Featured
ಚಾಮುಂಡಿ ತಾಯಿಯ ಪೂಜೆಗೂ ತಟ್ಟಿದ ಕೊರೊನಾ ಬಿಸಿ- ಭಕ್ತರೇ ಇಲ್ಲದ ನಡೆಯಿತು ಆಷಾಢ ಶುಕ್ರವಾರದ ವಿಶೇಷ ಪೂಜೆ
ರೈಸಿಂಗ್ ಕನ್ನಡ:
ಮೈಸೂರು:
ನಾಡಿನ ಅಧಿದೇವತೆ ಚಾಮುಂಡಿ ತಾಯಿಯ ಆಷಾಢ ಶುಕ್ರವಾರದ ಪೂಜೆ ಅಂದ್ರೆ ಅದು ಅದ್ದೂರಿ ಮತ್ತು ಹಬ್ಬ. ಆದ್ರೆ ಈ ಬಾರಿಯ ಆಷಾಢದ 2ನೇ ಶುಕ್ರವಾರದ ಪೂಜೆಯೂ ಭಕ್ತರಿಲ್ಲದೆ ನಡೆದಿದೆ. ಆಷಾಢ ಮಾಸದ ಮೊದಲ ಶುಕ್ರವಾರದ ವಿಶೇಷ ಪೂಜೆ ಕೂಡ ಭಕ್ತರಿಲ್ಲದೆ ನಡೆದಿತ್ತು. ಕೊರೊನಾ ಭೀತಿಯಿಂದ ಎಲ್ಲವೂ ಸ್ಥಂಭವಾಗಿರುವ ಜೊತೆಗೆ ದೇವರ ವಿಶೇಷ ದರ್ಶನಕ್ಕೂ ಅವಕಾಶ ಇಲ್ಲದಂತಾಗಿದೆ. ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ದೃಷ್ಟಿಯಿಂದ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಈ ಬಾರಿ ಆಷಾಢ ಶುಕ್ರವಾರದ ವಿಶೇಷ ಪೂಜೆಯಲ್ಲಿ ಭಾಗವಹಿಸಲು ಭಕ್ತರಿಗೆ ಅವಕಾಶವಿಲ್ಲ.
ವರ್ಷಂಪ್ರತಿ ಚಾಮುಂಡಿ ತಾಯೊಗೆ ಆಷಾಢ ಮಾಸದ ಶುಕ್ರವಾರದ ದಿನ ಅದ್ದೂರಿ ಹಾಗೂ ವಿಶೇಷ ಪೂಜೆಗಳು ನಡೆಯುತ್ತಿದ್ದವು. ಆದ್ರೆ ಈ ಬಾರಿಗೆ ಬೆಳ್ಳಂಬೆಳಗ್ಗೆ ಭಕ್ತರು ಎದ್ದೇಳುವ ಮುನ್ನವೇ ಎಲ್ಲಾ ಪೂಜೆಗಳು ಮುಗಿಸಿ ದೇಗುಲಕ್ಕೆ ಬೀಗ ಹಾಕುವ ಪರಿಸ್ಥಿತಿ ಎದುರಾಗಿದೆ. ಸದಾ ಭಕ್ತರಿಂದ, ಪ್ರವಾಸಿಗರಿಂದ ತುಂಬಿ ತುಳುಕುತ್ತಿದ್ದ ಚಾಮುಂಡಿ ಬೆಟ್ಟದಲ್ಲಿ ಬೆಟ್ಟದಲ್ಲಿ, ಸೋಂಕು ಹರಡಬಹುದಾದ ಭೀತಿಯಿಂದಲೇ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ.
ಆಷಾಢದ ಪ್ರಯುಕ್ತ ನಾಡ ದೇವತೆ ಚಾಮುಂಡೇಶ್ವರಿ ದೇವಸ್ಥಾನವು ಫಲಪುಷ್ಪಗಳಿಂದ ಸಿಂಗಾರಗೊಂಡಿತ್ತು. ಅಲ್ಲದೇ ಧಾರ್ಮಿಕ -ವಿಧಿ ವಿಧಾನಗಳು ಪ್ರತಿವರ್ಷದ ಆಷಾಢ ಮಾಸದಂತೆ ಈ ಬಾರಿಯೂ ನಡೆಯಿತು. ಪ್ರತಿ ವರ್ಷದಂತೆ ಬೆಳಿಗ್ಗೆ 3.30ರಿಂದ ರುದ್ರಾಭಿಷೇಕ, ಪಂಚಾಮೃತಾಭಿಷೇಕ, ತಾಯಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?