Featured
ಲಂಡನ್ To ಕೋಲ್ಕತ್ತಾ ಬಸ್ ಸೇವೆ – ತಮಾಷೆ ಅಲ್ಲ ಇದು ರಿಯಲ್ ಸ್ಟೋರಿ..!
ರೈಸಿಂಗ್ ಕನ್ನಡ :
ವೆಬ್ ಡೆಸ್ಕ್ :
ಎಲ್ಲಿಯ ಕೋಲ್ಕತ್ತಾ, ಎಲ್ಲಿಯಾ ಲಂಡನ್. ಕೇಳೋಕೆ ಆಶ್ಚರ್ಯ ಆಗುತ್ತೆ ಅಲ್ವಾ… ಆದ್ರೂ ಇದು ನಿಜ ಸಂಗತಿ. ಲಂಡನ್ ಮತ್ತು ಕೋಲ್ಕತ್ತಾ ನಡುವೆ ಬಸ್ ಸೇವೆ ಇತ್ತು. ಹಾಗಂತ ಇದು ಈಗಿನ ಸುದ್ದಿಯಲ್ಲ 1957ರಲ್ಲಿ ಲಂಡನ್ ಮತ್ತು ಕೋಲ್ಕತ್ತಾ ನಡುವೆ ಓಡಾಡುತ್ತಿದ್ದ ಬಸ್ ಒಂದರ ಫೋಟೋ ಇದೀಗ ವೈರಲ್ ಆಗಿದೆ.
ಹಳೆಯ ಫೋಟೋಗಳೆಂದರೆ ಎಲ್ಲರಿಗೂ ಇಷ್ಟ. ಒಂದು ಹಳೆಯ ಫೋಟೋ ನೂರಾರು ಕಥೆಗಳನ್ನ ಹೇಳುತ್ತವೆ. ಇದೀಗ ಹಳೆಯ ಫೋಟೋವೊಂದು ಸೋಶಿಯಲ್ ಮೀಡಿಯಾದಲ್ಲಿ ಟ್ರೇಡಿಂಗ್ ಆಗುತ್ತಿದೆ. ಈ ಫೋಟೋ ಸರಿ ಸುಮಾರು 1957ರಲ್ಲಿ ತೆಗೆದಿರೋದು. ಅಂದು ದೂರದ ಲಂಡನ್‌ನಿಂದ ಕೋಲ್ಕತ್ತಾಗೆ ಬರುತ್ತಿದ್ದ ಬಸ್‌ನ ಫೋಟೋ ಇದಾಗಿದೆ.
ಬಸ್‌ನ ಈ ಬ್ಲ್ಯಾಕ್ ಅಂಡ್ ವೈಟ್ ಫೋಟೋ ನೋಡಿದವರೆಲ್ಲಾ ನಿಬ್ಬೆರಗಾಗಿದ್ದಾರೆ. ಲಂಡನ್‌ನ ವಿಕ್ಟೋರಿಯ ಕೋಚ್ ಸ್ಟೇಷನ್‌ನಲ್ಲಿ ಪ್ರಯಾಣಿಕರು ಬಸ್ ಹತ್ತುವ ದೃಶ್ಯ ಇದಾಗಿದ್ದು ಫೋಟೋದಲ್ಲಿ ದಾಖಲಾಗಿದೆ. ಬಸ್ ನೇರವಾಗಿ ಕೋಲ್ಕತ್ತಾಕ್ಕೆ ಬರುತ್ತಿತ್ತು.
ಈ ಬಸ್ 1957ರಲ್ಲಿ ಏಪ್ರಿಲ್‌ನಲ್ಲಿ ಮೊದಲ ಪ್ರಯಾಣ ಆರಂಭಿಸಿತ್ತು. ಸುಮಾರು 2 ತಿಂಗಳುಕಾಲ ಸಂಚರಿಸಿ ಜೂನ್ 5ರಂದು ಕೋಲ್ಕತ್ತಾ ತಲುಪಿತ್ತು. ಈ ಬಸ್ ಹೆಸರು ಆಲ್ಬರ್ಟ್ ಟ್ರಾವೆಲ್. ಇಂಗ್ಲೆಂಡ್, ಬೆಲ್ಜಿಯಂ, ಪಶ್ಚಿಮ ಜರ್ಮನಿ, ಆಸ್ಟ್ರಿಯಾ, ಯುಗೊಸ್ಲೋವಿಯ, ಬಲ್ಗೇರಿಯಾ, ಟರ್ಕಿ, ಇರಾನ್, ಅಫ್ಘಾನಿಸ್ತಾನ, ಪಾಕಿಸ್ತಾನ ಮೂಲಕ ಭಾರತಕ್ಕೆ ಬಂದಿತ್ತು.
ಕೋಲ್ಕತ್ತಾಕ್ಕೆ ಬಂದಿಳಿಯಲು ಅಂದಿನ ಬಸ್ ದರ 85 ಪೌಂಡ್ಸ್ ಭಾರತದ ಮೌಲ್ಯ ಸುಮಾರು 8019 ರೂಪಾಯಿಗಳು. ಈ ಬಸ್‌ನಲ್ಲಿ ಬರುವ ಪ್ರಯಾಣಿಕರಿಗೆ ದೆಹಲಿ, ಡೆಹ್ರಾನ್, ಸಾಲ್ಟ್‌ಬರ್ಗ್, ಕಾಬೂಲ್, ಇಸ್ತಾಂಬುಲ್ ಮತ್ತು ವಿಯೆನ್ನಾದಲ್ಲಿ ಶಾಪಿಂಗ್ ಮಾಡಬಹುದಿತ್ತು.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?