Featured
ಹರ್ಭಜನ್ ಸಿಂಗ್ ಶ್ರೀದೇವಿಯಂತೆ – ಗಂಗೂಲಿ ಗಂಗೂಲಿಯನ್ನೇ ಡೇಟಿಂಗ್ಗೆ ಕರೀತಾರಂತೆ – ಸಖತ್ತಾಗಿದೆ 90ರ ದಶಕದ ಕ್ರಿಕೆಟಿಗರ ಫನ್ನಿ ಫೋಟೋ..!

ರೈಸಿಂಗ್ ಕನ್ನಡ :
ಭಾರತೀಯ ಕ್ರಿಕೆಟ್ನಲ್ಲೀಗ ಸೋಷಿಯಲ್ ಮೀಡಿಯಾದಲ್ಲಿ ತಮಾಷೆ ಮಾಡೋದು ಕಾಮನ್ ಆಗಿಬಿಟ್ಟಿದೆ. ಮೊನ್ನೆ ಮೊನ್ನೆ ಅಷ್ಟೆ ಯುವರಾಜ್ ಸಿಂಗ್ ಪ್ರಸ್ತುತ ಭಾರತ ತಂಡದ ಆಟಗಾರರ ಲಿಂಗ ಬದಲಿಸಿದ ಫೋಟೋವನ್ನ ಅಪ್ಲೋಡ್ ಮಾಡಿ ತಮಾಷೆ ಮಾಡಿದ್ದರು. ಇದೀಗ, ಹರ್ಭಜನ್ ಸಿಂಗ್ ಸರದಿ.
ಟರ್ಬನೇಟರ್ 90ರ ದಶಕದ ಆಟಗಾರರ ತಂಡದ ಜಂಡರ್ ಸ್ವಾಪ್ ಫೋಟೋವನ್ನ ಅಪ್ಲೋಡ್ ಮಾಡಿದ್ದಾರೆ. ವೀರೇಂದ್ರ ಸೆಹ್ವಾಗ್, ಹರ್ಭಜನ್ ಸಿಂಗ್, ಸಚಿನ್ ತೆಂಡುಲ್ಕರ್, ರಾಹುಲ್ ದ್ರಾವಿಡ್, ಸೌರವ್ ಗಂಗೂಲಿ, ಯುವರಾಜ್ ಸಿಂಗ್, ಜಹೀರ್ ಖಾನ್ ಗೌತಮ್ ಗಂಭೀರ್ ಮತ್ತು ಆಶಿಶ್ ನೆಹ್ರಾ ಫೋಟೋಗಳನ್ನ ಸ್ತ್ರೀ ರೂಪಕ್ಕೆ ಬದಲಿಸಿರೋ ಫೋಟೋವನ್ನ ತಮ್ಮ ಸೋಷಿಯಲ್ ಮೀಡಿಯಾ ಪೇಜ್ನಲ್ಲಿ ಅಪ್ಲೋಡ್ ಮಾಡಿ ತಮಾಷೆ ಮಾಡಿದ್ದಾರೆ. ಯಾರು ಯಾರ ಜೊತೆ ಡೇಟಿಂಗ್ಗೆ ಹೋಗೋಕೆ ಸಿದ್ದ ಅಂತ ಪ್ರಶ್ನೆ ಮಾಡಿದ್ದಾರೆ.
ಹರ್ಭಜನ್ ಸಿಂಗ್ ಪ್ರಶ್ನೆಗೆ ಉತ್ತರಿಸಿರೋ ಸೌರವ್ ಗಂಗೂಲಿ, ಮಿನುಗೋ ಕನ್ನಡಕ ಧರಿಸಿರೋ ಮಧ್ಯದಲ್ಲಿರೋ ಚೆಲುವೆ ಜೊತೆ ಡೇಟಿಂಗ್ ಹೋಗ್ತೀನಿ ಅಂತ ಉತ್ತರಿಸಿದ್ದಾರೆ. ಅಂದ್ರೆ, ಆ ಚೆಲುವೆ ಯಾರೂ ಅಲ್ಲ, ಸ್ವತಃ ಸೌರವ್ ಗಂಗೂಲಿ.

ಹರ್ಭಜನ್ರ ಈ ಫೋಟೋಗೆ ಉತ್ತರಿಸಿರೋ ಶಿಖರ್ ಧವನ್, ಅಯ್ಯೋ ಭಜ್ಜಿ (ಪಾಜಿ) ನೀವು ಬಾಲಿವುಡ್ ನಟಿ ಶ್ರೀದೇವಿ ಥರ ಕಾಣ್ತೀರಾ ಅಂತ ತಮಾಷೆ ಮಾಡಿದ್ದಾರೆ. ಒಟ್ಟಿನಲ್ಲಿ ಲಾಕ್ಡೌನ್ನಲ್ಲಿರೋ ಕ್ರಿಕೆಟಿಗರಿಗೆ ಸದ್ಯ ಇದೇ ಚರ್ಚಾ ವಿಷ್ಯವಾಗಿದೆ.
You may like

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?















