Connect with us

Featured

RRR ಸಿನಿಮಾ 2021ರ ಜನವರಿ 8ಕ್ಕೆ ಬಿಡುಗಡೆ : KGF ಜೊತೆ ಕ್ಲಾಷ್​ ಆಗುತ್ತಾ..?

ಬೆಂಗಳೂರು :

ಇಡೀ ಭಾರತೀಯ ಸಿನಿಮಾ ರಂಗವೇ ಎದುರು ನೋಡ್ತಿರೋ ಮೆಗಾ ಮೂವಿ ಬಿಡುಗಡೆಗೆ ದಿನಾಂಕ ಫಿಕ್ಸ್​ ಆಗಿದೆ. ಬಾಹುಬಲಿ ನಿರ್ದೇಶಕ ಎಸ್​​ ಎಸ್​ ರಾಜಮೌಳಿ ನಿರ್ದೇಶನದ ಬಹು ನಿರೀಕ್ಷಿತ ಸಿನಿಮಾ ಆರ್​ಆರ್​ಆರ್​, ಮುಂದಿನ ವರ್ಷ ಜನವರಿ 8ರಂದು ಬಿಡುಗಡೆ ಆಗಲಿದೆ. ಇನ್ನೂ ಒಂದು ವರ್ಷ ಇರುವಾಗಲೇ, ಬಿಡುಗಡೆ ದಿನಾಂಕವನ್ನ ಘೋಷಣೆ ಮಾಡಿದೆ ಆರ್​ಆರ್​ಆರ್​ ಸಿನಿಮಾ ತಂಡ. ಮೆಗಾ ಪವರ್ ಸ್ಟಾರ್​ ರಾಮ್​ ಚರಣ್​, ಜ್ಯೂನಿಯರ್​ ಎನ್​ಟಿಆರ್ ಹಾಗೂ ಬಾಲಿವುಡ್​ ಸೂಪರ್ ಸ್ಟಾರ್​ ಅಜಯ್​ ದೇವಗಾನ್​ ಈ ಸಿನಿಮಾದಲ್ಲಿ ನಟಿಸ್ತಿದ್ದಾರೆ. ಈ ಮೂಲಕ ಆರ್​ಆರ್​ಆರ್​ ಸಿನಿಮಾ ಬಿಡುಗಡೆ ಯಾವಾಗ ಅನ್ಕೊಂಡಿದ್ದ ಕೋಟ್ಯಂತರ ಅಭಿಮಾನಿಗಳ ಕಾತರಕ್ಕೆ ಉತ್ತರ ಸಿಕ್ಕಿದೆ. ಈ ಮುಂಚೆ 2020 ಜುಲೈ 30ರಂದು ಸಿನಿಮಾ ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು.

ಆರ್​ಆರ್​ ಆರ್ ಸಿನಿಮಾ ತಡವಾಗಿ ಬಿಡುಗಡೆ ಆಗ್ತಿರೋದಕ್ಕೆ ಸಿನಿಮಾ ತಂಡ ಸ್ಪಷ್ಟನೆ ನೀಡಿದೆ. ನೀವು ನಮ್ಮ ಮೇಲೆ ತೋರಿಸ್ತಿರೋ ಪ್ರೀತಿ, ಅಭಿಮಾನಕ್ಕೆ ಧನ್ಯವಾದ. ನಿಮ್ಮ ಪ್ರೀತಿ, ಅಭಿಮಾನದಿಂದಾಗಿಯೇ ನಾವು ಸೆಟ್​ನಲ್ಲಿ ಎಷ್ಟೇ ಕಷ್ಟ ಪಟ್ಟರು, ಅದನ್ನ ಮರೆತು ಹೋಗ್ತಿದ್ದೇವೆ. ಇದುವರೆಗೆ ಯಾವ ಸಿನಿಮಾದಲ್ಲೂ ತೋರಿಸದ ದೃಶ್ಯಕಾವ್ಯವನ್ನ ನೀವು ಆರ್​ಆರ್​ಆರ್ ಸಿನಿಮಾದಲ್ಲಿ ನೋಡ್ತೀರಿ. ಇದಕ್ಕಾಗಿಯೇ ನಾವು ಹಗಲು, ರಾತ್ರಿ ಶ್ರಮ ಪಡ್ತಿದ್ದೇವೆ. ವಿಶ್ವಾದ್ಯಂತ ಸಿನಿಮಾವನ್ನ ದೊಡ್ಡ ಪ್ರಮಾಣದಲ್ಲಿ ಬಿಡುಗಡೆ ಮಾಡಬೇಕು. ಹೀಗಾಗಿಯೇ ಸಿನಿಮಾ ಕ್ವಾಲಿಟಿ ಚೆನ್ನಾಗಿರಬೇಕು. ಹೆಚ್ಚಿನ ಸಮಯ ತೆಗೆದುಕೊಂಡು ಮತ್ತಷ್ಟು ಅದ್ಭುತವಾದ ಸಿನಿಮಾವನ್ನ ನಿಮ್ಮ ಮುಂದೆ ತರುತ್ತೇವೆ. ಸಂಕ್ರಾಂತಿ ಹಬ್ಬಕ್ಕೆ 2021ರ ಜನವರಿ 8ರಂದು ಸಿನಿಮಾ ಬಿಡುಗಡೆ ಮಾಡ್ತೀವಿ ಎಂದು ಆರ್​ಆರ್​ಆರ್ ಸಿನಿಮಾ ತಂಡ ಹೇಳಿದೆ.

