Featured
ತಂಗಡಗಿಗೆ ಹಳೆಯ ವೃತ್ತಿಯ ನೆನಪಾಗಿದೆ- ಬಿ.ಸಿ.ಪಾಟೀಲ್ಗೆ ಅಭಿವೃದ್ಧಿ ಮಾತ್ರ ಗೊತ್ತು- ಬೈರತಿ ಬಸವರಾಜ್
ರೈಸಿಂಗ್ ಕನ್ನಡ:
ನಾಗರಾಜ್. Y.ಕೊಪ್ಪಳ
ಬಿ.ಸಿ ಪಾಟೀಲ್ ಅವರಿಗೆ ಕೇವಲ ಅಭಿವೃದ್ಧಿ ಮಾತ್ರ ಗೊತ್ತು, ಬೇರೇನು ಗೊತ್ತಿಲ್ಲ. ಅವರ ಬಗ್ಗೆ ಆರೋಪ ಮಾಡುವ ಮಾಜಿ ಸಚಿವ ಶಿವರಾಜ ತಂಗಡಗಿ ಅವರು ತಮ್ಮ ಹಳೇ ವೃತ್ತಿ ನೆನಪು ಮಾಡಿಕೊಂಡಿದ್ದಾರೆ ಎಂದು ಶಿವರಾಜ್ ತಂಗಡಗಿಗೆ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್ ಟಾಂಗ್ ನೀಡಿದ್ದಾರೆ.
ಕೊಪ್ಪಳದಲ್ಲಿ ಮಾತನಾಡಿದ ಅವರು, ಕೊಪ್ಪಳ ಉಸ್ತುವಾರಿ ಸಚಿವರಾದ ಬಿ.ಸಿ ಪಾಟೀಲ್ ಕೊಪ್ಪಳಕ್ಕೆ ಬರೋದೆ ವಸೂಲಿಗಾಗಿ ಎಂದು ಹೇಳಿಕೆ ನೀಡಿದ್ದಾರೆ. ಆದ್ರೆ ಬಿ.ಸಿ ಪಾಟೀಲ್ ಅವರಿಗೆ ಇದೆಲ್ಲಾ ಗೊತ್ತಿಲ್ಲ. ಅವರಿಗೆ ಅಭಿವೃದ್ದಿ ಮಾಡೋದು ಮಾತ್ರ ಗೊತ್ತು. ಸುಖಾಸುಮ್ಮನೆ ಆರೋಪ ಮಾಡ್ತಾ ಇರುವ ಮಾಜಿ ಸಚಿವ ಶಿವರಾಜ್ ತಂಗಡಗಿಯವರಿಗೆ ತಾವು ವಸೂಲಿ ಮಾಡ್ತಾ ಇದ್ದ ಹಳೇ ನೆನಪುಗಳು ಇದೀಗ ನೆನಪಾಗಿರಬೇಕು ಎಂದು ಟಾಂಗ್ ನೀಡಿದ್ರು.
ಯುಜಿಡಿ ಮತ್ತು ಕುಡಿವ ನೀರಿನ ಕಾಮಗಾರಿ 2 ತಿಂಗಳಿನಲ್ಲಿ ಪೂರ್ಣಗೊಳಿಸಲು ಸೂಚಿಸಲಾಗಿದೆ. ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಸುಮಾರು 6 ಕೋಟಿ ಹಣ ಇದೆ.ನಿವೇಶನ ರಚನೆಗೆ ಟೆಂಡರ್ ಕರೆಯಲಾಗಿದೆ ಎಂದರು. ಅಲ್ಲದೆ ನಗರಾಭಿವೃದ್ಧಿ ಪ್ರಾಧಿಕಾರ ರಚನೆ ಮಾಡುವ ನಿವೇಶನದಲ್ಲಿ ಶೇ.5ರಷ್ಟು ಪತ್ರಕರ್ತರಿಗೆ ಮೀಸಲು ಇಡ್ತಿವಿ ಎಂದು ಭರವಸೆ ನೀಡಿದ್ರು.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?