Featured
ಬೆಲ್ಲದ ಕರ್ಜಿಕಾಯಿ ತಯಾರಿಸುವ ವಿಧಾನ


ಬೇಕಾಗುವ ಸಾಮಗ್ರಿಗಳು :- ಚಿರೋಟಿ ರವೆ-2 ಕಪ್ , ಮೈದಾ ಹಿಟ್ಟು-1 ಟೇಬಲ್ ಚಮಚ, ತುಪ್ಪ-1 ಟೀ ಚಮಚ, ಉಪ್ಪು-1 ಚಿಟಿಕೆ, ಹುರಿಗಡಲೆ-ಕಾಲು ಕೆಜಿ, ಬೆಲ್ಲ-1 ಕಪ್, ಬಿಳಿ ಎಳ್ಳು-2 ಚಮಚ, ಗಸಗಸೆ-1 ಚಮಚ, ಒಣ ಕೊಬ್ಬರಿ ತುರಿ -2 ಕಪ್, ಏಲಕ್ಕಿ ಪುಡಿ- ಸ್ವಲ್ಪ, ಕರಿಯಲು ಎಣ್ಣೆ .

ತಯಾರಿಸುವ ವಿಧಾನ :- ಚಿರೋಟಿ ರವೆಗೆ ಮೈದಾ, ಉಪ್ಪು ಮತ್ತು ಬಿಸಿ ಮಾಡಿದ ಎಣ್ಣೆ ಅಥವಾ ತುಪ್ಪ ಹಾಕಿ ಸ್ವಲ್ಪ ಸ್ವಲ್ಪ ನೀರು ಸೇರಿಸಿ ಗಟ್ಟಿಯಾಗಿ ಕಲಸಿ ನಾದಬೇಕು. ಹುರಿಗಡಲೆಯನ್ನು ಮಿಕ್ಸಿಯಲ್ಲಿ ಪುಡಿ ಮಾಡಿಕೊಳ್ಳಬೇಕು. ಅದಕ್ಕೆ ಬೆಲ್ಲವನ್ನು ಕೈಯಿಂದ ಸ್ವಲ್ಪ ಪುಡಿ ಮಾಡಿ ಬೆರೆಸಿ ನಂತರ ಹುರಿದ ಎಳ್ಳು ,ಗಸಗಸೆ,ಕೊಬ್ಬರಿ ತುರಿ ಹಾಗೂ ಏಲಕ್ಕಿ ಪುಡಿ ಹಾಕಿ ಬೆರೆಸಿಡಿ. ನಾದಿಟ್ಟ ಹಿಟ್ಟಿನ ಉಂಡೆಗಳನ್ನು ಪೂರಿ ಗಾತ್ರದ ಎಲೆಗಳಂತೆ ಲಟ್ಟಿಸಿ ಅದರೊಳಗೆ ಒಂದು ಚಮಚ ಹೂರಣ ಹಾಕಿ ಮಡಚಿ ಕಾದ ಎಣ್ಣೆಯಲ್ಲಿ ಕರಿದು ಸವಿಯಿರಿ.
You may like

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?















