೆ ಭಾರತ ಸಿದ್ದವಿಲ್ಲ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದರು.

ಹುಬ್ಬಳ್ಳಿಯ ರಾಷ್ಟ್ರೋತ್ಥಾನ ರಕ್ತನಿಧಿ ಆಯೋಜಿಸಿದ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿಯವರ ಲೇಹ್ ಭೇಟಿಯನ್ನು ವಿರೋಧ ಪಕ್ಷಗಳು ಸ್ಟಂಟ್ ಅಂತ ಹೇಳ್ತಿವೆ. ಆದ್ರೆ ಈ ಹಿಂದಿನ ಯಾವುದೇ ಪ್ರಧಾನಿಗಳು ಮಾಡದ ಕೆಲಸವನ್ನು ನರೇಂದ್ರ ಮೋದಿಯವರು ಮಾಡುತ್ತಿದ್ದಾರೆ. ದೇಶಕ್ಕಾಗಿ ದುಡಿಯುವ ಸೈನಿಕರ ಬಗ್ಗೆ ಕಾಂಗ್ರೆಸ್ ಸೇರಿದಂತೆ ಉಳಿದ ವಿರೋಧ ಪಕ್ಷಗಳಿಗೆ ಪ್ರೀತಿಯೇ ಇಲ್ಲ ಎಂದು ಕಾಣುತ್ತಿದೆ ಅಂತ ಪ್ರಹ್ಲಾದ್ ಜೋಷಿ ತಿರುಗೇಟು ನೀಡಿದ್ರು.
ಕೋವಿಡ್ ಮಹಾಮಾರಿ ಸಂದರ್ಭದಲ್ಲಿ ಅತ್ಯಂತ ಉತ್ತಮ ಆಡಳಿತವನ್ನು ಪ್ರಧಾನಿ ನೀಡಿದ್ದಾರೆ. ದೇಶಕ್ಕೆ ಮತ್ತು ಜಗತ್ತಿಗೆ ನಾಯಕತ್ವ ಏನೂ ಎಂಬುದನ್ನು ತಿಳಿಸಿದ್ದಾರೆ. ಸಿದ್ದರಾಮಯ್ಯನವರು ಮನೆ ಮತ್ತು ಮನೆತನಕ್ಕೆ ಮೀಸಲಿಟ್ಟ ಕಾಂಗ್ರೆಸ್ ಪಕ್ಷದ ತಾಳ ತಂಬೂರಿ ಇಲ್ಲದಂತೆ ಅಂತೆ ವರ್ತಿಸುತ್ತಿದ್ದಾರೆ ಕಿಡಿ ಕಾರಿದರು.
ಯಾವುದೇ ಕಾರಣಕ್ಕೂ ದೇಶದ ಒಂದು ಇಂಚು ಭೂಮಿ ಬಿಟ್ಟು ಕೊಡುವ ಪ್ರಶ್ನೆ ಇಲ್ಲ. ಅಲ್ಲದೇ ಎಲ್ಲ ರೀತಿಯ ಹೋರಾಟಕ್ಕೆ ಭಾರತ ಸಿದ್ದ. ಆದರೆ ಭಾರತ ಶಾಂತಿಯನ್ನು ಪ್ರತಿಪಾದಿಸುತ್ತದೆ. ಈ ಹಿನ್ನೆಲೆಯಲ್ಲಿ ದೇಶದ ಗಡಿ ಬಗ್ಗೆ ಸಾರ್ವಭೌಮತ್ವದ ಬಗ್ಗೆ ರಾಜೀಯ ಮಾತಿಲ್ಲ ಎಂದರು. ಕೊರೋನಾ ವಿಷಯದಲ್ಲಿ ಎಲ್ಲರು ಜಾಗೃತಿ ವಹಿಸಬೇಕು. ಇಲ್ಲಿಯವರೆಗೆ ಕೊರೋನಾ ಸಮುದಾಯಕ್ಕೆ ಹಬ್ಬಿದೆ ಎಂದು ನನಗೆ ಅನಿಸಿಲ್ಲಾ ಎಂದರು.
