Featured
ಈ ಟಿಕ್ಟಾಕ್ ಸ್ಟಾರ್ ಆತ್ಮಹತ್ಯೆಗೆ ಕಾರಣ ಕೇಳಿದ್ರೆ ಶಾಕ್ ಆಗ್ತೀರ..!

ರೈಸಿಂಗ್ ಕನ್ನಡ :
ಅದ್ಯಾಕೋ ಏನೋ ಈ ವರ್ಷ ಹಲವು ಸ್ಟಾರ್ಗಳ ಸಾವನ್ನ ನೋಡಬೇಕಿದೆ. ಅದರಲ್ಲೂ ಸ್ಟಾರ್ಗಳ ಆತ್ಮಹತ್ಯೆ ಹೆಚ್ಚಾಗ್ತಿದೆ. ಇದಕ್ಕೆ ಹೊಸ ಸೇರ್ಪಡೆ ಟಿಕ್ ಟಾಕ್ ಸ್ಟಾರ್ ಸಿಯಾ ಕಕ್ಕಡ್ ಆತ್ಮಹತ್ಯೆ ಮಾಡ್ಕೊಂಡಿದ್ದು, ಆತಂಕ ಮೂಡಿಸಿದೆ. ಇತ್ತೀಚೆಗೆ ಜನಸಾಮಾನ್ಯರು ಕೂಡ ಸೆಲಬ್ರಿಟಿಗಳಾಗ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಪೋಸ್ಟ್ ಮಾಡಿದ್ರೆ ಲಕ್ಷಾಂತರ ಅಭಿಮಾನಿಗಳು ಹುಟ್ಟಿಕೊಳ್ತಿದ್ದಾರೆ. ಅದರಲ್ಲೂ ಟಿಕ್ಟಾಕ್ನಲ್ಲಿ ಅತೀ ಹೆಚ್ಚು ಫೇಮಸ್ ಆಗ್ತಿದ್ದಾರೆ.
ಹೀಗೆಯೇ, 16 ವರ್ಷದ ಸಿಯಾ ಕಕ್ಕಡ್ ಟಿಕ್ಟಾಕ್ನಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿದ್ರು ಸುಮಾರು 11 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ರು. ಇದರಿಂದ ಲಕ್ಷಾಂತರ ಅಭಿಮಾನಿಗಳು ಶಾಕ್ ಆಗಿದ್ರು. ಜೊತೆಗೆ ಕಂಬನಿ ಕೂಡ ಮಿಡಿದಿದ್ರು. ಆದ್ರೆ, ಸಿಯಾ ಕಕ್ಕಡ್ ಸಾವಿಗೆ ಏನ್ ಕಾರಣ ಅನ್ನೋದೇ ಗೊಂದಲವಾಗಿದೆ.
ಆತ್ಮಹತ್ಯೆ ವಿಚಾರವನ್ನ ಬಾಲಿವುಡ್ ಫ್ಯಾಷನ್ ಫೋಟೋಗ್ರಾಫರ್ ವೈರಲ್ ಬಯಾನಿ ಅವರು ಹೊಸ ವಿಚಾರವನ್ನ ಬಹಿರಂಗ ಮಾಡಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ಮಾಹಿತಿ ನೀಡಿರೋ ಬಯಾನಿ, ಸಿಯಾ ಕಕ್ಕಡ್ ಆತ್ಮಹತ್ಯೆ ಮಾಡ್ಕೊಂಡಿದ್ದಾರೆ. ಇದಕ್ಕೂ ಮುನ್ನ ನಾನು ಸಿಯಾ ಕಕ್ಕಡ್ ಮ್ಯಾನೇಜರ್ ಅರ್ಜುನ್ ಸರೀನ್ ಜೊತೆ ಮಾತ್ನಾಡಿದ್ದೇನೆ ಎಂದು ಬಯಾನಿ ಬರೆದಿದ್ದಾರೆ.
ಸಿಯಾಗೆ ಏನೂ ತೊಂದರೆ ಇರಲಿಲ್ಲ. ಒಳ್ಳೇ ಮೂಡ್ನಲ್ಲೇ ಇದ್ರು. ಆದ್ರೆ, ಈ ರೀತಿ ಆಗಿದ್ದು ನಿಜಕ್ಕೂ ಬೇಸರ ಎಂದು ಅರ್ಜುನ್ ಹೇಳಿದ್ದಾರೆ. ಅದೇನೇ ಆಗ್ಲಿ, ಖಿನ್ನತೆಯಿಂದಾಗಿ ಇತ್ತೀಚೆಗೆ ಹಲವು ಮಂದಿ ಆತ್ಮಹತ್ಯೆ ದಾರಿ ಹಿಡಿತಿರೋದು ನಿಜಕ್ಕೂ ಆತಂಕದ ವಿಚಾರ. ಕೆಲವು ದಿನಗಳ ಹಿಂದಷ್ಟೇ ಬಾಲಿವುಡ್ ನಟ ಸುಶಾಂತ್ ರಜಪೂತ್ ಆತ್ಮಹತ್ಯೆ ಮಾಡಿಕೊಂಡಿದ್ರು.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?