Featured
ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ಮೋದಿ ಗಡ್ಡ..! ಪ್ರಧಾನಿಯ ಉದ್ದಗಡ್ಡದ ಹಿಂದೆ ನಡೆಯುತ್ತಿದೆ ವಿಭಿನ್ನ ಚರ್ಚೆ..!
![](https://risingkannada.com/wp-content/uploads/2020/07/Modi-Gadda.jpg)
ರೈಸಿಂಗ್ ಕನ್ನಡ:
ಅರೆ..ಯಾರ್..! ಈ ಕೊರೊನಾ ಎಷ್ಟು ಭಯ ಹುಟ್ಟಿಸಿದೆ ಅಂದ್ರೆ ಅಂಗಡಿಯಿಂದ ತಂದ ವಸ್ತು ಹಂಗೇ ತಿನ್ನುವ ಹಾಗಿಲ್ಲ. ತರಕಾರಿ, ಹಣ್ಣು ಹಂಪಲು ತಂದ್ರೆ ಮೊದಲು ಬಿಸಿ ನೀರಿಗೆ ಹಾಕಿ ತೊಳೆಯಬೇಕು. ಬಟ್ಟೆ ಪರ್ಚೇಸ್ ಮಾಡಿಕೊಂಡು ಬಂದ್ರೆ ಸ್ಯಾನಿಟೈಸ್ ಮಾಡ್ಬೇಕು. ಕರೋನಾ ಸೃಷ್ಟಿಸಿರುವ ಅವಾಂತರ ಒಂದೆರಡಲ್ಲ. ಆದ್ರೆ ಅನಿವಾರ್ಯವಾಗಿ ಮುಂಜಾಗೃತಾ ಕ್ರಮವನ್ನು ಅನುಸರಿಸಲೇಬೇಕು. ಯಾಕಂದ್ರೆ ಕೊರೊನಾ ಮಹಾಮಾರಿ ಪ್ರಾಣಕ್ಕೆ ಅಪಾಯ ಒಡ್ಡುತ್ತಿದೆ.
![](https://risingkannada.com/wp-content/uploads/2020/07/Astrology-3-1024x576.png)
ಕೊರೊನಾ ಟೈಮ್ನಲ್ಲಿ ಎಲ್ಲವೂ ಕಷ್ಟವಾಗಿಬಿಟ್ಟಿದೆ. ಶೇವ್ ಮಾಡೋದು, ಟ್ರಿಮ್ ಮಾಡೋದು, ಕಟ್ಟಿಂಗ್ ಮಾಡಿಸೋದು ಎಲ್ಲವೂ ನಿಂತು ಹೋಗಿದೆ. ಸೆಲೂನ್ ಕಡೆ ಕಾಲಿಡಲು ಕೂಡ ಭಯ ಆಗ್ತಿದೆ. ದೇಶದ ಅದೆಷ್ಟೋ ಯುವಕರ ಗಡ್ಡ ಟ್ರಿಮ್ ಮಾಡದೇ, ಶೇವ್ ಮಾಡದೇ ಹಾಗೇ ಬೆಳೆದು ಬಿಟ್ಟಿದೆ. ದೇಶದ ಪ್ರಧಾನಿ ನರೇಂದ್ರ ಮೋದಿಯ ಗಡ್ಡವೂ ಉದ್ದ ಬಂದುಬಿಟ್ಟಿದೆ. ಕೆಲವರ ಪ್ರಕಾರ ಪ್ರಧಾನಿ ಮೋದಿ ಕೊರೊನಾ ಹೋರಾಟಕ್ಕೆ ಸ್ಟ್ರಾಟಜಿ ಮಾಡುವುದರಲ್ಲಿ ಬ್ಯೂಸಿಯಾಗಿದ್ದು, ಗಡ್ಡ ಟ್ರಿಮ್ ಮಾಡಿಸಿಕೊಳ್ಳಲು ಟೈಮ್ ಸಿಕ್ಕಿಲ್ಲ ಅಂತಾರೆ.