ಆರ್​ಆರ್​ಆರ್ ಸಿನಿಮಾದಲ್ಲಿ ವಿದೇಶಿ ನಟಿ ಲಿವಿಯಾ ಮಾರಿಸ್​​ ಎನ್​ಟಿಆರ್​ಗೆ ಜೋಡಿಯಾಗಿದ್ರೆ, ರಾಮ್​ಚರಣ್​ಗೆ ಆಲಿಯಾ ಭಟ್​ ಜೋಡಿ. ವಿಶೇಷ ಹಾಗೂ ವಿಭಿನ್ನ ಪಾತ್ರದಲ್ಲಿ ಬಾಲಿವುಡ್​ ನಟ ಅಜಯ್​ ದೇವಗಾನ್​ ನಟಿಸ್ತಿದ್ದಾರೆ. ಅಜಯ್​ ದೇವಗಾನ್​ಗೆ ಜೋಡಿ ಯಾರು ಅನ್ನೋದು ಇನ್ನೂ ಕನ್ಫರ್ಮ್​ ಆಗಿಲ್ಲ. ಇಷ್ಟೇ ಅಲ್ಲದೆ, ಸದ್ಯಕ್ಕೆ ಸಿನಿಮಾಗೆ ವರ್ಕಿಂಗ್ ಟೈಟಲ್​ ಮಾತ್ರ ಇಡಲಾಗಿದೆ. ಇನ್ನೂ, ಸಿನಿಮಾಗೆ ಪೂರ್ತಿ ಹೆಸರು ಕೂಡ ಇಟ್ಟಿಲ್ಲ. ಈಗಾಗಲೇ ಅಭಿಮಾನಿಗಳ ಹಲವು ರೀತಿಯ ಟೈಟಲ್​ಗಳನ್ನ ಸಿನಿಮಾ ತಂಡಕ್ಕೆ ಸಲಹೆ ನೀಡಿದ್ದಾರೆ. ಯಾವುದನ್ನ ಫೈನಲ್ ಮಾಡ್ತಾರೆ ಅನ್ನೋದು ಕಾದುನೋಡಬೇಕಿದೆ.

Advertisement

ಇನ್ನು, ಈ ಸಿನಿಮಾ ಸ್ವಾತಂತ್ರ್ಯ ಪೂರ್ವದಲ್ಲಿ ನಡೆಯುವ ಕಥೆ. ಸ್ವಾತಂತ್ರ್ಯ ಹೋರಾಟಗಾರರ ಕಥೆ. ಅಲ್ಲೂರಿ ಸೀತಾರಾಮರಾಜು ಹಾಗೂ ಕೊಮರಂಭೀಮ್​ ಅವರ ರೋಚಕ ಕಥೆ ಇದರಲ್ಲಿ ಇರಲಿದೆ. ಬ್ರೀಟಿಷರ ವಿರುದ್ಧ ಹೋರಾಟ ಮಾಡಿದ ವೀರರ ಕಥೆ ಇದಾಗಿದೆ. ಇದಕ್ಕೆ ಕೊಂಚ ಮಸಾಲೆ ಸೇರಿಸಿ, ಸೀತಾರಾಮರಾಜು ಹಾಗೂ ಕೋಮರಂಭೀಮ್​ ಒಂದಾದ್ರೆ, ಹೇಗಿರುತ್ತೆ..? ಅವರಿಬ್ಬರ ನಡುವೆ ಫೈಟ್​ ನಡೆದಿತ್ತಾ..? ಈ ರೀತಿಯಾ ಕುತೂಲಕಾರಿ ಅಂಶಗಳು ಸಿನಿಮಾದಲ್ಲಿ ಇರುತ್ತೆ. ನಿರ್ದೇಶಕ ರಾಜಮೌಳಿ ಈ ವಿಚಾರವನ್ನ ಈಗಾಗಲೇ ಹೇಳಿದ್ದಾರೆ.

ಒಟ್ಟಿನಲ್ಲಿ ಆರ್​ಆರ್​ಆರ್​ ಸಿನಿಮಾ ಮುಂದಿನ ವರ್ಷ ತೆರೆ ಕಾಣಲಿದ್ದು, ಈಗಾಗಲೇ ಪ್ರೇಕ್ಷಕರ ನಿರೀಕ್ಷೆಯನ್ನ ಹೆಚ್ಚಿಸಿದೆ. ಆರ್​ಆರ್ಆರ್​ ಸಿನಿಮಾ ಕನ್ನಡದಲ್ಲೂ ಬಿಡುಗಡೆ ಆಗ್ತಿರೋದು ವಿಶೇಷ.

