Featured
ರಾಹುಗ್ರಸ್ತ ಚೂಡಾಮಣಿ ಸೂರ್ಯಗ್ರಹಣ- ಸ್ಪರ್ಶ, ಮೋಕ್ಷ ಯಾವಾಗಾ..? ಎಲ್ಲೆಲ್ಲಿ ಗ್ರಹಣ ಗೋಚರ..? – ಯಾವ ರಾಶಿ, ನಕ್ಷತ್ರಕ್ಕೆ ಲಾಭ-ನಷ್ಟ..?

ರೈಸಿಂಗ್ ಕನ್ನಡ ವೆಬ್:
ಬೆಂಗಳೂರು:
ಶಾರ್ವರಿ ನಾಮ ಸಂವತ್ಸರದ ಜ್ಯೇಷ್ಠ ಕೃಷ್ಣ ಅಮಾವಾಸ್ಯೆ 21-06-2020 ಭಾನುವಾರ, ಮೃಗಶಿರ ಹಾಗೂ ಆರಿದ್ರಾ ನಕ್ಷತ್ರದಲ್ಲಿ, ಮಿಥುನ ರಾಶಿಯಲ್ಲಿ, ಸಿಂಹ ಮತ್ತು ಕನ್ಯಾ ಲಗ್ನಗಳಲ್ಲಿ , ರಾಹುಗ್ರಸ್ತ ಸೂರ್ಯಗ್ರಹಣ ಸಂಭವಿಸುತ್ತದೆ.
- ಗ್ರಹಣ ಸಮಯ : 21/06/2020 ರವಿವಾರ ಸೂರ್ಯೋದಯ ನಂತರ 03 ಗಂಟೆ 19 ನಿಮಿಷಗಳ ಕಾಲ
- ಗ್ರಹಣ ಸ್ಪರ್ಶ ಕಾಲ : ಬೆಳಿಗ್ಗೆ 10-13
- ಗ್ರಹಣ ಮಧ್ಯ ಕಾಲ : ಬೆಳಿಗ್ಗೆ 11-52
- ಗ್ರಹಣ ಮೋಕ್ಷ ಕಾಲ : ಮಧ್ಯಾಹ್ನ 01-32
- ಗ್ರಹಣವು ಭಾರತದಲ್ಲಿ ಗೋಚರಿಸುವುದರಿಂದ ಗ್ರಹಣಾಚರಣೆ ಇರುತ್ತದೆ.

ಜ್ಯೇಷ್ಠ ಮಾಸದ ಕೃಷ್ಣ ಅಮಾವಾಸ್ಯೆ ಯಂದು ರಾಹುಗ್ರಸ್ತ ಚೂಡಾಮಣಿ ಸೂರ್ಯ ಗ್ರಹಣ ಸಂಭವಿಸಲಿದ್ದು, ಸ್ಪರ್ಶ ಕಾಲ 21/06/2020 ಬೆಳಿಗ್ಗೆ 10-13 ರಿಂದ ಪ್ರಾರಂಭವಾಗಿ ಬೆಳಿಗ್ಗೆ 01-32 ಕ್ಕೆ ಮೋಕ್ಷ ಕಾಲವಾಗಿರುತ್ತದೆ.
ಆಹಾರ ಸೇವನೆ ವಿಚಾರ :
20-06-2020 ಶನಿವಾರ ಈ ರಾತ್ರಿ ರಾತ್ರಿ 09-35 ಗಂಟೆಯವರೆಗೂ ಆಹಾರ ಸೇವಿಸಬಹುದು.
