Featured
SSLC ಪರೀಕ್ಷೆಗೆ ಸಜ್ಜಾದ ಕೋಟೆನಾಡು ಚಿತ್ರದುರ್ಗ

ರೈಸಿಂಗ್ ಕನ್ನಡ :
ಚಿತ್ರದುರ್ಗ :
ಕೊರೊನಾ ಸಂಕಷ್ಟದ ನಡುವೆಯೂ ರಾಜ್ಯ ಸರ್ಕಾರ SSLC ಪರೀಕ್ಷೆಗೆ ಸಿದ್ಧತೆ ನಡೆಸಿದೆ. ಕೋಟೆಗಳ ನಾಡು ಚಿತ್ರದುರ್ಗ SSLC ಪರೀಕ್ಷೆಗೆ ಜಿಲ್ಲಾ ಶಿಕ್ಷಣ ಇಲಾಖೆ ಸಂಪೂರ್ಣ ಸಜ್ಜಾಗಿದೆ. ಜಿಲ್ಲೆಯಲ್ಲಿ ಒಟ್ಟು 22615 ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆ ಬರೆಯಲಿದ್ದಾರೆ. 370 ವಲಸೆ ವಿದ್ಯಾರ್ಥಿಗಳಿಗೂ ಜಿಲ್ಲೆಯಲ್ಲಿ ಪರೀಕ್ಷೆ ಬರೆಯಲು ಅನುಮತಿ ನೀಡಲಾಗಿದೆ. ಬೇರೆ ರಾಜ್ಯದಿಂದ ಬಂದಿರುವ 27 ವಿದ್ಯಾರ್ಥಿಗಳಿಗೂ ಪ್ರತ್ಯೇಕ ಕೊಠಡಿ ಮತ್ತು ಹಾಸ್ಟೆಲ್ ವ್ಯವಸ್ಥೆ ಮಾಡಲಾಗಿದೆ.
ಜಿಲ್ಲೆಯಲ್ಲಿ ಒಟ್ಟು 87 ಪರೀಕ್ಷಾ ಕೇಂದ್ರಗಳು ಸನ್ನದ್ಧವಾಗಿವೆ. ಹೆಚ್ಚುವರಿಯಾಗಿ 12 ಕೊಠಡಿಗಳಿವೆ. ಪರೀಕ್ಷೆಗೆ ಬರುವ ವಿದ್ಯಾರ್ಥಿಗಳಿಗಾಗಿ 197 ಖಾಸಗಿ ಬಸ್ಗಳ ವ್ಯವಸ್ಥೆ ಮಾಡಲಾಗಿದೆ. ವಿದ್ಯಾರ್ಥಿಗಳಿಗೆ ಮಾಸ್ಕ್ ಮತ್ತು ಸ್ಯಾನಿಟೈಜಲ್ ವ್ಯವಸ್ಥೆಯನ್ನ ಕೂಡ ಮಾಡಲಾಗಿದೆ. ಅಲ್ಲದೇ ಸಾಮಾಜಿಕ ಅಂತರದಲ್ಲೇ ಪರೀಕ್ಷೆ ಬರೆಯಲು ಕ್ರಮಕೈಗೊಳ್ಳಲಾಗಿದೆ. ಅಲ್ಲದೇ ಪ್ರತೀ ಪರೀಕ್ಷೆ ಕೇಂದ್ರಗಳಲ್ಲೂ ಅನಾರೋಗ್ಯದಿಂದ ಬಳಲುತ್ತಿರುವ ವಿದ್ಯಾರ್ಥಿಗಳಿಗೆ N95 ಮಾಸ್ಕ್ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ.
You may like
ಕೋಟೆನಾಡಿನ ಪೊಲೀಸರಲ್ಲಿ ಮಹಾಮಾರಿಯ ಭೀತಿ- ನೂರಕ್ಕೂ ಹೆಚ್ಚು ಆರಕ್ಷರು ಕ್ವಾರಂಟೈನ್
SSLC ಪರೀಕ್ಷೆ ಬರೆದ 32 ವಿದ್ಯಾರ್ಥಿಗಳಿಗೆ ಕೊರೊನಾ ಪಾಸಿಟಿವ್ – ಸಂಪರ್ಕದಲ್ಲಿದ್ದ 80 ವಿದ್ಯಾರ್ಥಿಗಳಿಗೆ ಹೋಮ್ ಕ್ವಾರಂಟೈನ್
ಕೊರೊನಾ ನಡುವೆಯೂ SSLC ಪರೀಕ್ಷೆಯನ್ನ ಯಶಸ್ವಿಯಾಗಿ ನಡೆಸಿದ ಸರ್ಕಾರ – ಶನಿವಾರಕ್ಕೆ ಎಲ್ಲವೂ ಮುಕ್ತಾಯ – ಸಚಿವ ಸುರೇಶ್ ಕುಮಾರ್ ಪರಿಶ್ರಮಕ್ಕೆ ಶ್ಲಾಘನೆ..!
ತೈಲ ಬೆಲೆ ಏರಿಕೆಗೆ ವಿರೋಧ – ಕೇಂದ್ರದ ವಿರುದ್ಧ ಚಿತ್ರದುರ್ಗದಲ್ಲಿ ಕಾಂಗ್ರೆಸ್ ಪ್ರತಿಭಟನೆ
ಚಿತ್ರದುರ್ಗಕ್ಕೆ ಕಂಟಕವಾಗ್ತಿದೆ ಬೆಂಗಳೂರು ಸಂಪರ್ಕ- ಚಳ್ಳಕೆರೆ, ಹೊಳಲ್ಕೆರೆಗೂ ಕಾಲಿಟ್ಟ ಮಹಾಮಾರಿ
SSLC ಪರೀಕ್ಷೆ ಬರೆಯುತ್ತಿದ್ದಾನೆ ಸ್ಯಾಂಡಲ್ವುಡ್ ಚೋಟಾ ಡೈರೆಕ್ಟರ್..!