Featured
ಮದ್ಯಪಾನದಿಂದ ಆರೋಗ್ಯಕ್ಕೆ ಹಾನಿಕಾರಕ..! ಆದ್ರೂ, ಕುಡಿತದಿಂದ ಏನಾದ್ರೂ ಪ್ರಯೋಜನ ಇದೆಯಾ..?

ರೈಸಿಂಗ್ ಕನ್ನಡ : ನಾಲ್ಕು ಜನ ಗೆಳೆಯರು ಸೇರಿದರೆ ಸಾಕು. ಬಿಯರ್ ಬಾಟಲ್ ಹಿಡಿಯೋದು ಈ ಕಾಲದಲ್ಲಿ ಕಾಮನ್ ಆಗಿದೆ. ತುಂಬಾ ಜನ ಮದ್ಯಪಾನ ಒಳ್ಳೇದು ಅನ್ನೋ ಮಂದಿಯೂ ಇದ್ದಾರೆ. ಸ್ವಲ್ಪ ಸ್ವಲ್ಪ ಕುಡಿದ್ರೆ, ಆರೋಗ್ಯಕ್ಕೆ ಒಳ್ಳೇದು. ಡಾಕ್ಟರ್ ಕೂಡ ಅದನ್ನ ಸಜೆಸ್ಟ್ ಮಾಡ್ತಾರೆ. ಬೇಕಾದ್ರೆ ಕೇಳಿ ಅಂತ ಪುಗಸಟ್ಟೆ ಸಲಹೆ ಕೋಡುವವರ ಸಂಖ್ಯೆನೂ ಕಡಿಮೆ ಏನಿಲ್ಲ. ಆದ್ರೆ, ಇಷ್ಟಕ್ಕೂ ಇದರಲ್ಲಿ ಯಾವುದು ನಿಜ..? ಬನ್ನಿ ತಿಳಿದುಕೊಳ್ಳೋಣ.
ಮದ್ಯಪಾನ ಆರೋಗ್ಯಕ್ಕೆ ಹಾನಿಕಾರ. ಇದು ಜಗಜ್ಜಾಹೀರಾಗಿರೋ ಸತ್ಯ. ಆದ್ರೂ, ಚಿಕ್ಕ ಪ್ರಮಾಣದಲ್ಲಿ ಕುಡಿದ್ರೆ, ಹಾನಿಕಾರ ಅಲ್ವಂತೆ. ಹೀಗಂತಲೇ ಬಹಳಷ್ಟು ಮಂದಿ ಇವತ್ತು ಕುಡಿತದ ದಾಸರಾಗಿದ್ದಾರೆ. ಬಾಟಲ್ ಮೇಲೆಯೇ ಇದು ಆರೋಗ್ಯಕ್ಕೆ ಹಾನಿಕಾರಕ ಅಂತ ಹಾಕಿದ್ರೂ, ಅದು ಒಳ್ಳೇದು ಅನ್ಕೊಂಡ್ರೆ ಅವರ ಕರ್ಮ.
ನಮ್ಮ ದೇಶದಲ್ಲಿ 2010 ರಿಂದ 2017 ರವರೆಗೆ ಮದ್ಯಪಾನಿಗಳ ಸಂಖ್ಯೆ ಶೇಕಡಾ 38 ರಷ್ಟು ಏರಿಕೆಯಾಗಿದೆ. 2014ರಲ್ಲಿ ವರ್ಷಕ್ಕೆ 4.3 ಲೀಟರ್ ನಷ್ಟು ಮದ್ಯ ಕುಡಿಯುದ್ದವರು, ಈಗ ವರ್ಷಕ್ಕೆ 6 ಲೀಟರ್ನಷ್ಟು ಮದ್ಯವನ್ನ ಸರಾಸರಿ ಕುಡಿಯುತ್ತಿದ್ದಾರೆ. ಇದರಲ್ಲಿ ಹೆಣ್ಣು ಮಕ್ಕಳು ಕೂಡ ಕುಡಿಯೋವ್ರ ಸಂಖ್ಯೆ ಜಾಸ್ತಿ ಆಗ್ತಿದೆ ಅನ್ನೋದು ಆಘಾತಕಾರಿ.
ಆದ್ರೆ, ತುಂಬಾ ಜನ ಕುಡಿಯದೇ ಇರುವವರು ಇದ್ದಾರೆ. ನಗರದಲ್ಲಿ ಇರುವವರು ತುಂಬಾ ಜನರು ಕುಡಿಯಲ್ವಂತೆ. ಮದ್ಯಪಾನ ಸೇವಿಸುತ್ತಾ ಹೋದ್ರೆ, ಮೊದಲು ಲಿವರ್ ನಾಶವಾಗುತ್ತೆ. ನಮ್ಮ ದೇಹದಲ್ಲಿನ ಎಲ್ಲಾ ಭಾಗಗಳಲ್ಲಿ ಲಿವರ್ ತುಂಬಾನೇ ಮುಖ್ಯ. ಲಿವರ್ ಸರಿಯಾಗಿ ಕೆಲಸ ಮಾಡದೇ ಹೋದ್ರೆ, ಲೈಫ್ ಮುಗಿದಂಗೆ. ಸೋ, ಇನ್ಮುಂದೆ ಎಣ್ಣೆ ಕುಡಿಯೋ ಮುನ್ನ ಹುಷಾರ್..
You may like

ನಾನೇನು ಮಾಡಿಲ್ಲ ಅಂತಿದ್ದ ದರ್ಶನ್ , ಸಾಕ್ಷಿ ನೋಡ್ತಿದ್ದಂತೆ ಸೈಲೆಂಟ್ಆಗಿ ಬಿಟ್ರಾ ಚಾಲೆಂಜಿಂಗ್ ಸ್ಟಾರ್..?

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಸ್ಯಾಂಡಲ್ವುಡ್ಗೆ ಶಾಕಿಂಗ್ ನ್ಯೂಸ್ .! ಚಾಲೆಂಜಿಂಗ್ ಸ್ಟಾರ್ ದರ್ಶನ್ ಅರೆಸ್ಟ್..!

ಗ್ಯಾರಂಟಿ ಶಕ್ತಿ ಯೋಜನೆ ಎಫೆಕ್ಟ್: ಟಿಕೆಟ್ ರೇಟ್ ದುಪ್ಪಟ್ಟು

ಚಂದನ್ – ನಿವೇದಿತಾ ಜೋಡಿಯನ್ನು ಒಂದು ಮಾಡ್ತಾರಾ ನಟ ಧ್ರುವ ಸರ್ಜಾ.?

ವಿಚ್ಛೇದನ ಪಡೆದು ವಿದೇಶಕ್ಕೆ ಹರ್ತಿದ್ದಾರಾ ನಿವೇದಿತಾ ಗೌಡ..? ಚಂದನ್ ಶೆಟ್ಟಿ ಹೇಳಿದ್ದೇನು..?















