Uncategorized
BSNL ಅಧಿಕಾರಿಗಳ ವಿರುದ್ಧ ಸಂಸದರ ಸರ್ಜಿಕಲ್ ಸ್ಟ್ರೈಕ್
ರೈಸಿಂಗ್ ಕನ್ನಡ ವೆಬ್:
ಕಾರವಾರ:
ಸಂಸದರು ಕೆಂಡಾಮಂಡಲ. ಮುಖದಲ್ಲಿ ಅದ್ಯಾವ ರೀತಿಯ ಕೋಪ!,ಅಧಿಕಾರಿಗಳೆಲ್ಲಾ ಕಂಗಾಲು… ಬೆಳಗ್ಗೆ ಒಂಬತ್ತುಘಂಟೆಗೆ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಗೆ ಬಂದ ಸಂಸದರು ರಾತ್ರಿ ಎಂಟು ದಾಟಿದರೂ ಜಿಲ್ಲಾಧಿಕಾರಿ ಕಚೇರಿ ಬಿಟ್ಟು ತೆರಳದೇ ಕುಳಿತಲ್ಲೇ ಕುಳಿತರು. ಕೆಲಸ ಆಗುವ ವರೆಗೂ ಧರಣಿ ಕೂರ್ತೀನಿ, ಇಂದು ಎಲ್ಲಿಗೂ ಹೋಗೊಲ್ಲ ಎಂದು ಪಟ್ಟು ಹಿಡಿದು ಕುಳಿತು ಜಡ್ಡು ಹಿಡಿದ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡು ಕುಳಿತಲ್ಲೇ ಕುಳಿತಿದ್ರು ಉತ್ತರ ಕನ್ನಡ ಜಿಲ್ಲೆಯ ಸಂಸದ ಅನಂತಕುಮಾರ್ ಹೆಗಡೆ.
ಹೌದು ಸಂಸದರ ಈ ಕೋಪಕ್ಕೆ ಕಾರಣವೂ ಇದೆ. ಕಾರವಾರದಲ್ಲಿ ಜಿಲ್ಲಾ ಪ್ರಗತಿ ಪರಿಶೀಲನೆ ಸಭೆ ನಡೆಸಿದ ಸಂಸದರು ಮಧ್ಯಾನ್ಹದ ವೇಳೆ ಜಿಲ್ಲೆಯಲ್ಲಿ 231 ಗ್ರಾಮಪಂಚಾಯ್ತಿಗಳಿಗೆ ಉಚಿತ BSNLವೈಫೈ ನೀಡಿರುವ ಕುರಿತು ಮಾಹಿತಿ ಪಡೆದರು. ಈ ವೇಳೆ ಜಿಲ್ಲೆಯಲ್ಲಿ ಎಲ್ಲಾ ಗ್ರಾಮಪಂಚಾಯ್ತಿಗಳಿಗೂ ವೈಫೈ ನೀಡಲಾಗಿದ್ದು ಕಾರ್ಯನಿರ್ವಹಿಸುತ್ತಿದೆ ಎಂದು BSNLನ GM R.Vಜನ್ನು ದಾಖಲೆಗಳನ್ನು ನೀಡಿದರು.
ಆದರೇ ಜಿಲ್ಲೆಯಲ್ಲಿ ಉಚಿತ ವೈಫೈ ನೀಡಿರುವುದರಲ್ಲಿ ಕೇವಲ 148 ಗ್ರಾಮಪಂಚಾಯತ್‌ಗಳಲ್ಲಿ ಮಾತ್ರ ಕಾರ್ಯ ನಿರ್ವಹಿಸುತಿದ್ರೆ ಉಳಿದ 62 ಗ್ರಾಮ ಪಂಚಾಯತ್‌ಗಳಲ್ಲಿ ಈ ಸೇವೆ ಕಾರ್ಯನಿರ್ವಹಿಸುತ್ತಿರಲಿಲ್ಲ. ಹಲವು ಮೊಬೈಲ್ ಟವರ್ ಸಿದ್ದವಾಗಿದ್ದು ಯಾವುದೂ ಕೂಡ ಕಾರ್ಯನಿರ್ವಹಿಸದಿದ್ದರೂ BSNL ಅಧಿಕಾರಿಗಳು ಎಲ್ಲವೂ ಸುಸ್ಥಿತಿಯಲ್ಲಿದೆ ಎಂದು ಸುಳ್ಳುದಾಖಲೆ ತೋರಿಸಿದ್ದರು. ಈ ವಿಷಯ ಕುರಿತು ಗರಂ ಆದ ಸಂಸದ ಅನಂತಕುಮಾರ್ ಹೆಗಡೆ ಸಂಜೆ ಆರು ಘಂಟೆಗೆ ಮುಗಿಯಬೇಕಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಇಂದೇ ಎಲ್ಲಾ ಸರಿಯಾಗಬೇಕು ಎಂದು ಪಟ್ಟು ಹಿಡಿದರು. ಇಷ್ಟಕ್ಕೇ ಸುಮ್ಮನಾಗದ ಸಂಸದರು ಇಂದೇ ಎಲ್ಲವೂ ಸರಿಯಾಗಬೇಕು ಅಲ್ಲಿವರೆಗೂ ಕಚೇರಿ ಬಿಟ್ಟು ನಾನೂ ತೆರಳುವುದಿಲ್ಲ ನೀವೂ ತೆರಳುವಂತಿಲ್ಲ ಎಂದು ಪಟ್ಟು ಹಿಡಿದು ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲೇ ಕುಳಿತುಕೊಂಡರು.
