Featured
ದೊಡ್ಡಬಳ್ಳಾಪುರ ನಗರದಲ್ಲಿ ಮೊದಲ ಕೊರೊನಾ ಪ್ರಕರಣ: ಒಂದೇ ಮನೆಯಲ್ಲಿ ಇಬ್ಬರಿಗೆ ಸೊಂಕು, ಚೈತನ್ಯ ನಗರ ಸೀಲ್ ಡೌನ್

ರೈಸಿಂಗ್ ಕನ್ನಡ:
ಬೆಂಗಳೂರು ಗ್ರಾಮಾಂತರ:
Advertisement

ದೊಡ್ಡಬಳ್ಳಾಪುರದ ಚೈತನ್ಯ ನಗರದ 4ನೇ ಕ್ರಾಸ್ ನಲ್ಲಿ ವಾಸವಾಗಿದ್ದ ಒಂದೇ ಕುಟುಂಬದ ಇಬ್ಬರಿಗೆ ಕರೊನಾ ಸೋಂಕು ತಗುಲಿರುವುದು ದೃಢ ಪಟ್ಟಿದೆ. 48 ಮತ್ತು 42ವಯಸ್ಸಿನ ಸೋಂಕಿತ ಇಬ್ಬರು ILI ಲಕ್ಷಣಗಳಿಂದ ಬಳಲುತ್ತಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಹೋದಾಗ ಕೊರೋನಾ ಸೊಂಕು ದೃಢ ಪಟ್ಟಿದೆ. ಕುಟುಂಬದ ಸದಸ್ಯರನ್ನ ಕ್ವಾರಂಟೈನ್ ಮಾಡಲಾಗಿದ್ದು, ಚೈತನ್ಯ ನಗರದ 2ನೇ ಕ್ರಾಸ್ ನಿಂದ 7ನೇ ಕ್ರಾಸ್ ವರೆಗಿನ ರಸ್ತೆಯನ್ನು ಶುಕ್ರವಾರ ರಾತ್ರಿಯಿಂದಲೇ ಸೀಲ್ ಡೌನ್ ಮಾಡಲಾಗಿದೆ.
ಬೆಂಗಳೂರಿನ ಕೊರೋನಾ ಚಿಕಿತ್ಸ ಕೇಂದ್ರಗಳಾದ ವಿಕ್ಟೋರಿಯಾ ಮತ್ತು ವಾಣಿ ವಿಲಾಸ್ ಆಸ್ಪತ್ರೆಗಳಲ್ಲಿ ಜಾಗವಿಲ್ಲದ ಕಾರಣ, ಸರ್ಕಾರದ ಆದೇಶದ ಮೇರೆಗೆ ಈ ಮುಂಚೆಯೇ ಸಿದ್ದತೆ ಮಾಡಿಕೊಂಡಿದ್ದ ದೊಡ್ಡಬಳ್ಳಾಪುರದಲ್ಲಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೊರೊನಾ ಚಿಕಿತ್ಸೆ ಇಂದಿನಿಂದ ಆರಂಭವಾಗುತ್ತಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿದೆ.
Advertisement
Continue Reading
Advertisement
You may like
Click to comment