ನರೇಂದ್ರ ಮೋದಿ ದೇಶದ ಕೆಲಸಕ್ಕಾಗಿ 16 ರಿಂದ 18 ಗಂಟೆ ಮೀಸಲಿಡುತ್ತಿದ್ದಾರೆ. ಸದ್ಯದ ಸ್ಥಿತಿಯಲ್ಲಿ ಇದು ಹೆಚ್ಚಾಗಿರಬೇಕು ಅನ್ನೋದು ನೆಟ್ಟಿಗರ ಟ್ರೆಂಡಿಂಗ್ ಟಾಪಿಕ್. ಹೀಗಾಗಿ ಮೋದಿ ಅವರ ಟ್ರಿಮ್ ಆಗದ ಗಡ್ಡ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯ ವಿಷಯವಾಗಿ ಬಿಟ್ಟಿದೆ.
ಮೋದಿ ವಿಶಿಷ್ಟ ಸಿಗ್ನೇಚರ್ಗಳಲ್ಲಿ ಟ್ರಿಮ್ ಗಡ್ಡ ಕೂಡ ಒಂದು. ಮಾರ್ಚ್‌ನಲ್ಲಿ ಜನತಾ ಕರ್ಫ್ಯೂ ಘೋಷಿಸುವ ಮುನ್ನ ಭಾಷಣದ ವೇಳೆ ಅವರು ಟ್ರಿಮ್ ಗಡ್ಡದಲ್ಲಿಯೇ ಕಾಣಿಸಿಕೊಂಡಿದ್ದರು. ಆಮೇಲೆ ,ಮೋದಿ ಹಲವು ಸಲ ಭಾಷಣ ಮಾಡಿದ್ದಾರೆ. ಮೊನ್ನೆ ಜೂನ್ 30ರಂದು ಕೂಡ ದೇಶವನ್ನು ಉದ್ದೇಶಿಸಿ 15 ನಿಮಿಷ ಮಾತನಾಡಿದ್ದರು. ಆದ್ರೆ ಮೋದಿ ಮುಖದಲ್ಲಿ ಗಡ್ಡ ಉದ್ದಕ್ಕೆ ಬಂದಿತ್ತು. ಟ್ರಿಮ್ ಗಡ್ಡ ಕಾಣೆಯಾಗಿತ್ತು.
ಕಳೆದ 3 ತಿಂಗಳಿನಲ್ಲಿ ಮೋದಿ ಗಡ್ಡಕ್ಕೆ ಕತ್ತರಿ ಹಾಕಿಸಿಲ್ಲ. ಈ ಉದ್ದ ಗಡ್ಡ ಏನಾದರೂ ಸಂದೇಶ ರವಾನಿಸುತ್ತಿದೆಯೇ ಎನ್ನುವುದು ಅನೇಕರ ಚರ್ಚೆಗೆ ವಿಷಯ. ಸಾಮಾಜಿಕ ಅಂತರ ಕಾಪಾಡಿಕೊಂಡು ಮೋದಿ ಲಾಕ್‌ಡೌನ್ ನಿಯಮ ಪಾಲಿಸುತ್ತಿದ್ದಾರೆ. ಕೊರೊನಾ ಸಂಧಿಗ್ಧ ಸಮಯ , ಲಡಾಖ್ ಗಡಿ ಬಿಕ್ಕಟ್ಟು, ಹೀಗೆ ವಿಭಿನ್ನ ವಿಷಯಗಳಲ್ಲಿ ಮೋದಿ ಬ್ಯುಸಿಯಾಗಿದ್ದಾರೆ ಎನ್ನುವುದು ಹಲವರ ವಾದ. ಆದ್ರೆ ನಿಜಕ್ಕೂ ಗಡ್ಡದ ಸೀಕ್ರೆಟ್ ಏನು ಅನ್ನುವುದು ಮೋದಿಗೆ ಮಾತ್ರ ಗೊತ್ತು..!
![](https://risingkannada.com/wp-content/uploads/2020/04/RISING-KANNADA-logo-150px.jpg)
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?