ರೈಸಿಂಗ್ ಕನ್ನಡ :
‘ಪ್ರೀಮಿಯರ್ ಪದ್ಮಿನಿ’ ಚಿತ್ರದಲ್ಲಿ ನಂಜುಂಡಿಯಾಗಿ ಎಲ್ಲರ ಮನಗೆದ್ದಿದ್ದ ಪ್ರಮೋದ್ ಈಗ ‘ಇಂಗ್ಲಿಷ್ ಮಂಜ’ನಾಗಲು ಹೊರಟಿದ್ದಾರೆ. ‘ಕೋಲಾರ’ ಚಿತ್ರವನ್ನು ನಿರ್ದೇಶನ ಮಾಡಿದ್ದ ಆರ್ಯ ಮಹೇಶ್ ಆ್ಯಕ್ಷನ್ ಕಟ್ ಹೇಳುತ್ತಿರುವ ‘ಇಂಗ್ಲೀಷ್ ಮಂಜ’ ಚಿತ್ರದಲ್ಲಿ ಪ್ರಮೋದ್ ಮಂಜನಾಗಲಿದ್ದಾರೆ. ರೌಡಿಸಂ ಬ್ಯಾಗ್ರೌಂಡ್ನಲ್ಲಿ ಬರುವ ಈ ಚಿತ್ರದಲ್ಲಿ ಲವ್ ಸ್ಟೋರಿಯೂ ಇದೆಯಂತೆ. ಮೊದಲಿನಿಂದಲೂ ರೌಡಿಸಂ ಚಿತ್ರ ಮಾಡಬೇಕು ಅನ್ನೋ ಪ್ರಮೋದ್ ಕನನಸು ಇದೀಗ ನನಸಾಗುತ್ತಿದೆ.
ಇಂಗ್ಲೀಷ್ ವಿಷಯದಲ್ಲಿ ಯಾವಾಗಲೂ ಫೇಲ್ ಆಗುತ್ತಿದ್ದ ಕಾರಣ ನಾಯಕನಿಗೆ ‘ಇಂಗ್ಲೀಷ್ ಮಂಜ’ ಎಂಬ ಅಡ್ಡ ಹೆಸರು ಬಂದಿರುತ್ತಂತೆ. ಈ ಚಿತ್ರದಲ್ಲಿ ನನ್ನ ಪಾತ್ರ ಖಂಡಿತಾ ಜನರಿಗೆ ಇಷ್ಟವಾಗುತ್ತದೆ ಎಂಬ ನಂಬಿಕೆ ಇದೆ ಎಂದಿದ್ದಾರೆ ಪ್ರಮೋದ್.
ಆರ್ಯ ಮಹೇಶ್ ಕಿರಿಕ್ ಕೀರ್ತಿ ನಟನೆಯ ‘ತಿರುಮಲ ವೈನ್ ಸ್ಟೋರ್’ ಚಿತ್ರ ಈಗಾಗಲೇ ನಿರ್ದೇಶನ ಮಾಡಿ ಮುಗಿಸಿದ್ದಾರೆ. ಇದೀಗ ತಮ್ಮ ನಿರ್ದೇಶನದ ಮೂರನೇ ಚಿತ್ರವಾಗಿ ‘ಇಂಗ್ಲೀಷ್ ಮಂಜ’ನನ್ನ ತೆಗೆದುಕೊಂಡಿದ್ದಾರೆ. ಸಧ್ಯ ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದ್ದು, ನೋಡಲು ಆಕರ್ಷಕವಾಗಿದೆ.
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?