Featured
ಚೊಚ್ಚಲ ವಿಶ್ವಕಪ್‌ಗೆ 37 ವರ್ಷಗಳ ಸಂಭ್ರಮ..! – ಲಾರ್ಡ್ಸ್ ಅಂಗಳದಲ್ಲಿ ವಿಂಡೀಸ್ ವಿರುದ್ಧ ವಿಜಯ ಸಾಧಿಸಿದ್ದ ಕಪಿಲ್ ಡೆವಿಲ್ಸ್..!

ರೈಸಿಂಗ್ ಕನ್ನಡ :
ಸ್ಪೋರ್ಟ್ಸ್ ಡೆಸ್ಕ್ :
ಜೂನ್ 25, 1983. ವಿಶ್ವಕ್ರಿಕೆಟ್‌ನಲ್ಲಿ ಭಾರತ ವಿಜಯ ಪತಾಕೆ ಹಾರಿಸಿದ ದಿನವಿದು. ಅಂದ ಇಂಗ್ಲೆಂಡ್‌ಗೆ ಜಾಲಿ ಮಾಡೋಕೆ ಅಂತ ಹೋಗಿದ್ದ ತಂಡವದು. ಆದ್ರೆ, ಬಂದಿದ್ದು ಮಾತ್ರ ವಿಶ್ವವಿಜೇತರಾಗಿ. ಯೆಸ್, ಕಪಿಲ್ ದೇವೇ ನಾಯಕತ್ವದ ಭಾರತೀಯ ಕ್ರಿಕೆಟ್ ತಂಡ, ಜೂನ್ 25, 1983ರಲ್ಲಿ ಲಾರ್ಡ್ಸ್ ಅಂಗಳದಲ್ಲಿ ಕ್ರಿಕೆಟ್ ವಿಶ್ವಕಪ್ ಗೆದ್ದು ಬೀಗಿತ್ತು.
ಕೋಟ್ಯಾಂತರ ಭಾರತೀಯ ಕ್ರಿಕೆಟ್ ಅಭಿಮಾನಿಗಳು, ಈ ಸುವರ್ಣ ದಿನವನ್ನ ಇಂದಿಗೂ ಸ್ಮರಿಸಿಕೊಳ್ಳುತ್ತಾರೆ. ಯಾಕಂದ್ರೆ ಅಂದು, ಭಾರತೀಯ ಕ್ರಿಕೆಟ್‌ಗೆ ಹೊಸ ಭಾಷ್ಯ ಬರೆದ ದಿನ. ಕಪಿಲ್ ದೇವ್ ನಾಯಕತ್ವದ ಭಾರತ ತಂಡ, ಕ್ರಿಕೆಟ್ ಕಾಶಿ ಲಾರ್ಡ್ಸ್ ಮೈದಾನದಲ್ಲಿ ಇತಿಹಾಸ ನಿರ್ಮಿಸಿದ ದಿನ. ಎರಡು ಬಾರಿ ವಿಶ್ವಚಾಂಪಿಯನ್ ವೆಸ್ಟ್ ಇಂಡೀಸ್ ತಂಡವನ್ನ ಬಗ್ಗುಬಡಿದ ಕಪಿಲ್ ಡೆವಿಲ್ಸ್, ವಿಶ್ವದಾಖಲೆ ನಿರ್ಮಿಸಿತು. ಆ ಗೆಲುವಿಗೆ ಇಂದು ಬರೋಬ್ಬರಿ 37 ವರ್ಷಗಳ ಸಂಭ್ರಮ.
ಕೆರಿಬಿಯನ್ನರಿಗೆ ಕೇವಲ 184 ರನ್‌ಗಳ ಸುಲಭ ಮೊತ್ತದ ಗುರಿ ನೀಡಿದ್ದ ಭಾರತ ತಂಡ, ವಿಂಡೀಸ್ ಸ್ಟ್ರಾಂಗ್ ಬ್ಯಾಟಿಂಗ್ ಲೈನ್ಅಪ್ ಅನ್ನ ಧೂಳಿಪಟ ಮಾಡಿತು. ಮದಲ್ ಲಾಲ್, ಮೊಹೀಂದರ್ ಅಮರ್ನಾಥ್ ಮತ್ತು ಸಂಧು, ಕೆರಿಬಿಯನ್ ಬ್ಯಾಟ್ಸ್ಮನ್ಗಳನ್ನ ಪೆವಿಲಿಯನ್‌ಗಟ್ಟಿದ್ರು. ಕೊನೆಗೆ ಕಪಿಲ್ ಡೆವಿಲ್ಸ್ ಬೌಲರ್ಗಳ ಸ್ಪೆಲ್ಗೆ ಬೆಚ್ಚಿಬಿದ್ದ ವಿಂಡೀಸ್, 140 ರನ್ಗಳಿಗೆ ಆಲೌಟಾಯ್ತು. ಆ ಮೂಲಕ ಮೂರನೇ ಬಾರಿ ವಿಶ್ವಕಪ್ ಗೆಲುವಿನ ಕನಸು ಕಾಣುತ್ತಿದ್ದ ವೆಸ್ಟ್ ಇಂಡೀಸ್ ಆಸೆ, ನಿರಾಸೆಯಾಯಿತು. ಈ ಗೆಲುವಿನ ಬಳಿಕ, ಕ್ರಿಕೆಟ್ ಲೋಕದಲ್ಲಿ ಭಾರತದ ಹವಾ ಮತ್ತಷ್ಟು ಹೆಚ್ಚಾಯ್ತು.

You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?