ಬೆಂಗಳೂರು2 years ago

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಬೆಂಗಳೂರು2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಟಾಪ್ ನ್ಯೂಸ್2 years ago

ಸ್ಯಾಂಡಲ್ವುಡ್​ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಬೆಂಗಳೂರು2 years ago

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಬೆಂಗಳೂರು2 years ago

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ಬೆಂಗಳೂರು2 years ago

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?

ಬೆಂಗಳೂರು2 years ago

ರಾಮೋಜಿ ಫಿಲಂ ಸಿಟಿ ಸಂಸ್ಥಾಪಕ ರಾಮೋಜಿ ರಾವ್ ನಿಧನ

ಬೆಂಗಳೂರು2 years ago

ಚಂದನ್ ಶೆಟ್ಟಿ – ನಿವೇದಿತಾ ಗೌಡ ದಾಂಪತ್ಯ ಬಿರುಕು: ಕೋರ್ಟ್​ನಲ್ಲಿ ಆಗಿದ್ದೇನು..?

ಬೆಂಗಳೂರು2 years ago

ಕೈ ಕೈ ಹಿಡಿದು ಕೋರ್ಟ್ ಗೆ ಬಂದ ಡಿವೋರ್ಸ್ ಜೋಡಿ

ಬೆಂಗಳೂರು2 years ago

ನ್ಯಾಯಾದೀಶರ ಆದೇಶಕ್ಕಾಗಿ ಕಾಯುತ್ತಿರುವ ಬಿಗ್​ಬಾಸ್ ಜೋಡಿ

Featured5 years ago

ಮಂಗಳವಾರವೇ ಡಿಸಿಎಂ, ಸಚಿವರ ಪಟ್ಟಿ ರಿಲೀಸ್​ : ಹೈಕಮಾಂಡ್​​ ಲಿಸ್ಟ್​ ಬಿಡುಗಡೆ ಮಾಡುತ್ತೆ : ಸಿಎಂ ಬೊಮ್ಮಾಯಿ

Featured7 years ago

ಸೆಕ್ಸ್​ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್​ ಟ್ರೈ ಮಾಡಿ..

Featured5 years ago

ಕೇಂದ್ರ ಸಚಿವರ ಜೊತೆ ಪ್ರಧಾನಿ ಮೋದಿ ಭೇಟಿಯಾದ ಸಿಎಂ ಬೊಮ್ಮಾಯಿ : ಮೋದಿ ಹೇಳಿದ್ದೇನು.?

Featured3 years ago

ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಡಿಸಿಎಂ ಆಪ್ತ ಕಾರ್ಯದರ್ಶಿ ಡಾ ರಾಜೇಂದ್ರ ಪ್ರಸಾದ್

ಜ್ಯೋತಿಷ್ಯ7 years ago

ಕೆಲವರಿಗೆ ಚಿತ್ರ-ವಿಚಿತ್ರವಾದ ಕನಸುಗಳು ಬರುತ್ತವೆ

Ayurveda
Featured6 years ago

ಲೈಂಗಿಕ ಪ್ರಾಬ್ಲಂಗೆ ಮನೆಯಲ್ಲೇ ಮದ್ದು – ಖರ್ಚಿಲ್ಲದೆ ಸಮಸ್ಯೆ ಪರಿಹಾರ..!

Featured7 years ago

ಮಹಿಳೆಯರು ಎಷ್ಟೊತ್ತು ಸೆಕ್ಸ್​ ಮಾಡಿದರೆ ಖುಷಿಯಾಗ್ತಾರೆ..? ಸ್ತ್ರೀಯರ ಊಹೆ ಹೇಗಿರುತ್ತೆ..?

Featured2 years ago

Rameshwaram Cafe | ರಾಮೇಶ್ವರಂ ಕೆಫೆನಲ್ಲಿ ಆಗಿದ್ದೇನು.?

Featured7 years ago

ನಾಲಿಗೆ ಹುಣ್ಣು (ಪೋಟು) ಸಮಸ್ಯೆಗೆ ಪರಿಹಾರ ಹೇಗೆ ಗೊತ್ತಾ..? ನಿಮಗೂ ಕಷ್ಟ ಆಗುತ್ತಿದೆಯಾ..?

Featured3 years ago

ಅಗಲಿದ ಗಣ್ಯರಿಗೆ ಬಸವರಾಜ ಬೊಮ್ಮಾಯಿ ಸಂತಾಪ
ವ್ಯಕ್ತಿಯ ನಡೆ ನುಡಿಯಿಂದ ನಾಯಕತ್ವ ದೊರೆಯುತ್ತದೆ: ಬಸವರಾಜ ಬೊಮ್ಮಾಯಿ