ತರ್ಪಣ ವಿಚಾರ :
21-06-2020 ಭಾನುವಾರ ಸೂರ್ಯೋದಯಾದಿ ಗ್ರಹಣ ಸ್ಪರ್ಶ ಕಾಲದಿಂದ ಮಧ್ಯಕಾಲದೊಳಗೆ ಅಂದರೆ ಹಗಲು 10-13 ರಿಂದ 11-52 ಗಂಟೆಯವರೆಗೆ ತರ್ಪಣ ಕಾರ್ಯ ಮಾಡಬಹುದು
ಶ್ರಾದ್ಧ ವಿಚಾರ :
21-06-2020 ರವಿವಾರ ಗ್ರಹಣವು ಅಪರಾಹ್ನ 01:32 ಗಂಟೆಯವರೆಗೆ ನಡೆಯುವುದರಿಂದ, ಆಷಾಢ ಶುಕ್ಲ ಪ್ರಥಮ ಶ್ರಾದ್ಧವನ್ನು ಗ್ರಹಣ ಮೋಕ್ಷ ಕಾಲದ ನಂತರ ನಡೆಸಬಹುದು.
ರಾಶಿಗಳಿಗೆ ಗ್ರಹಣ ಫಲ
❇ ಶುಭ ಫಲ : ಸಿಂಹ, ಕನ್ಯಾ, ಮಕರ, ಮೇಷ
✴ ಮಿಶ್ರ ಫಲ : ತುಲಾ, ಧನಸ್ಸು, ಕುಂಭ, ವೃಷಭ
🛑 ಅಶುಭ ಫಲ : ಮಿಥುನ, ಕಟಕ, ವೃಶ್ಚಿಕ, ಮೀನ
ಪರಿಹಾರ :
” ಮೃಗಶಿರ” ಮತ್ತು ” ಆರಿದ್ರಾ” ನಕ್ಷತ್ರದವರು ಹಾಗೂ “, ಮಿಥುನ ರಾಶಿಯಲ್ಲಿ ಜನಿಸಿದವರು ಹಾಗೂ ಸಿಂಹ ಮತ್ತು ಕನ್ಯಾ ಲಗ್ನದಲ್ಲಿ ಜನಿಸಿದವರು ಅವಶ್ಯವಾಗಿ ಗ್ರಹಣ ಶಾಂತಿಯನ್ನು ಮಾಡಿಸಿಕೊಳ್ಳಲೇಬೇಕು.

ದಾನ :
ಕೆಂಪು ವರ್ಣದ ವಸ್ತ್ರದೊಂದಿಗೆ ಗೋಧಿ ಹಾಗೂ ಕಪ್ಪು ಅಥವಾ ಧೂಮ್ರ (ಬೂದು) ವರ್ಣದ ವಸ್ತ್ರದೊಂದಿಗೆ ಉದ್ದಿನಕಾಳು – ಇವುಗಳನ್ನು ದಕ್ಷಿಣೆ ಸಮೇತವಾಗಿ ದಾನ ಮಾಡಬೇಕು.
ಗ್ರಹಣಕಾಲದಲ್ಲಿ ಏನೇನು ಮಾಡ್ಬೇಕು..?
ಗ್ರಹಣದ ಆರಂಭ ಅಂತ್ಯಗಳಲ್ಲಿ ಸ್ನಾನವನ್ನು ಮಾಡಲೇಬೇಕು.
- ಗ್ರಹಣದ ಆರಂಭದಲ್ಲಿ ಮಾಡುವ ಸ್ನಾನದಿಂದ ಜಪ-ಪಾರಾಯಣ-ದಾನಾದಿಗಳಿಗೆ ಮಾತ್ರ ಅಧಿಕಾರ. ಊಟ, ಉಪಾಹಾರಗಳಿಗಿಲ್ಲ.
- ಸೂರ್ಯ ಗ್ರಹಣದ ಸೂತಕ ವು ಗ್ರಹಣ ಆರಂಭದ ಹನ್ನೆರಡು ಗಂಟೆಗಳ ಮೊದಲು ಆರಂಭವಾಗುತ್ತದೆ. ಗ್ರಹಣ ಮೋಕ್ಷ ಕಾಲದ ನಂತರ ಮಾಡುವ ಸ್ನಾನದ ನಂತರ ಸೂತಕ ಮುಕ್ತಾಯವಾಗುತ್ತದೆ.
