Featured
ರೌಡಿ ಶೀಟರ್ಗಳಿಂದ ಗುಂಡಿನ ದಾಳಿ : 8 ಪೊಲೀಸರ ಹತ್ಯೆ
![](https://risingkannada.com/wp-content/uploads/2020/07/kanpur-1.jpg)
ರೈಸಿಂಗ್ ಕನ್ನಡ
ಉತ್ತರ ಪ್ರದೇಶ
ರೌಡಿ ಶೀಟರ್ ಒಬ್ಬನನ್ನ ಹುಡುಕಲು ಹೋದ ಪೊಲೀಸರ ಮೇಲೆ ಕ್ರಿಮಿನಲ್ಗಳು ಗುಂಡಿನ ದಾಳಿ ನಡೆಸಿ ಡಿವೈಎಸ್ಪಿ ದೇವೇಂದ್ರ ಮಿಶ್ರ ಸೇರಿದಂತೆ 8 ಮಂದಿ ಪೊಲೀಸರನ್ನ ಅಮಾನುಷವಾಗಿ ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ.
ಬುಧವಾರ ಮಧ್ಯಾಹ್ನ ಕಾನ್ಪುರದ ಶಿವಾಲಿ ಪೊಲೀಸ್ ವ್ಯಾಪ್ತಿಗೆ ಬರುವ ಬಿತೂರ್ ಗ್ರಾಮಕ್ಕೆ ಪೊಲೀಸರ ತಂಡ ರೌಡಿ ಶೀಟರ್ ವಿಕಾಸ್ ದುಬೆಯನ್ನ ಪತ್ತೆ ಹಚ್ಚಲು ಹೋಗಿತ್ತು.
![](https://risingkannada.com/wp-content/uploads/2020/07/kanpur-3.jpg)
ಈ ಸಂದರ್ಭದಲ್ಲಿ ರೌಡಿಗಳ ತಂಡ ಪೊಲೀಸರ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿದೆ. ದಾಳಿ ವೇಳೆ ಡಿವೈಎಸ್ಪಿ ದೇವೇಂದ್ರ ಮಿಶ್ರ,ಸ್ಟೇಷನ್ ಆಧಿಕಾರಿ ಶಿವರಾಜ್ಪುರ್ ಮಹೇಶ್ ಯಾದವ್ , ಓರ್ವ ಸಬ್ ಇನ್ಸ್ಪೆಕ್ಟರ್ ಮತ್ತು ಐದು ಕಾನ್ಸ್ಟೇಬಲ್ ಹತ್ಯೆಯಾಗಿದ್ದಾರೆ ಎಂದು ಕಾನ್ಪುರ ಪೊಲೀಸರು ತಿಳಿಸಿದ್ದಾರೆ. ಇನ್ನು 6 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ದಾಳಿ ಸಂಬಂಧ ಕ್ರಿಮಿನಲ್ಗಳನ್ನ ಬಗ್ಗು ಬಡಿಯ ಕನೂಜ್ ಮತ್ತು ಕಾನ್ಪುರದಿಂದ ಹೆಚ್ಚುವರಿ ಪೊಲೀಸರನ್ನ ಕರೆಸಲಾಗಿದೆ ಎಂದು ಕಾನ್ಪುರ ವಲಯದ ಎಡಿಜೆ ಜೆ.ಎನ್.ಸಿಂಗ್ ಹೇಳಿದ್ದಾರೆ.
ಪ್ರಕರಣದ ಬಗ್ಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಗೃಹ ಸಚಿವಾಲಯದ ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್ ನಿರ್ದೇಶಕರೊಂದಿಗೆ ಮಾತುಕತೆ ನಡೆಸಿ ವರದಿ ಪಡೆದಿದ್ದಾರೆ.
You may like
ಬಿಜೆಪಿ ರಾಜ್ಯಾಧ್ಯಕ್ಷರಿಗೆ ಶಾಸಕ ದೊಡ್ಡನಗೌಡ ಪಾಟೀಲ್ ಪತ್ರ: ಕೊಪ್ಪಳ ಕ್ಷೇತ್ರಕ್ಕೆ ಪ್ರಭಾಕರ್ ಚಿಣಿಗೆ ಟಿಕೆಟ್ ನೀಡುವಂತೆ ಮನವಿ
ಹಣ್ಣುಗಳನ್ನು ತಿನ್ನುವಾಗ ಈ ಟಿಪ್ಸ್ ಫಾಲೋ ಮಾಡೋದನ್ನ ಮರೆಯಬೇಡಿ!
ಬೇಸಿಗೆಯಲ್ಲಿ ಕಾವೇರಿ ನೀರಿಲ್ಲ! ಬೆಂಗಳೂರಿಗೆ ಜಲ ಕ್ಷಾಮ ಫಿಕ್ಸ್
ಫೆ.7 ರಂದು ಮಂಡ್ಯ ನಗರ ಬಂದ್ಗೆ ಕರೆ ಕೊಟ್ಟ ಸಮಾನ ಮನಸ್ಕರ ವೇದಿಕೆ
ಬೆಳಗಾವಿ ರಾಜಕಾರಣಿಗಳು ಬದುಕಿದ್ದಾರಾ.? ಜಾರಕಿಹೊಳಿ, ಕತ್ತಿ, ಹುಕ್ಕೇರಿ, ಹೆಬ್ಬಾಳ್ಕರ್ ಏನಾಗಿದ್ದಾರೆ.?
ಪ್ರಭಾಸ್ ಫ್ಯಾನ್ಸ್ ದಿಲ್ ಖುಷ್ : ಈ ವರ್ಷ ರಾಧೆ ಶ್ಯಾಮ್.. ಮುಂದಿನ ವರ್ಷ ಸಲಾರ್ ರಿಲೀಸ್ಗೆ ಮುಹೂರ್ತ ಫಿಕ್ಸ್