Featured
ಹೇಗಿದೆ ಗೊತ್ತಾ ಕೋವಿಡ್ 19 ಸೋಂಕಿತರ ಫುಡ್ ಮೆನು..?
![](https://risingkannada.com/wp-content/uploads/2020/07/COVID-19-FOod.jpg)
ರೈಸಿಂಗ್ ಕನ್ನಡ:
ಕೆ.ಆರ್.ಬಾಬು, ತುಮಕೂರು:
ರಾಜ್ಯದ ಜಿಲ್ಲಾ ಮತ್ತು ಸಾರ್ವಜನಿಕ ಆಸ್ಪತ್ರೆಗಳಲ್ಲಿ ದಾಖಲಾಗಿರುವ ಕೋವಿಡ್ 19 ಸೋಂಕಿತ ರೋಗಿಗಳಿಗೆ ತಜ್ಞರ ಸಲಹೆಯಂತೆ ಆಹಾರ ಒದಗಿಸಲು ಸರ್ಕಾರ ತೀರ್ಮಾನಿಸಿದೆ. ರಾಜ್ಯದ ಜಿಲ್ಲಾ ಮತ್ತು ಸಾರ್ವಜನಿಕ ಆಸ್ಪತ್ರೆಗಳಲ್ಲಿ ಹಾಗೂ ಕೋವಿಡ್ ಕೇರ್ ಸೆಂಟರ್ಗಳು, ಡೆಡಿಕೇಟೆಡ್ ಕೋವಿಡ್ ಕೇರ್ ಸೆಂಟರ್ ಮತ್ತು ಡೆಡಿಕೇಟೆಡ್ ಕೋವಿಡ್ ಆಸ್ಪತ್ರೆಗಳಲ್ಲಿ ದಾಖಲಾಗಿರುವ ಕೋವಿಡ್ 19 ಸೋಂಕಿತ ರೋಗಿಗಳಿಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದು ಅವಶ್ಯಕವಾಗಿರುವುದರಿಂದ ತಜ್ಞರ ಸಲಹೆಯ ಮೇರೆಗೆ ಉತ್ತಮ ದರ್ಜೆಯ ಪೌಷ್ಟಿಕಾಂಶಯುಕ್ತ ಆಹಾರವನ್ನು ರೋಗಿಗಳಿಗೆ ಕಾಲಕಾಲಕ್ಕೆ ತಪ್ಪದೇ ಒದಗಿಸುವಂತೆ ಸರ್ಕಾರ ಆದೇಶ ನೀಡಿದೆ.
ಸರ್ಕಾರಿ ಆದೇಶದ ಪ್ರಕಾರ ಬೆಳಿಗ್ಗೆ ಏಳು ಗಂಟೆಗೆ ತಿಂಡಿಯಾಗಿ ಸೋಮವಾರ ರವೆ ಇಡ್ಲಿ, ಮಂಗಳವಾರ ಪೊಂಗಲ್, ಬುಧವಾರ ಸೆಟ್ ದೋಸೆ, ಗುರುವಾರ ಅಕ್ಕಿ ಇಡ್ಲಿ, ಶುಕ್ರವಾರ ಬಿಸಿ ಬೇಳೆ ಬಾತ್, ಶನಿವಾರ ಚೌಚೌಬಾತ್ ಹಾಗೂ ಭಾನುವಾರ ಸೆಟ್ ದೋಸೆಯನ್ನು ಒದಗಿಸಲು ತಿಳಿಸಲಾಗಿದೆ. ತಿಂಡಿಯ ನಂತರ ಹತ್ತು ಗಂಟೆಗೆ ಸೋಮವಾರ ಕಲ್ಲಂಗಡಿ ಹಣ್ಣು, ಮಂಗಳವಾರ ಪರಂಗಿಹಣ್ಣು, ಬುಧವಾರ ಕರ್ಬೂಜ ಹಣ್ಣು, ಗುರುವಾರ ಕಲ್ಲಂಗಡಿ ಹಣ್ಣು, ಶುಕ್ರವಾರ ಪರಂಗಿ ಹಣ್ಣು, ಶನಿವಾರ ಕರ್ಬೂಜ ಹಣ್ಣು, ಭಾನುವಾರ ಪರಂಗಿ ಹಣ್ಣನ್ನು ನೀಡಲು ತಿಳಿಸಲಾಗಿದೆ.