- ಗ್ರಹಣ ಕಾಲದಲ್ಲಿ ಯಾವುದೇ ದ್ರವ ಅಹಾರವಾಗಲಿ ಅಥವಾ ಘನ ಆಹಾರವಾಗಲಿ ಸ್ವೀಕರಿಸಬಾರದು.
- ಗ್ರಹಣ ಮೋಕ್ಷ ಕಾಲದ ನಂತರವೇ ಸ್ನಾನ, ಪೂಜೆ ಸಲ್ಲಿಸಿ, ಅಡುಗೆ ಮಾಡಿ, ಊಟ ಮಾಡಬೇಕು. ಗ್ರಹಣಕ್ಕಿಂತ ಮುಂಚೆ ಮಾಡಿಟ್ಟು ಅಥವಾ ಗ್ರಹಣಕಾಲದಲ್ಲಿ ಮಾಡಿಟ್ಟು ತಿನ್ನಬಾರದು. ದೇವಾಲಯ ಅಥವಾ ಸ್ಥಳಗಳಿಗೆ ಪ್ರವೇಶ ಹಾಗೂ ದೇವರ ಮೂರ್ತಿಗಳ ಸ್ಪರ್ಶವನ್ನು ಮಾಡಬಾರದು
- ಗ್ರಹಣ ಮೋಕ್ಷ ಕಾಲದ ನಂತರ ಅಗತ್ಯವಾಗಿ ಸ್ನಾನ ಮಾಡಲೇಬೇಕು. ಪವಿತ್ರ ಗಂಗಾಜಲ ಅಥವಾ ಗೋಮೂತ್ರವನ್ನು ಮನೆಯ ಎಲ್ಲಾ ಭಾಗಗಳಲ್ಲಿಯೂ ಪ್ರೋಕ್ಷಿಸಬೇಕು.
- ಜನನ ಶೌಚವಿರುವವರು, ಮೃತ ಶೌಚವಿರುವವರು ಮತ್ತು ರಜಸ್ವಲೆಯಾದವರೂ ಸಹ ಗ್ರಹಣದ ಸ್ಪರ್ಶಸ್ನಾನ, ಮುಕ್ತಿಸ್ನಾನಗಳನ್ನು ಮಾಡಲೇಬೇಕು. ಆದರೆ, ಅವರು ಜಪ ಪಾರಾಯಣಗಳನ್ನು ಮಾಡಬಾರದು.
- ಗ್ರಹಣದ ಎರಡೂ ಸ್ನಾನಗಳಲ್ಲಿ ಉಟ್ಟ ಬಟ್ಟೆಯಲ್ಲಿಯೇ ಸ್ನಾನ ಮಾಡಬೇಕು.
- ಗ್ರಹಣ ಕಾಲದಲ್ಲಿ ನದಿಗಳಲ್ಲಿ, ಮಹಾನದಿಗಳಲ್ಲಿ ಮಾಡುವ ಸ್ನಾನ ಅತೀ ಶ್ರೇಷ್ಠ. ಸಮುದ್ರ ಸ್ನಾನ ಸರ್ವೋತ್ತಮ.
- ಗ್ರಹಣಕಾಲದಲ್ಲಿ ಬಿಸಿನೀರಿನ ಸ್ನಾನ ಮಾಡಬಾರದು ಎಂದು ಯಮನ ಆದೇಶವಿದೆ. ತೀರ ಅಶಕ್ತರಾದವರು ಮಾತ್ರ ಬಿಸಿನೀರಿನಿಂದ ಸ್ನಾನವನ್ನು ಮಾಡಬೇಕು.
