Featured
ಜು. 8 ರಿಂದ ಲೈವ್ ಕ್ರಿಕೆಟ್ – ಕೊರೊನಾ ಜೊತೆಯಲ್ಲೇ ಆಟ ಶುರು – ಸೆಲಬ್ರೇಷನ್‌ಗೂ ಸಾಮಾಜಿಕ ಅಂತರ..!
![](https://risingkannada.com/wp-content/uploads/2020/07/West-Indies-vs-England-2020.jpg)
ರೈಸಿಂಗ್ ಕನ್ನಡ :
ಸ್ಪೋರ್ಟ್ಸ್ ಡೆಸ್ಕ್ :
![](https://risingkannada.com/wp-content/uploads/2020/07/WhatsApp-Image-2020-07-01-at-10.22.16-AM-1-17-1024x286.jpeg)
ಕೊರೊನಾದಿಂದ ಕಂಗಾಲಾಗಿದ್ದ ಕ್ರಿಕೆಟ್ ಅಭಿಮಾನಿಗಳಿಗೆ ಸಂತಸದ ದಿನಗಳ ಹತ್ತಿರವಾಗುತ್ತಿವೆ. ಇನ್ನೂ ಕೆಲವೇ ದಿನಗಳಲ್ಲಿ ಕ್ರಿಕೆಟ್ ಮತ್ತೆ ಆರಂಭವಾಗಲಿದೆ. ಇಷ್ಟುದಿನ ಹಳೇ ಪಂದ್ಯಗಳನ್ನೇ ಪದೇ ಪದೇ ನೋಡಿ ಸಾಕಾಗಿದ್ದ ಕ್ರಿಕೆಟ್ ಅಭಿಮಾನಿಗಳು, ಇನ್ನೂ ಲೈವ್ ಮ್ಯಾಚ್ ನೋಡೋಕೆ ಉತ್ಸುಕರಾಗಿದ್ದಾರೆ.
ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ನಡುವಣ ಮೂರು ಪಂದ್ಯಗಳ ಟೆಸ್ಟ್ ಸರಣಿ ಜುಲೈ 8 ರಿಂದ ಆರಂಭವಾಗಲಿದೆ. ಇದ್ರೊಂದಿಗೆ ಕೊರೊನಾದಿಂದ ತಾತ್ಕಾಲಿಕ ಬ್ರೇಕ್ ಪಡೆದಿದ್ದ ಕ್ರಿಕೆಟ್ ಲೋಕ ಮತ್ತೆ ಆರಂಭವಾಗಲಿದೆ. ಕೊರೋನಾ ಭಯ ಇನ್ನೂ ಮಾಸದ ಕಾರಣ ಒಂದಷ್ಟು ಮುಂಜಾಗ್ರತೆಯೊಂದಿಗೆ ಕ್ರಿಕೆಟಿಗರು ಮೈದಾನಕ್ಕಿಳಿಯಲಿದ್ದಾರೆ.
![](https://risingkannada.com/wp-content/uploads/2020/07/WhatsApp-Image-2020-07-01-at-10.22.16-AM-13-1024x576.jpeg)
ಸೌತಾಂಪ್ಟನ್ನ ಏಜಸ್ ಬೌಲ್ ಕ್ರೀಡಾಂಗಣ ಕೊರೋನೋತ್ತರದ ಐತಿಹಾಸಿಕ ಟೂರ್ನಿಗೆ ಆತಿಥ್ಯ ವಹಿಸಿದೆ. ಎರಡು ಹಾಗೂ ಮೂರನೇ ಟೆಸ್ಟ್ ಮ್ಯಾಂಚೆಸ್ಟರ್ನಲ್ಲಿ ಆಯೋಜನೆಗೊಂಡಿದೆ. ಆಟಗಾರರ ಆರೋಗ್ಯದ ದೃಷ್ಟಿಯಿಂದ ಜೈವಿಕ ಸುರಕ್ಷಿತ ವಾತಾವರಣ ನಿರ್ಮಾಣ ಮಾಡಲಾಗಿದೆ.
ಆಟಗಾರರು ತಮ್ಮ ತಂಡದವರನ್ನ ಬಿಟ್ಟು ಬೇರೆ ಯಾರನ್ನೂ ಭೇಟಿ ಮಾಡುವಂತಿಲ್ಲ. ಶಾಂಪಿಂಗ್ ಇತರೆ ಓಡಾಟ ಎಲ್ಲಕ್ಕೂ ಕತ್ತರಿ. ಮುಖ್ಯವಾಗಿ ಮೈದಾನವನ್ನ ಸುರಕ್ಷಿತಗೊಳಿಸುವುದು. ಆಟಗಾರರ ಓಡಾಟ ಹೊರಗಿನ ಸಂಪರ್ಕಕ್ಕೆ ಸಂಪೂರ್ಣ ನಿಷೇಧ. ಪಂದ್ಯ ಮುಕ್ತಾಯ ಬಳಿಕ ನೇರವಾಗಿ ಹೋಟೆಲ್ಗೆ ತೆರಳುವುದು ಹಾಗೂ ಸಂಭ್ರಮಾಚರಣೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿದೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?