Featured
ನಭೋಮಂಡಲದಲ್ಲಿ ಭಾನುವಾರದ ಕೌತುಕ – ಭಾರತದಲ್ಲಿ ಗೋಚರವಿಲ್ಲ ಈ ಚಂದ್ರಗ್ರಹಣ
ರೈಸಿಂಗ್ ಕನ್ನಡ:
ಬೆಂಗಳೂರು:
ಎರಡು ವಾರಗಳ ಹಿಂದೆ ನಭೋ ಮಂಡಲದಲ್ಲಿ ಸೂರ್ಯಗ್ರಹಣದ ಕೌತುಕ ಸಂಭವಿಸಿತ್ತು. ಬಾನಂಗಳದಲ್ಲಿ ನೆರಳು ಬೆಳಕಿನ ಆಟ ಎಲ್ಲರ ಗಮನಸೆಳೆದಿತ್ತು. ಭಾರತದಲ್ಲಿ ಗೋಚರಿಸಿದ ಈ ಸೂರ್ಯಗ್ರಹಣದ ಒಳಿತು-ಕೆಡುಕುಗಳ ಚರ್ಚೆ ಆಗಿತು. ಈಗ ಮತ್ತೆ ನಭೋ ಮಂಡಲ ಮತ್ತೊಂದು ನೆರಳು ಬೆಳಕಿನ ಆಟಕ್ಕೆ ಸಜ್ಜಾಗಿದೆ. ಜುಲೈ ತಿಂಗಳ ಮೊದಲ ಭಾನುವಾನುರ ಅಂದ್ರೆ 5ನೇ ತಾರೀಕಿಗೆ ಚಂದ್ರಗ್ರಹಣ ಸಂಭವಿಸಲಿದೆ. ಆದ್ರೆ ಇದು ಭಾರತದಲ್ಲಿ ಗೋಚರವಿಲ್ಲದ ಕಾರಣ ಯಾವುದೇ ಆಚರಣೆಗಳಿಲ್ಲ.
ಭಾನುವಾರದ ಚಂದ್ರಗ್ರಹಣ ಬೆಳಗ್ಗೆ 8.37ಕ್ಕೆ ಸ್ಪರ್ಶವಾಗಿ 11.22ಕ್ಕೆ ಮೋಕ್ಷವಾಗಲಿದೆ. ಎರಡು ಗಂಟೆ 45 ನಿಮಿಷಗಳ ಕಾಲ ಗ್ರಹಣ ಸಂಭವಿಸಲಿದೆ. ಭೂಮಿಯ ನೆರಳಿನ ಹೊರಭಾಗದ ಮಾರ್ಗವಾಗಿ ಚಲಿಸಲಿರುವ ಚಂದ್ರ, ಅರ್ಧ ಭಾಗ ಅಥವಾ ಪೂರ್ಣ ಪ್ರಮಾಣದಲ್ಲಿ ಮರೆಯಾಗದೆ ತೆಳುಛಾಯೆಯಲ್ಲಿ ಸಂಪೂರ್ಣವಾಗಿ ಗೋಚರಿಸಲಿದ್ದಾನೆ. ಈ ತೆಳುಛಾಯೆ ಚಂದ್ರಗ್ರಹಣ ಜನ್ಮರಾಶಿಯ ಮೇಲೆ ಹೆಚ್ಚಿನ ಪರಿಣಾಮ ಬೀರುವುದಿಲ್ಲ ಎಂದು ಜ್ಯೋತಿಷಿಗಳು ಹೇಳುತ್ತಾರೆ.
ಅಂದಹಾಗೆ ಇದು ಪೂರ್ಣ ಚಂದ್ರಗ್ರಹಣವಲ್ಲ. ತೆಳು ಛಾಯೆ ಅಂದ್ರೆ ಪೆನುಂಬ್ರ ಮಾತ್ರ ಗ್ರಹಣ ಸಮಯದಲ್ಲಿ ಗೋಚರಕ್ಕೆ ಒಳಪಡಲಿದೆ. ಇದು ಈ ವರ್ಷದ 4ನೇ ಪೆನುಂಬ್ರ ಚಂದ್ರಗ್ರಹಣವಾಗಲಿದೆ. ಈ ವರ್ಷ ಈಗಾಗಲೇ ಎರಡು ಬಾರಿ ಚಂದ್ರಗ್ರಹಣ ಮತ್ತು ಒಮ್ಮೆ ಸೂರ್ಯ ಗ್ರಹಣ ಸಂಭವಿಸಿದೆ. ಜುಲೈ 5ರಂದು ನಡೆಯುವುದು ನಾಲ್ಕನೆ ಗ್ರಹಣ ಅಂದ್ರೆ 3ನೇ ಚಂದ್ರ ಗ್ರಹಣ. ಭಾರತದಲ್ಲಿ ಈ ಗ್ರಹಣ ಗೋಚರ ಇಲ್ಲದೇ ಇದ್ರೂ ಉತ್ತರ ಅಮೆರಿಕಾ, ಫೆಸಿಫಿಕ್ ವಲಯ, ಅಟ್ಲಾಂಟಿಕ್ ವಲಯ ಮತ್ತು ಅಂಟಾರ್ಟಿಕಾ ವಲಯ, ವೆಸ್ಟ್ ಇಂಡೀಸ್ ನ ಕೆಲ ಭಾಗಗಳು, ದಕ್ಷಿಣ ಅಮೆರಿಕಾದ ಕೆಲ ಭಾಗ ಹಾಗೂ ನ್ಯೂಜಿಲೆಂಡ್ ದಕ್ಷಿಣ ಭಾಗದಲ್ಲಿ ಈ ಗ್ರಹಣ ಗೋಚರವಾಗಲಿದೆ.
ಇಂತಹದ್ದೆ ಇನ್ನೊಂದು ಪೆನುಂಬ್ರ ಚಂದ್ರಗಹಣ ನವೆಂಬರ್ 30ರಂದು ನಡೆಯಲಿದೆ. ಇದೂ ಕೂಡ ಭಾರತದಲ್ಲಿ ಕಾಣಿಸುವುದಿಲ್ಲ. ಏಷ್ಯಾದ ಕೆಲವು ಭಾಗ, ಆಸ್ಟ್ರೇಲಿಯಾ, ಉತ್ತರ ಅಮೆರಿಕ, ದಕ್ಷಿಣ ಅಮೆರಿಕ, ಅಟ್ಲಾಂಟಿಕ್, ಆರ್ಕ್ಟಿಕ್ ಪ್ರದೇಶದಲ್ಲಿ ಈ ಗ್ರಹಣ ಗೋಚರಿಸಲಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?