Featured
ತೊಗರಿ ಗೋದಾಮಿಗೆ ಬೆಂಕಿ ಇಟ್ಟ ಕಿಡಿಗೇಡಿಗಳು ಯಾರು..? ರೈತರು ಕಂಗಾಲು
![](https://risingkannada.com/wp-content/uploads/2020/07/Ydg-fire.jpg)
ರೈಸಿಂಗ್ ಕನ್ನಡ:
ದುರ್ಗೇಶ್ ಮಂಗಿಹಾಳ, ಯಾದಗಿರಿ :
ಯಾದಗಿರಿ ಜಿಲ್ಲೆಯ ಸುರಪುರದ ಕೆಂಭಾವಿ ಎಪಿಎಮ್ ಸಿ ಆವರಣದಲ್ಲಿರುವ ಉಗ್ರಾಣಕ್ಕೆ ಬೆಂಕಿ ತಗುಲಿ ಲಕ್ಷಾಂತರ ರೂಪಾಯಿ ಮೌಲ್ಯದ ಅಪಾರ ಪ್ರಮಾಣದ ತೊಗರಿ ನಾಶವಾಗಿದೆ. ನಾಲ್ಕು ದಿನದ ಹಿಂದೆ ನಡೆದಿದ್ದ ಅಗ್ನಿ ಅವಘಡ ತಡವಾಗಿ ಬೆಳಕಿಗೆ ಬಂದಿದೆ. ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ಕೆಂಭಾವಿ ಪಟ್ಟಣದ ಸರ್ಕಾರಿ ಉಗ್ರಾಣದಲ್ಲಿ ಘಟನೆ ನಡೆದಿದೆ. ಇಪ್ಪತ್ತಕ್ಕೂ ಹೆಚ್ಚು ರೈತರು ಗೋದಾಮಿನಲ್ಲಿ ಇರಿಸಿದ ತೊಗರಿ ಬೆಂಕಿಯಲ್ಲಿ ಸುಟ್ಟು ಕರಕಲಾಗಿದೆ. ಯಾರಾದ್ರು ಕಿಡಿಗೇಡಿಗಳು ಗೋದಾಮಿಗೆ ಬೆಂಕಿ ಹಚ್ಚಿದ್ದಾರಾ..? ಅಥವಾ ಸಿಡಿಲು ಬಡಿದು ಗೋದಾಮಿಗೆ ಬೆಂಕಿ ಹತ್ತಿದೆಯಾ ಎನ್ನುವ ಬಗ್ಗೆ ಅಧಿಕಾರಿಗಳ ಅನುಮಾನ ವ್ಯಕ್ತಪಡಿಸಿದ್ದಾರೆ. ನೂರಾರು ಕ್ವಿಂಟಲ್ ತೊಗರಿ ಬೆಂಕಿಯಲ್ಲಿ ಬೆಂದು ಕರಕಲಾಗಿದೆ. ಈ ಬಗ್ಗೆ ಅಧಿಕಾರಿಗಳು ಸ್ಪಷ್ಟನೆ ಕೊಡ್ತಿಲ್ಲ. ಹೀಗಾಗಿ ಉಗ್ರಾಣ ನಿಗಮದ ಗೋದಾಮು ಅಗ್ನಿ ದುರಂತಕ್ಕೆ ಒಳಗಾಗಿರುವುದು ಸಾಕಷ್ಟು ಅನುಮಾನ ಮೂಡಿಸಿದೆ. ಕಷ್ಟಪಟ್ಟು ಬೆಳೆ ಬೆಳೆದಿದ್ದ ಅನ್ನದಾತರು ಬೆಂಕಿಯಲ್ಲಿ ಕಾಳು ಸುಟ್ಟಿರುವುದಕ್ಕೆ ಅಕ್ಷರಶಃ ಕಂಗಲಾಗಿದ್ದಾರೆ. ಕೆಂಭಾವಿ ಪೊಲೀಸ್ ಠಾಣೆ ವ್ಯಾಪ್ತಿ ಪ್ರಕರಣ ನಡೆದಿದೆ.
![](https://risingkannada.com/wp-content/uploads/2020/07/TEMPLET-0-00-02-15-1024x576.jpg)
![](https://risingkannada.com/wp-content/uploads/2020/04/RISING-KANNADA-logo-150px.jpg)
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?