” BSNL,GSNL,CSA ತಮ್ಮ ಆಂತರಿಕ ಜಗಳದಿಂದ ಗ್ರಾಮಪಂಚಾಯತ್‌ಗಳಿಗೆ ವೈ.ಫೈ ನೀಡದೆ ಇಡೀ ಗ್ರಾಮಪಂಚಾಯ್ತಿ ಕಾರ್ಯಗಳು ,ಚಟುವಟಿಕೆಗಳು ನಿಂತುಹೋಗುವಂತಾಗಿದೆ. ಎಲ್ಲಾ ಸಮಸ್ಯೆ ಬಗೆಹರಿಯಬೇಕು. ಅಲ್ಲಿಯವರೆಗೂ ಅಧಿಕಾರಿಗಳನ್ನು ಸಹ ಬಿಡುವುದಿಲ್ಲ”
– ಅನಂತ್ ಕುಮಾರ್ ಹೆಗಡೆ, ಸಂಸದರು, ಉತ್ತರಕನ್ನಡ
ಇನ್ನು ಅಧಿಕಾರಿಗಳು ಸಂಸದರ ಈ ಧಿಡೀರ್ ನಿರ್ಧಾರದಿಂದ ತಲೆಕೆಡಿಸಿಕೊಂಡಿದ್ದಾರೆ. ಮಂಗಳವಾರದ ತನಕ ಗಡುವು ನೀಡಿರುವ ಸಂಸದರು ಎಲ್ಲಾ ಸಮಸ್ಯೆಗಳು ಬಗೆಹರಿಯದಿದ್ದರೆ ತಾನು ಸುಮ್ಮನೆ ಕೂರುವುದಿಲ್ಲ ಎಂದು ವಾರ್ನಿಂಗ್ ಕೊಟ್ಟು ಅಧಿಕಾರಿಗಳಿಗೆ ಮನೆಗೆ ತೆರಳಲು ಅನುವುಮಾಡಿಕೊಟ್ಟರು.
You may like
ಕಲಬುರ್ಗಿ ಎಂಪಿ ಕಾಂಗ್ರೆಸ್ ಟಿಕೆಟ್ ಯಾರಿಗೆ?
ಯಾಮಾರಿದ್ರೆ ಎಲ್ಲರಿಗೂ ಬರುತ್ತೆ ಕೊರೊನಾ..! ಮಧ್ಯಪ್ರದೇಶದ ಮುಖ್ಯಮಂತ್ರಿಗೆ ಕೋವಿಡ್19 ಪಾಸಿಟಿವ್..!
ವಿಚಿತ್ರವಾದರೂ ಸತ್ಯ..! ಸಮೋಸ ತಂದ ಸಾವು..! ಹೀಗೂ ಉಂಟೆ…!
ಜಡಿಮಳೆಯಲ್ಲೂ ಪೊಲೀಸರ ಬೆವರಿಳಿಸಿದ ಭೂಪ- ಕಳ್ಳ-ಪೊಲೀಸ್ ಆಟದಲ್ಲಿ ಗೆದ್ದ ಪೊಲೀಸರು..!
ವಿಚಿತ್ರ.. ಅಚ್ಚರಿಯಾದರೂ ಸತ್ಯ..! ವ್ಯಕ್ತಿಯ ತಲೆ ಮೇಲೆ ಕೊಂಬು ಬಂದಿದೆ..!
ಸಸಿಕಾಂತ್ ಸೆಂಥಿಲ್ ಪಾಕಿಸ್ತಾನಕ್ಕೆ ಹೋಗಿ : ಅನಂತ ಕುಮಾರ್ ಹೆಗಡೆ ಹೀಗೆ ಹೇಳಿದ್ದು ಯಾಕೆ..?