Featured
ಕ್ರಿಕೆಟ್ ಪ್ಯಾಡ್, ಗ್ಲೌಸ್ ಧರಿಸಿ ಆಟಕ್ಕಿಳಿದ ಕಿಚ್ಚ- ಶೂಟಿಂಗ್ಗೆ ತೆರಳುವ ಮುನ್ನ ಅಭಿನಯ ಚಕ್ರವರ್ತಿಯ ಜಾಲಿ ಮೂಡ್

ಕ್ರಿಕೆಟ್ ಕಾಶಿ ಲಾರ್ಡ್ಸ್ ಮೈದಾನವಾಗಲಿ, ಕರ್ನಾಟಕದ ಕ್ರಿಕೆಟ್ ಹೆಮ್ಮೆ ಚಿನ್ನಸ್ವಾಮಿ ಮೈದಾನದಲ್ಲಾಗಲಿ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕ್ರಿಕೆಟ್ ವಿಚಾರಕ್ಕೆ ಬಂದ್ರೆ ಪ್ರೊಫೆಷನಲ್ ಕ್ರಿಕೆಟರ್ಗಳಿಗೆ ಕಡಿಮೆ ಇಲ್ಲ. ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಮೂಲಕ ಸಿನಿಮಾ ತಾರೆಗಳನ್ನು ಕ್ರಿಕೆಟ್ ಗೆ ಪರಿಚಯಿಸಿದ್ದ ಸುದೀಪ್, ಟಿ10 ಕ್ರಿಕೆಟ್ ಟೂರ್ನಿಯಲ್ಲೂ ಮಿಂಚು ಹರಿಸಿದ್ದರು. ಶ್ರೀಲಂಕಾದ ಕ್ರಿಕೆಟ್ ಲೆಜೆಂಡ್ ತಿಲಕರತ್ನೆ ದಿಲ್ಶಾನ್, ಆಸ್ಟ್ರೇಲಿಯಾದ ಮಾಜಿ ವಿಕೆಟ್ ಕೀಪರ್ ಆ್ಯಡಂ ಗಿಲ್ ಕ್ರಿಷ್ಟ್, ಡೆಲ್ಲಿ ಡ್ಯಾಷರ್ ವೀರೇಂದ್ರ ಸೆಹ್ವಾಗ್ರಂತಹವರನ್ನೇ ಸಿನಿಮಾ ತಾರೆಗಳ ಜೊತೆ ಕ್ರಿಕೆಟ್ ಆಡುವಂತೆ ಪ್ಲಾನ್ ಮಾಡಿದ್ದು ಕಿಚ್ಚ ಸುದೀಪ್. ಕ್ರಿಕೆಟ್ ಅಂದ್ರೆ ಸುದೀಪ್ ಪಾಲಿಗೆ ಸಿನಿಮಾಕ್ಕಿಂತಲೂ ಒಂಚೂರು ಹೆಚ್ಚೇ ಪ್ರೀತಿ.
ಕೊರೊನಾದಿಂದಾಗಿ ಕಳೆದ 3 ತಿಂಗಳಿನಿಂದ ಸಿನಿಮಾ ಶೂಟಿಂಗ್ ಸೇರಿದಂತೆ ತಾರೆಗಳ ಎಲ್ಲಾ ಆ್ಯಕ್ಟಿವಿಟಿ ಬಂದ್ ಆಗಿತ್ತು. ಈಗ ನಿಧಾನವಾಗಿ ಮೊದಲಿನ ಸ್ಥಿತಿಗೆ ಬರ್ತಾ ಇದೆ. ಈ ಮಧ್ಯೆ ಕಿಚ್ಚ ಸುದೀಪ್ ಎಲ್ಲಾ ತಾರೆಗಳಿಗಿಂತ ಮುಂಚೆಯೇ ಕಣಕ್ಕಿಳಿದಿದ್ದಾರೆ. ಅಂದಹಾಗೇ ಸುದೀಪ್ ಈ ಬಾರಿ ಸಿನಿಮಾ ಶೂಟಿಂಗ್ಗೆ ತೆರಳುವ ಮುನ್ನವೇ ಕ್ರಿಕೆಟ್ ನೆಟ್ಸ್ನಲ್ಲಿ ಕಾಣಿಸಿಕೊಂಡಿದ್ದಾರೆ. ಪ್ಯಾಡ್, ಗ್ಲೌಸ್, ಹೆಲ್ಮೆಟ್ ಹಾಕಿಕೊಂಡು ನೆಚ್ಚಿನ ಕ್ರಿಕೆಟ್ನ್ನು ಅಭ್ಯಾಸ ಮಾಡ್ತಿದ್ದಾರೆ.
ಲಾಕ್ ಡೌನ್ ಮುಗಿದ ನಂತ್ರ ಮೊದಲ ಬಾರಿ ಮನೆಯಿಂದ ಹೊರ ಬಂದ ಕಿಚ್ಚ , ಥಣಿಸಂದ್ರದ ಬ್ರಿಜೇಶ್ ಪಟೇಲ್ ಸ್ಟೇಡಿಯಮ್ ನಲ್ಲಿ ಕ್ರಿಕೆಟ್ ಆಡಿ ರಿಲ್ಯಾಕ್ಸ್ ಆದ್ರು. ಲಾಕ್ ಡೌನ್ ನಿಂದ ಮೂರು ತಿಂಗಳು ಮನೆಯಲ್ಲಿಯೇ ಲಾಕ್ ಆಗಿದ್ದ ಸುದೀಪ್, ಶೂಟಿಂಗ್ಗಿಂತ ಮುಂಚೆ ಕ್ರಿಕೆಟ್ ಆಡಿ ರಿಲ್ಯಾಕ್ಸ್ ಆಗಿದ್ದಾರೆ. ಈ ವಾರ ಫ್ಯಾಂಟಮ್ ಶೂಟಿಂಗ್ ಗಾಗಿ ಹೈದ್ರಾಬಾದ್ ಗೆ ತೆರಳಲಿರುವ ಸುದೀಪ್ ಅದಕ್ಕೂ ಮುನ್ನ ತನ್ನ ಸ್ನೇಹಿತರ ಜೊತೆ ಕಿಚ್ಚ, ಜಾಲಿ ಕ್ರಿಕೆಟ್ ಆಡಿ ಖುಷಿಯಾಗಿದ್ದಾರೆ.
You may like
ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!
ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು
ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?
ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?