![](https://risingkannada.com/wp-content/uploads/2020/07/FULL-PLATE-5-1024x576.png)
ಇನ್ನು ಮಧ್ಯಾಹ್ನದ ಊಟವನ್ನು ಒಂದು ಗಂಟೆಗೆ ನೀಡಬೇಕೆಂದು ಆದೇಶಿಸಲಾಗಿದ್ದು ಎರಡು ರೊಟ್ಟಿ ಇಲ್ಲವೇ ಚಪಾತಿ, ಪಲ್ಯ, ಅನ್ನ, ಬೇಳೆ, ಸಾರು, ಮೊಸರು ಹಾಗೂ ಮೊಟ್ಟೆಯನ್ನು ನೀಡಬೇಕೆಂದು ಆದೇಶಿಸಿದೆ.
ಇನ್ನು ಸಂಜೆ ಐದು ಮೂವತ್ತಕ್ಕೆ ಏಲಕ್ಕಿ ಬಾಳೆಹಣ್ಣು, ಮಾರಿ ಬಿಸ್ಕೆಟ್, ಪ್ರೋಟೀನ್ ಬಿಸ್ಕಟ್ಗಳು, ಫ್ರೆಶ್ ಡೇಟ್ಸ್ , ಮ್ಯಾಂಗೋ ಬಾರ್ ನೀಡಲು ಆದೇಶಿಸಲಾಗಿದೆ.
ಇನ್ನು ರಾತ್ರಿ ಊಟಕ್ಕೆ ಸಂಜೆ ಏಳು ಗಂಟೆ ಹೊತ್ತಿಗೆ ಎರಡು ರೊಟ್ಟಿ ಇಲ್ಲವೇ ಚಪಾತಿ ಪಲ್ಯ ಅನ್ನ ಬೇಳೆ ಸಾರು ಮೊಸರನ್ನು ನೀಡಲು ತಿಳಿಸಲಾಗಿದೆ. ಇನ್ನು ರಾತ್ರಿ ಒಂಬತ್ತು ಗಂಟೆಗೆ ಫ್ಲೇವರ್ಡ್ ಮಿಲ್ಕ್ ನೀಡಬೇಕೆಂದು ಸರ್ಕಾರ ಆದೇಶಿಸಿದೆ. ಪ್ರತಿದಿನವೂ ಈ ರೀತಿ ಆಹಾರ ವ್ಯವಸ್ಥೆಯನ್ನು ರೋಗಿಗಳಿಗೆ ವೈದ್ಯರುಗಳಿಗೆ ಅಧಿಕಾರಿಗಳಿಗೆ ಮತ್ತು ಇತರರಿಗೆ ಒದಗಿಸುವುದು, ಬೆಳಗಿನ ಉಪಾಹಾರವನ್ನು ಏಳು ಗಂಟೆಗೆ ಮಧ್ಯಾಹ್ನದ ಊಟವನ್ನು ಒಂದು ಗಂಟೆಗೆ ಹಾಗೂ ರಾತ್ರಿ ಊಟವನ್ನು ಏಳು ಗಂಟೆಗೆ ನಿಯಮಿತವಾಗಿ ಒದಗಿಸಲು ಕ್ರಮ ವಹಿಸಬೇಕು ಎಂದು ಸರ್ಕಾರ ಆದೇಶಿಸಿದೆ. ಇನ್ನು ಪ್ರತಿ ವ್ಯಕ್ತಿಗೆ ಇನ್ನೂರ ಐವತ್ತು ರೂಪಾಯಿಯಂತೆ ಸರ್ಕಾರ ಆಹಾರದ ವೆಚ್ಚ ನಿಗದಿಪಡಿಸಿದ್ದು ಜಿಲ್ಲಾಧಿಕಾರಿಗಳ ವಿಪತ್ತು ಪರಿಹಾರ ನಿಧಿಯಿಂದ ಪಡೆಯಬೇಕೆಂದು ಆದೇಶ ನೀಡಿದೆ.
![](https://risingkannada.com/wp-content/uploads/2020/04/RISING-KANNADA-logo-150px.jpg)
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?