- ಯಾರ ಮನೆಯಲ್ಲಿ ಬಾವಿ ಮುಂತಾದವುಗಳಿಂದ ಗ್ರಹಣದ ನಂತರ ಶುದ್ಧ ನೀರನ್ನು ತೆಗೆದುಕೊಳ್ಳಲು ಸಾಧ್ಯವಿದೆಯೋ ಅಂತಹವರು ಹಾಗೆಯೇ ಮಾಡಬೇಕು. ಯಾರ ಮನೆಯಲ್ಲಿ ನೀರನ್ನು ಹಿಡಿದಿಟ್ಟುಕೊಳ್ಳುವ ಅನಿವಾರ್ಯತೆ ಇದೆ ಅಂತಹವರು ನೀರಿನ ಪಾತ್ರೆಗಳ (ಹಾಲು, ಮೊಸರು, ತುಪ್ಪ ಮತ್ತು ಎಣ್ಣೆಯಲ್ಲಿ ಕರಿದ ಪದಾರ್ಥಗಳು ಇತರೆ) ಮೇಲೆ ದರ್ಭೆಯನ್ನು ಹಾಕಿರಬೇಕು.
- ಗ್ರಹಣ ಆರಂಭದಿಂದ ಅಂತ್ಯದ ಕಾಲದವರೆಗೂ ದೇವರಸ್ಮರಣೆ, ನಮಸ್ಕಾರ, ಜಪ, ಪಾರಾಯಣಗಳನ್ನು ಮಾಡಬೇಕು. ಹೋಮ, ಶ್ರಾದ್ಧ, ಪಾರಾಯಣ, ದಾನಗಳನ್ನು ಮಾಡಬೇಕು.

ಏನು ಫಲ..ಯಾರಿಗೆ ವಿಘ್ನ..?
” ಮೃಗಶಿರ ಮತ್ತು ಆರಿದ್ರಾ” ನಕ್ಷತ್ರದವರೂ, ” ಮಿಥುನ ರಾಶಿಯವರೂ, ” ಸಿಂಹ, ಹಾಗೂ ಕನ್ಯಾ ” ಲಗ್ನಗಳಲ್ಲಿ ಜನಿಸಿದವರೂ ಇಲ್ಲಿ ಕೊಟ್ಟಿರುವ ಶ್ಲೋಕವನ್ನು ಒಂದು ಕಾಗದದ ಮೇಲೆ ಬರೆದು ಗ್ರಹಣ ಮುಗಿಯುವವರೆಗೂ ತಮ್ಮಲ್ಲಿಟ್ಟುಕೊಂಡು, ಗ್ರಹಣ ಮೋಕ್ಷಾ ನಂತರ ಯಥಾಶಕ್ತಿ ದಕ್ಷಿಣೆ ಸಮೇತ ದಾನ ಮಾಡತಕ್ಕದ್ದು.
ಶ್ಲೋಕ :
ಯೋ ಸೌ ವಜ್ರಧರೋ ದೇವಃ ಆದಿತ್ಯಾನಾಂ ಪ್ರಭುರ್ಮತಃ |
ಸೂರ್ಯ ಗ್ರಹೋಪರಾಗೋತ್ಥ ಗ್ರಹಪೀಡಾಂ ವ್ಯಪೋಹತು || 1 ||
ಯೋ ಸೌ ದಂಡಧರೋ ದೇವಃ ಯಮೋ ಮಹಿಷವಾಹನಃ |
ಸೂರ್ಯ ಗ್ರಹೋಪರಾಗೋತ್ಥ ಗ್ರಹಪೀಡಾಂ ವ್ಯಪೋಹತು || 2 ||
ಯೋ ಸೌ ಶೂಲಧರೋ ದೇವಃ ಪಿನಾಕೀ ವೃಷವಾಹನಃ |
ಸೂರ್ಯ ಗ್ರಹೋಪರಾಗೋತ್ಥ ಗ್ರಹಪೀಡಾಂ ವ್ಯಪೋಹತು || 3 ||
ಸರ್ವೇಜನ: ಸುಖಿನೋಭವಂತು
You may like

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?















